/newsfirstlive-kannada/media/media_files/2025/09/03/vij_bhaimanagowda-2025-09-03-12-41-29.jpg)
ವಿಜಯಪುರ: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಭಯದ ವಾತಾವರಣ ಮೂಡಿಸಿದೆ. ರೌಡಿಶೀಟರ್ ಭೀಮನಗೌಡ ಬಿರಾದಾರ್ ಮೇಲೆ 3-4 ಮುಸುಕುದಾರಿಗಳು ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ. ಈ ಘಟನೆಯು ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ.
ಭೀಮಾತೀರದ ಮಹಾದೇವ ಬೈರಗೊಂಡ ಪರಮಾಪ್ತ ಹಾಗೂ ಬಲಗೈ ಬಂಟನಾಗಿರುವ ಭೀಮನಗೌಡ ಬಿರಾದಾರ್ ಮೇಲೆ 3 ಸುತ್ತಿನ ಗುಂಡಿನ ದಾಳಿ ಮಾಡಲಾಗಿದೆ. ಇದರಿಂದ ಭೀಮನಗೌಡನ ತಲೆ ಹಾಗೂ ಎದೆಗೆ ಗುಂಡುಗಳು ತಗುಲಿವೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: RMC ಯಾರ್ಡ್ ಮಹಿಳೆ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್.. ಕ್ಲೀನ್ ಚಿಟ್
ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್ನಲ್ಲಿ ರೌಡಿಶೀಟರ್ ಭೀಮನಗೌಡ ಕಟಿಂಗ್ ಮಾಡಿಸುತ್ತಿದ್ದನು. ಈ ವೇಳೆ ಮೂರು-ನಾಲ್ಕು ಜನ, ಗುರುತು ಸಿಗದಂತೆ ಕಾಣಲು ಮುಸುಕು ಹಾಕಿಕೊಂಡು ಎಂಟ್ರಿಕೊಟ್ಟಿದ್ದಾರೆ. ಕಟಿಂಗ್ ಮಾಡುವವನ ಕಣ್ಣಿಗೆ ಖಾರದ ಪುಡಿ ಎರಚಿ ಕೂಡಲೇ ಭೀಮನಗೌಡ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಭೀಮನಗೌಡ ಗಂಭೀರವಾಗಿ ಗಾಯಗೊಂಡಿದ್ದಾನೆ.
ದಾಳಿ ಮಾಡಿರುವ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಗುಂಡಿನ ದಾಳಿ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ಧಂತೆ ಸ್ಥಳಕ್ಕೆ ಚಡಚಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಬೆಂಡೆಗುಂಬಳ್ ಹಾಗೂ ಇನ್ನಿತರ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ