99 ಲಕ್ಷ ರೂಪಾಯಿ ಸಾಲ ಪಡೆದು ವಂಚನೆ ಆರೋಪ; ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ FIR

ಬೀದರ್​ನ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ FIR ದಾಖಲಾಗಿದೆ. ಶಾಸಕ ಸಲಗರ್ 2023ರ ಚುನಾವಣೆ ಸಂದರ್ಭದಲ್ಲಿ ಉದ್ಯಮಿ ಸಂಜು ಸುಗುರೆಯಿಂದ 99 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ

author-image
Ganesh Kerekuli
Sharanu salagar
Advertisment

ಬೀದರ್​ನ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ FIR ದಾಖಲಾಗಿದೆ. ಶಾಸಕ ಸಲಗರ್ 2023ರ ಚುನಾವಣೆ ಸಂದರ್ಭದಲ್ಲಿ ಉದ್ಯಮಿ ಸಂಜು ಸುಗುರೆಯಿಂದ 99 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ. 

ಸಾಲ ಪಡೆಯುವ ವೇಳೆ ಶ್ಯೂರಿಟಿಗಾಗಿ ಖಾಲಿ ಚೆಕ್ ಹಾಗೂ ಲೆಟರ್ ಹೆಡ್ ಮೇಲೆ ಸೈನ್ ಮಾಡಿ ಕೊಟಿದ್ದರಂತೆ. ಆದರೆ ಕೊಟ್ಟ ಸಾಲವನ್ನ ಎಷ್ಟೇ ಬಾರಿ ಹಣ ಕೇಳಿದರೂ ಶಾಸಕ ಸಲಗರ್ ಮರುಪಾವತಿಸಿಲ್ಲ. ನಂತರ 14-9-2025 ರಂದು ಹಿರಿಯರ ಸಮ್ಮುಖದಲ್ಲಿ ಹಣ ನೀಡುವುದಾಗಿ ಒಪ್ಪಿ ಚೆಕ್ ನೀಡಿದ್ದರು. ಆದ್ರೆ ಚೆಕ್ ಬ್ಯಾಂಕಿಗೆ ಹಾಕಲು ಖಾತ್ರಿಪಡಿಸಲು ಹೋದ ವೇಳೆ ಶಾಸಕ ಶರಣು ಸಲಗರ್ ಗಲಾಟೆ ಮಾಡಿ ಧಮ್ಕಿ ಹಾಕಿದ್ದಾರೆ. 

ಕರ್ನಾಟಕ ಬ್ಯಾಂಕ್​ನಲ್ಲಿದ್ದ ಶಾಸಕರ ಖಾತೆ ಮುಚ್ಚಲ್ಪಟ್ಟಿದೆ ಎಂದು ಮಾಹಿತಿ ಸಿಕ್ಕಿದೆ. ಈ ಹಿನ್ನಲೆ ಉದ್ಯಮಿ ಸಂಜು ಸುಗುರೆ ಶಾಸಕರ ವಿರುದ್ಧ ಬೆಂಗಳೂರಿನ ACJM ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಸದ್ಯ ಕೋರ್ಟ್ ಸೂಚನೆ ಮೇರೆಗೆ ಬಸವಕಲ್ಯಾಣ ನಗರ ಠಾಣೆಯಲ್ಲಿ  FIR ದಾಖಲಾಗಿದೆ. ಹಣ ವಾಪಸ್ ಕೊಡಿ ಎಂದು ಮನೆಗೆ ಹೋದರೆ ಅವಾಚ್ಯ ಶಬ್ದಗಳಿಂದ ಬೈದು ಧಮ್ಕಿ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. 

ಇದನ್ನೂ ಓದಿ: ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆ ಕಾನೂನು -ಸಿದ್ದರಾಮಯ್ಯ ಸರ್ಕಾರ ಮಹತ್ವದ ನಿರ್ಧಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Sharanu Salgar
Advertisment