/newsfirstlive-kannada/media/media_files/2025/09/15/bdr_girl-2025-09-15-15-49-30.jpg)
ಬೀದರ್​: ಮೂರನೇ ಮಹಡಿಯಿಂದ 7 ವರ್ಷದ ಮಗುವನ್ನ ನೂಕಿ ಮಲತಾಯಿ ಜೀವ ತೆಗೆದಿರುವ ಘಟನೆ ನಗರದ ಆದರ್ಶ ಕಾಲೋನಿಯಲ್ಲಿ ಆಗಸ್ಟ್​ 27ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಸಂಬಂಧ ಮಲತಾಯಿ ರಾಧಾಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೃತ ಬಾಲಕಿ ಶಾನವಿ, ತಾಯಿ ಖಾಯಿಲೆಗೆ ತುತ್ತಾಗಿ ಕಳೆದ 6 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಳು. ಇದಾದ ಬಳಿಕ ಮೃತ ಶಾನವಿ ತಂದೆ ಸಿದ್ಧಾಂತ, 2023ರಲ್ಲಿ ರಾಧಾ ಜೊತೆ 2ನೇ ವಿವಾಹವಾಗಿದ್ದರು. ಸಿದ್ಧಾಂತ ಹಾಗೂ ರಾಧಾಗೆ ಎರಡು ಅವಳಿ ಮಕ್ಕಳು ಹುಟ್ಟಿದ ಬಳಿಕ ಸಿದ್ಧಾಂತರ ಮೊದಲನೇ ಮಗಳ ತಮ್ಮಗೆ ಹೊರೆಯಾಗ್ತಾಳೆಂದು 2ನೇ ಪತ್ನಿ ಜೀವ ತೆಗೆದಿದ್ದಾಳೆ.
ಇದನ್ನೂ ಓದಿ:200 ರೂಪಾಯಿಗೆ ಸಿನಿಮಾ ಟಿಕೆಟ್​, ಬಿಗ್ ಬಜೆಟ್ ಮೂವಿಗಳಿಗೆ ನಷ್ಟ.. ಮುಂದಿನ ಪ್ಲಾನ್ ಏನು?
/filters:format(webp)/newsfirstlive-kannada/media/media_files/2025/09/15/bdr_girl_1-2025-09-15-15-49-43.jpg)
ಬಾಲಕಿ ಜೊತೆ ಮಲತಾಯಿ ಸಂಶಯಾಸ್ಪದ ರೀತಿ ಓಡಾಟ
ಆಗಸ್ಟ್ 27ನೇ ತಾರೀಖು ಶಾನವಿ ಮೃತಪಟ್ಟಾಗ, ಮಹಡಿಯಿಂದ ಆಯತಪ್ಪಿ ಬಿದ್ದು ಮಗಳು ಜೀವ ಬಿಟ್ಟಿದ್ದಾಳೆ ಎಂದು ಕುಟುಂಬಸ್ಥರು ಅಂದುಕೊಂಡಿದ್ದಾರೆ. ಆದ್ರೆ ಪಕ್ಕದ ಮನೆಯವರು ಸಿಸಿಟಿವಿ ದೃಶ್ಯ ಕಳುಹಿಸಿದ ಬಳಿಕ ಮಲತಾಯಿ ಕೃತ್ಯ ಬೆಳಕಿಗೆ ಬಂದಿದೆ. ರಾಧಾ ಬಾಲಕಿ ಜೊತೆ ಟೇರಸ್ ಮೇಲೆ ಸಂಶಯಾಸ್ಪದ ರೀತಿ ಓಡಾಡುವ ದೃಶ ಸೆರೆಯಾಗಿದೆ.
ಈ ಸಿಟಿಟಿವಿ ದೃಶ್ಯವನ್ನ ಸೆಪ್ಟೆಂಬರ್ 12ನೇ ತಾರೀಕು ಬಾಲಕಿ ತಂದೆ ಸಿದ್ಧಾಂತ ವಾಟ್ಸಾಪ್‌ಗೆ ಪಕ್ಕದ ಮನೆ ಮಾಲೀಕ ಕಳುಹಿಸಿದ್ದಾರೆ. ಮೇಲ್ಮಹಡಿಯಲ್ಲಿ ಖುರ್ಚಿ ಇಟ್ಟು ಅದರ ಮೇಲೆ ಬುಟ್ಟಿ ಉಲ್ಟಾ ಇಟ್ಟು ಶಾನವಿಯನ್ನ ಕೂರಿಸಿರೊದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಮೃತ ಬಾಲಕಿ ಅಜ್ಜಿ, ರಾಧಾ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us