/newsfirstlive-kannada/media/media_files/2025/08/24/bidara-accident-2025-08-24-18-47-40.jpg)
ಬೀದರ್: ಹಾಲಿನ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ತಾಯಿ-ಮಗಳು ಸ್ಥಳದಲ್ಲೇ ಜೀವ ಕಳೆದುಕೊಂಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಉಮಾಪುರ ಗ್ರಾಮದಲ್ಲಿ ನಡೆದಿದೆ.
ಬಸವಕಲ್ಯಾಣ ತಾಲೂಕಿನ ಬೋಸಗಾ ಗ್ರಾಮದ ತಾಯಿ-ಮಗಳು ಪ್ರಾಣಬಿಟ್ಟಿದ್ದಾರೆ. ತಾಯಿ ತುಕ್ಕಮ್ಮಾ ಜಾಧವ್ (55), ಮಗಳು ಸುರೇಖಾ (30) ಮೃತ ದುರ್ದೈವಿಗಳು. ಮಹಾರಾಷ್ಟ್ರದ ಕಾಸರ್ ಬಾಲಕುಂದಾ ಗ್ರಾಮಕ್ಕೆ ಹೋಗಿ ಉಮಾಪುರ ಮಾರ್ಗವಾಗಿ ಬರುವ ವೇಳೆ ದುರ್ಘಟನೆ ನಡೆದಿದೆ.
ಬೈಕ್ ಎದುರಿಗೆ ವೇಗವಾಗಿ ಬಂದ ಹಾಲಿನ ವಾಹನ ಬೈಕ್‌ಗೆ ಡಿಕ್ಕಿಯಾಗಿ ಅನಾಹುತ ಸಂಭವಿಸಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಅಪ್ಪಿತಪ್ಪಿ ಈ ತಪ್ಪುಗಳು ಮಾಡಿದ್ರೆ ವಜಾ ಗ್ಯಾರಂಟಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ