/newsfirstlive-kannada/media/media_files/2025/10/26/bidar_wife_husband-2025-10-26-13-58-33.jpg)
ಬೀದರ್: ಸಾವಿನಲ್ಲೂ ಒಂದಾದ ವೃದ್ಧ ದಂಪತಿ. ಹೆಂಡತಿ ಮೃತಪಟ್ಟಿದ್ದ ಮಾಹಿತಿ ತಿಳಿದ ಬೆನ್ನಲ್ಲೇ ಗಂಡ ಕೂಡ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ನಡೆದಿದೆ.
ಮುಧೋಳ (ಬಿ) ಗ್ರಾಮದ ಹಿರಿಯ ದಂಪತಿ ಗುಂಡಪ್ಪ ಹೋಡಗೆ (85), ಲಕ್ಷ್ಮಿಬಾಯಿ ಹೋಡಗೆ (83) ನಿಧನ. ಆರೇಳು ದಶಕಗಳ ಒಂದಾಗಿ ಸಂಸಾರ ನಡೆಸಿದ್ದ ಈ ಹಿರಿ ಜೀವಗಳಲ್ಲಿ ಮೊದಲು ಹೆಂಡತಿ ಲಕ್ಷ್ಮಿಬಾಯಿ ಕೊನೆಯುಸಿರೆಳೆದಿದ್ದಾರೆ. ಇದರ ಬೆನ್ನಲ್ಲೇ ಪತ್ನಿಯ ನಿಧನದ ಸುದ್ದಿ ತಿಳಿದು ಪತಿ ಗುಂಡಪ್ಪ ಹೋಡಗೆ ಕೂಡ ಸ್ವರ್ಗಸ್ಥರಾಗಿದ್ದಾರೆ.
ಇದನ್ನೂ ಓದಿ: 4ನೇ ತರಗತಿ ವಿದ್ಯಾರ್ಥಿಗೆ ಕಚ್ಚಿದ್ದ ಹಾವು.. ಮಗನ ಉಳಿಸಲು ಬೇವಿನ ಎಲೆ, ಸಗಣಿಯಲ್ಲಿ 3 ದಿನ ಮುಚ್ಚಿಟ್ಟ ತಂದೆ-ತಾಯಿ
/filters:format(webp)/newsfirstlive-kannada/media/media_files/2025/10/26/bidar_wife_husband_1-2025-10-26-13-58-43.jpg)
ಈ ದಂಪತಿ ನಾಲ್ವರು ಪುತ್ರಿಯರು, ಮೂವರು ಪುತ್ರರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಒಂದೇ ದಿನ ಇಹಲೋಕ ತ್ಯಜಿಸಿದ ದಂಪತಿಯ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಇಡೀ ಗ್ರಾಮವೇ ಕಣ್ಣೀರು ಹಾಕಿದೆ. ಇಬ್ಬರು ಒಂದೇ ದಿನ ಜೀವ ಬಿಟ್ಟ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗಿತ್ತು.
ಹಲವು ವರ್ಷಗಳು ಒಂದಾಗಿ ಜೀವನ ನಡೆಸಿದ್ದ ಹಿರಿಯ ದಂಪತಿ ಒಂದೇ ದಿನ ಸಾವನ್ನಪ್ಪಿದ್ದಕ್ಕೆ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಇಬ್ಬರ ಮೃತದೇಹಗಳನ್ನು ಅಕ್ಕ-ಪಕ್ಕದಲ್ಲೇ ಇರಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us