/newsfirstlive-kannada/media/media_files/2025/12/29/siddaramaiah-2025-12-29-07-23-05.jpg)
ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣ ಬೆನ್ನಲ್ಲೇ ಅದರ ವಿರುದ್ಧ ಹೊಸ ಕಾನೂನು ಜಾರಿಗೆ ತರಬೇಕು ಎಂಬ ಆಗ್ರಹ ಜೋರಾಗಿದೆ. ಇದೀಗ ಮರ್ಯಾದಾ ಹತ್ಯೆ ತಡೆ ಕಾನೂನು ತರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನ್ನಾಡಿದ್ದಾರೆ.
ಒಂದಷ್ಟು ಮಂದಿ ಮರ್ಯಾದೆ ಹತ್ಯೆ ತಡೆ ಕಾಯ್ದೆ ಜಾರಿಗೆ ಒತ್ತಾಯಿಸಿದ್ದಾರೆ. ಹುಬ್ಬಳ್ಳಿ, ಚಿತ್ರದುರ್ಗದಲ್ಲಿ ಅಂತಹ ಪ್ರಕಣಗಳು ನಡೆದಿವೆ. ಕಾಯ್ದೆ ತರೋದು ಮುಖ್ಯ ಅಲ್ಲ, ಅನುಷ್ಠಾನಕ್ಕೆ ತರಬೇಕು.
ಆ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಮರ್ಯಾದೆ ಹತ್ಯೆ ವಿರೋಧಿ ಕಾಯ್ದೆ ಜಾರಿಗೆ ತರೋದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ಮೀಸಲು
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತು ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚೆ ಮಾಡಿ ಅಮೇಲೆ ತೀರ್ಮಾನ ಮಾಡ್ತೀವಿ. ಈಗಲೇ ನಾನು ಹೇಳೋಕೆ ಆಗಲ್ಲ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು.
ಬೇರೆ ಯಾರಿಗೆ ಕೆಲಸ ಸಿಕ್ಕಿದ್ರೂ ಕನ್ನಡ ಮಾತಾಡಬೇಕು. ಕನ್ನಡಕ್ಕೆ ಅನ್ಯಾಯ ಆದಾಗ ಒಟ್ಟಾಗಿ ಹೋರಾಟ ಮಾಡೋಣ. ಕನ್ನಡಿಗರು ಯಾವುದಕ್ಕೂ ಕಮ್ಮಿ ಇಲ್ಲ. ಕನ್ನಡ ಭಾಷೆ, ನೆಲ, ಗಡಿ, ವಿಚಾರದಲ್ಲಿ ಒಟ್ಟಾಗಿ ಹೋರಾಟ ಮಾಡೋಣ ಎಂದಿದ್ದಾರೆ.
ಇದನ್ನೂ ಓದಿ: ಬೇಕಿದ್ದಿದ್ದು O+ ಬ್ಲಡ್, ಕೊಟ್ಟಿದ್ದು ಎ ಪ್ಲಸ್​; ಆಸ್ಪತ್ರೆ ಯಡವಟ್ಟಿಗೆ ರೋಗಿ ಗಂಭೀರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us