ಲಗೇಜ್ ಸಮೇತ ಮೆಟ್ರೋದಲ್ಲಿ ಪ್ರಯಾಣಿಸುವವರೆ ಗಮನಿಸಿ.. BMRCL​ ನಡೆ ವಿರುದ್ಧ ಪ್ರಯಾಣಿಕ ಬೇಸರ​..!

ಮೆಟ್ರೋ ಪ್ರಯಾಣಿಕರೇ ದಯವಿಟ್ಟು ಗಮನಿಸಿ. ಇನ್ಮುಂದೆ ಮೆಟ್ರೋದಲ್ಲಿ ಪ್ರಯಾಣ ಮಾಡ್ತಿದ್ದೀರಾ ಅಂದ್ರೆ ಈ ಒಂದು ಅಂಶ ಚೆನ್ನಾಗಿ ನೆನಪಿರಲಿ. ಅದರಲ್ಲೂ ಏನಾದರೂ ಲಗೇಜ್ ಸಮೇತ ಪ್ರಯಾಣ ಮಾಡೋರು ಇದ್ದರೇ ಈ ಸ್ಟೋರಿ ಓದಲೇಬೇಕು.

author-image
Veenashree Gangani
namma metro(5)
Advertisment

ಬೆಂಗಳೂರು: ಮೆಟ್ರೋ ಪ್ರಯಾಣಿಕರೇ ದಯವಿಟ್ಟು ಗಮನಿಸಿ. ಇನ್ಮುಂದೆ ಮೆಟ್ರೋದಲ್ಲಿ ಪ್ರಯಾಣ ಮಾಡ್ತಿದ್ದೀರಾ ಅಂದ್ರೆ ಈ ಒಂದು ಅಂಶ ಚೆನ್ನಾಗಿ ನೆನಪಿರಲಿ. ಅದರಲ್ಲೂ ಏನಾದರೂ ಲಗೇಜ್ ಸಮೇತ ಪ್ರಯಾಣ ಮಾಡೋರು ಇದ್ದರೇ ಈ ಸ್ಟೋರಿ ಓದಲೇಬೇಕು.

ಇದನ್ನೂ ಓದಿ: ಪ್ರೇಯಸಿ ಗರ್ಭಿಣಿ, ಮದುವೆ ಆಗು ಎಂದಿದ್ದಕ್ಕೆ ಸುಟ್ಟೇ ಬಿಟ್ಟ ಪ್ರೇಮಿ

namma metro(7)

‘ನಮ್ಮ ಮೆಟ್ರೋ’ ಸಿಟಿ ಜನರ ಮೊದಲ ಸಲೆಕ್ಷನ್​. ಬಿಎಂಟಿಸಿ ಬಸ್ಸಿನಲ್ಲೊ ಜನ ಜಾಸ್ತಿ, ಆಟೋ ಕ್ಯಾಬ್​ಗಳಲ್ಲಿ ದುಡ್ಡು ಜಾಸ್ತಿ. ಸ್ವಂತ ವಾಹನದಲ್ಲಿ ಹೋದ್ರೆ ಟ್ರಾಫಿಕ್​ ಟೆನ್ಷನ್​ ಅಂದಾಗ ಬಹಳಷ್ಟು ಜನರ ಮೊದಲ ಆಯ್ಕೆಯೇ ನಮ್ಮ ಮೆಟ್ರೋ. ಟಿಕೆಟ್​ ದರ ಹೆಚ್ಚಿದ್ರೂ ಅನಿವಾರ್ಯ ಅಂತ ಜನ ಓಡಾಡ್ತಾರೆ, ಆದ್ರೀಗ ಲಗೇಜ್​​​​ಗೂ ಪ್ರತ್ಯೇಕ ಟಿಕೆಟ್ ಕೊಡಬೇಕಾ ಅನ್ನೋ ವಿಚಾರ ಚರ್ಚೆಗೆ ಕಾರಣ ಆಗಿದೆ. ಹೌದು, ಕೇಳೋಕೆ ಶಾಕ್ ಅನಿಸಿದ್ರೂ ಇದು ನಿಜ. ಇಲ್ಲೊಬ್ಬ ವ್ಯಕ್ತಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿ ಬಿಎಂಆರ್​ಸಿಎಲ್​ ವಿರುದ್ಧ ಕಿಡಿಕಾರಿದ್ದಾನೆ. ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಅಂತ ಪೋಸ್ಟ್​ ಮಾಡಿದ್ದಾನೆ. 

ಈ ಬ್ಯಾಗ್‌ಗಾಗಿ ಬೆಂಗಳೂರು ಮೆಟ್ರೋದಲ್ಲಿ ನಾನು 30 ರೂಪಾಯಿ ಪಾವತಿಸಬೇಕಾಗಿ ಬಂದಿದ್ದು, ನನಗೆ ನಿಜಕ್ಕೂ ತುಂಬಾ ಆಶ್ಚರ್ಯ ಆಗಿದೆ. ಬೆಂಗಳೂರು ಮೆಟ್ರೋ ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ಅದರಲ್ಲಿ ಇದು ಮತ್ತಷ್ಟು ಹೊರೆ ಹೆಚ್ಚಿಸ್ತಿದೆ. ಜನರು ಮೆಟ್ರೋ ಪ್ರವೇಶಿಸೋದನ್ನ ಬಿಎಂಆರ್​ಸಿಎಲ್​ ಅಧಿಕಾರಿಗಳೇ ಹೇಗೆ ಹೊರಗಡೆ ಇಡ್ತಿದ್ದಾರೆ ಅನ್ನೋದನ್ನ ಇದೇ ಉತ್ತಮ ಉದಾಹರಣೆ. 

-ಅವಿನಾಶ್, ಮೆಟ್ರೋ ಪ್ರಯಾಣಿಕ

namma metro(6)

ಅವಿನಾಶ್​ ಹಾಕಿರೋ ಇದೇ ಪೋಸ್ಟ್​ ಈಗ ಚರ್ಚೆಯ ವಿಷಯವಾಗಿದ್ದು, ಲಗೇಜ್​ ನಿಯಮ ಗೊತ್ತಿಲ್ಲದವರು ಪರ-ವಿರೋಧ ಚರ್ಚೆ ಮಾಡ್ತಿದ್ದಾರೆ. ಮೆಟ್ರೋ ಟಿಕೆಟ್ ರೇಟ್ ಮಾಡಿ ಜನರನ್ನ ವಸೂಲಿ ಮಾಡ್ತಿದೆ, ಈಗ ಲಗೇಜ್​​ಗೂ ಟಿಕೆಟಾ ಅಂತ ಟೀಕೆ ಮಾಡ್ತಿದ್ದಾರೆ. ಬಟ್, ನಿಜ ಏನಪ್ಪಾ ಅಂದ್ರೆ ಮೆಟ್ರೋದಲ್ಲಿ ಲಗೇಜ್​​​ಗೆ ಪ್ರತ್ಯೇಕ ಟಿಕೆಟ್ ಇದೆ. ಒಬ್ಬ ವ್ಯಕ್ತಿ 60cm ಉದ್ದ 45cm ಅಗಲ 25cm ಎತ್ತರದವರೆಗೂ ಲಗೇಜ್​ ಹೊತ್ತು ಹೋಗಬಹುದು. ಇದನ್ನ ಮೀರಿ ಲಗೇಜ್​​​ ಹೊತ್ತುಕೊಂಡು ಹೋದ್ರೆ 30 ರೂಪಾಯಿ ಟಿಕೆಟ್ ಕೊಡಬೇಕಿದೆ. ನಮ್ಮ ಮೆಟ್ರೋ ಟಿಕೆಟ್ ರೇಟ್ ಏರಿಸಿದ್ದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಈ ನಡುವೆ ಲಗೇಜ್​​ ದರವೂ ಚರ್ಚೆಗೆ ಬಂದಿದ್ದು, ಜನ ಗೊಂದಲಕ್ಕೆ ಬಿದ್ದಿರೋದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Namma metro
Advertisment