/newsfirstlive-kannada/media/media_files/2025/08/24/bmtc-bus1-2025-08-24-14-11-04.jpg)
ದಿನನಿತ್ಯ ಸಿಲಿಕಾನ್ ಸಿಟಿಯಲ್ಲಿ ಲಕ್ಷಾಂತರ ಪ್ರಯಾಣಿಕರು ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಾರೆ. ಆದ್ರೆ, ಈಗಂತೂ ಪ್ರಯಾಣಿಕರ ಜೀವಕ್ಕೆ ಗ್ಯಾರಂಟಿ ಇಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಬಿಎಂಟಿಸಿ ಸರಣಿ ಅಪಘಾತಗಳಿಂದ ಆಗುತ್ತಿರುವುದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ನಡುವೆ ಕೆಲ ಪ್ರಯಾಣಿಕರು ಬಸ್ಸಿನಲ್ಲಿ ಸಂಚಾರ ಮಾಡೋದಕ್ಕೆ ಆತಂಕ ಪಡುವಂತ ಸ್ಥಿತಿ ನಿರ್ಮಾಣಗೊಂಡಿದೆ.
ಇದನ್ನೂ ಓದಿ:ಫುಲ್ ಗ್ಲಾಮರ್ ಲುಕ್ನಲ್ಲಿ ದರ್ಶನ್.. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್
ಅದರಲ್ಲೂ ಎಲೆಕ್ಟ್ರಿಕ್ ಬಸ್ಗಳಲ್ಲಿ ಪ್ರಯಾಣಿಸುವವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುತ್ತಿದ್ದಾರೆ. ಯಾವ ಸಮಯದಲ್ಲಿ ಏನಾಗುತ್ತೆ ಅಂತ ಹೇಳೋದಕ್ಕೆ ಆಗುತ್ತಿಲ್ಲ. ಕೇವಲ ಬಸ್ನಲ್ಲಿ ಪ್ರಯಾಣಿಸುವವರಷ್ಟೇ ಅಲ್ಲದೇ, ಪಾದಚಾರಿಗಳು ಕೂಡ ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಮುಖ್ಯ ಕಾರಣವೇ ಬಿಎಂಟಿಸಿ ಚಾಲಕರ ಅತಿವೇಗದ ಚಾಲನೆ. ಬೆಂಗಳೂರಿಗರ ಪಾಲಿಗೆ ಬಿಎಂಟಿಸಿ ಬಸ್ಗಳು ‘ಯಮ’ನಂತೆ ಕಾಣುತ್ತಿದೆ. ಒಂದು ತಿಂಗಳ ಅಂತರದಲ್ಲಿ ಬಿಎಂಟಿಸಿ ಅಪಘಾತದಲ್ಲಿ ಆರು ಮಂದಿ ಜೀವಬಿಟ್ಟಿದ್ದಾರೆ.
ಹೌದು, ದಿನೇ ದಿನೇ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಕಿಲ್ಲರ್ ಎಂದೇ ಅಪಖ್ಯಾತಿಗೆ ಒಳಗಾಗಿರೋ ಬಿಎಂಟಿಸಿ, ಸುರಕ್ಷತಾ ಚಾಲನೆಯತ್ತ ಗಮನವನ್ನು ಹರಿಸದ ಚಾಲಕರನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಖಡಕ್ ಸಂದೇಶ ರವಾನಿಸಿದೆ. ಚಾಲಕರು ಚಾಲನೆ ವೇಳೆ ಫೋನ್ ಬಳಸಿದರೆ 15 ದಿನ ಅಮಾನತು, ಘಟಕದಿಂದ ವರ್ಗಾವಣೆ ಶಿಕ್ಷೆ ನೀಡಲಾಗುವುದು. ಈ ಬಗ್ಗೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್ ರೆಡ್ಡಿ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಆರ್ ಅವರ ಅಧಕ್ಷತೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
ಇದನ್ನೂ ಓದಿ: ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬ ಆಚರಿಸಿದ ಬಿಗ್ಬಾಸ್ ಖ್ಯಾತಿಯ ಧನರಾಜ್ ಆಚಾರ್ ದಂಪತಿ
ಶಿಕ್ಷೆ ಏನು..?
- ಮೊದಲು ಮಾರಣಾಂತಿಕ ಅಪಘಾತಕ್ಕೆ ಕಾರಣವಾಗುವ ಚಾಲಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಬೇಕು. ಜೊತೆಗೆ ವೇತನ ಹೆಚ್ಚಳ ಕಡಿತಗೊಳಿಸುವುದು.
- ಅಮಾನತು ಅವಧಿ ಮುಗಿದ ಬಳಿಕ ಅಪಘಾತಕ್ಕೆ ಕಾರಣವಾದ ಹಾಗೂ ಹಗೆ ಸಾಧಿಸುವ ಮುಂದಾದರೇ ಅವರನ್ನು ವಿಶೇಷ ತರಬೇತಿ ಪಡೆದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.
- ಇಷ್ಟಾದರೂ ಮತ್ತೆ ಚಾಲನೆಯತ್ತ ಗಮನ ಹರಿಸದೆ ಇದ್ದರೆ ಎರಡನೇ ಬಾರಿಗೆ ಮಾರಣಾಂತಿಕ ಅಪಘಾತವೆಸಗಿರುವುದು ಕಂಡು ಬಂದರೆ, ಅಂತಹ ಚಾಲಕರನ್ನು ಸೇವೆಯಿಂದಲೇ ವಜಾಗೊಳಿಸಲಾಗುವುದು.
- ಕರ್ತವ್ಯದ ವೇಳೆ ಫೋನ್ ಬಳಕೆ ಮಾಡುವುದು ಗೊತ್ತಾದರೇ ಅಂತಹ ಚಾಲಕರಿಗೆ 15 ದಿನಗಳು ಅಮಾನತು ಹಾಗೂ ಘಟಕ ವರ್ಗಾವಣೆ ಮಾಡಲಾಗುವುದು.
- ಚಾಲಕರಿಗೆ ಮದ್ಯಪಾನ ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ಖಚಿತವಾದರೇ ನೇರವಾಗಿ ಅವರನ್ನು ಅಮಾನತು ಮಾಡಲು ನಿರ್ಧರಿಸಲಾಗಿದೆ.
ಚಾಲಕರಿಗೆ ನೀಡಿದ ಸೂಚನೆಗಳು ಏನು..?
- ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು
- ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು
- ನಿಯಮಗಳನ್ನು ಪಾಲಿಸುವ ಮೂಲಕ ಅನಾನುಕೂಲತೆ ತಪ್ಪಿಸುವುದು
- ಬಸ್ನ ಬ್ರೇಕ್, ಹೆಡ್ ಲೈಟ್, ವೈಪರ್ಗಳು ಸುಸ್ಥಿತಿಯಲ್ಲಿ ಇರುವಂತೆ ಕ್ರಮ ವಹಿಸಿಬೇಕು
- ರಸ್ತೆ ಉಬ್ಬು ಹಾಗೂ ಗುಂಡಿಗಳು ಇದ್ದಲ್ಲಿ ನಿಧಾನವಾಗಿ ಚಾಲನೆ ಮಾಡಬೇಕು
- ಇಳಿಜಾರು, ತಿರುವುಗಳಲ್ಲಿ ಎಚ್ಚರಿಕೆಯಿಂದ ಬ್ರೇಕ್ ಒತ್ತುವುದು, ಇಂಡಿಕೇಟರ್ ಹಾಗೂ ಪಾರ್ಕಿಂಗ್ ಲೈಟ್ ಉಪಯೋಗಿಸಬೇಕು
- ರಾತ್ರಿ ವೇಳೆ ಸೂಕ್ತ ಎಚ್ಚರಿಕೆ ವಹಿಸಿ, ಸಂಜ್ಞೆಗಳಿಲ್ಲದೆ ನಿಂತ ವಾಹನಗಳ ಬಗ್ಗೆ ಎಚ್ಚರಿಕೆ ವಹಿಸಬೇಕು
- ಚಾಲನೆ ವೇಳೆ ಫೋನ್ ಬಳಸುವಂತಿಲ್ಲ
- ನಿಗದಿತ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹತ್ತುವಾಗ ಮತ್ತು ಇಳಿದ ನಂತರ ಬಾಗಿಲು ಮುಚ್ಚಬೇಕು
- ರಸ್ತೆ ಮಧ್ಯೆ, ಸಿಗ್ನಲ್ಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಅಥವಾ ಇಳಿಸುವುದು ನಿಷೇಧಿಸಲಾಗಿದೆ
- ಶಾಲೆ, ಆಸ್ಪತ್ರೆ, ತಿರುವುಮ ಏರು ರಸ್ತೆ ಹಾಗೂ ಜನರು ಇರುವ ಸ್ಥಳದಲ್ಲಿ ಎಚ್ಚರಿಕೆಯಿಂದ ಬಸ್ ಚಾಲನೆ ಮಾಡಬೇಕು
- ಮಳೆ, ಗಾಳಿ ಸಮಯದಲ್ಲಿ ವಾಹನವನ್ನು ನಿಗದಿತ ವೇಗದಲ್ಲಿ ಎಚ್ಚರಿಕೆಯಿಂದ ಚಲಾಯಿಸುವುದು.
- ಏಕಮುಖ (ಒನ್ ವೇ) ರಸ್ತೆಯಲ್ಲಿ ಸುರಕ್ಷಿತೆಯಿಂದ ಚಾಲನೆ ಮಾಡುವುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ