/newsfirstlive-kannada/media/media_files/2025/10/28/bdr-krs-party-2025-10-28-10-41-45.jpg)
ಬೀದರ್​: ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಜಿಲ್ಲೆಯ ಔರಾದ್ ತಾಲೂಕಿನ ಬಲ್ಲೂರ (ಜೆ) ಗ್ರಾಮದಲ್ಲಿ ದೇಣಿಗೆ ಸಂಗ್ರಹ ಮಾಡಿದ್ದಾರೆ. ಶಿಕ್ಷಣ ಇಲಾಖೆ ಶಿಥಿಲಾವಸ್ಥೆ ಕೋಣೆ, ಶೌಚಾಲಯ ಸೇರಿ ಮೂಲಭೂತ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ದೇಣಿಗೆ ಮೂಲಕ 1,036 ರೂಪಾಯಿ ಸಂಗ್ರಹಿಸಿದ್ದಾರೆ.
1 ರಿಂದ 7ನೇ ತರಗತಿವರೆಗೆ ಇರುವ ಶಾಲೆಯ 8 ಕೋಣೆಗಳಲ್ಲಿ 4 ಕೋಣೆಗಳು ಶಿಥಿಲಾವಸ್ಥೆಯಾಗಿವೆ. ಮೂಲಭೂತ ಸೌಕರ್ಯ ಇಲ್ಲದಿರುವದರಂದ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತ ಬರುತ್ತಿದೆ. ಹೀಗಾಗಿ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದ ಕೆಆರ್‌ಎಸ್ ಕಾರ್ಯಕರ್ತರು, ಗ್ರಾಮದ ಓಣಿಗಳಲ್ಲಿ ತಿರುಗಾಡಿ ಜನರಿಂದ ದುಡ್ಡು ಸಂಗ್ರಹ ಮಾಡಿದ್ದಾರೆ.
ಮೂಲಭೂತ ಸೌಕರ್ಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ಕಡಿಮೆ ಆಗುತ್ತಿರುವುದಕ್ಕೆ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. 3 ವರ್ಷಗಳ ಹಿಂದೆ 100ಕ್ಕೂ ಅಧಿಕ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 19ಕ್ಕೆ ಇಳಿಕೆಯಾಗಿದೆ. 3 ವರ್ಷಗಳಿಂದ ಈ ಕುರಿತು ಪಿಡಿಓ, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಕೆಆರ್​ಎಸ್ ಪಕ್ಷದ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ಮನವಿ ಸಲ್ಲಿಸಿದರೂ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಈ ದೇಣಿಗೆ ಸಂಗ್ರಹಿಸಲಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us