/newsfirstlive-kannada/media/media_files/2026/02/08/bidar-case-2026-02-08-10-00-29.jpg)
ಬೀದರ್: 11 ತಿಂಗಳ ಮಗುವನ್ನು ಅನಾಥ ಮಾಡಿ ಗೃಹಿಣಿ ಸಾವಿಗೆ ಶರಣಾಗಿದ್ದಾಳೆ. ಬಸವಕಲ್ಯಾಣ ಬಸ್ ನಿಲ್ದಾಣದ ಬಳಿಯಿರುವ ಓಂ ಬಡಾವಣೆಯ ನಿವಾಸದಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಅಂಜನಾಬಾಯಿ ಶೇಖರ್ ಪಾಟೀಲ್ (22) ಮೃತ ಮಹಿಳೆ.
ಕಾರಣ ಏನು..?
2022ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಜೊತೆ ವಿವಾಹವಾಗಿದ್ದ ಭಾಲ್ಕಿ ಮೂಲದ ಅಂಜನಾ ಮದುವೆಯಾಗಿದ್ದಳು. ಮದುವೆ ಬಳಿಕ ಅಂಜನಾಬಾಯಿಗೆ ಗಂಡನ ಮನೆಯವರಿಂದ ನಿತ್ಯವೂ ಕಿರುಕುಳ ನೀಡ್ತಿದ್ರಂತೆ. ವೇಶ್ಯಾವಾಟಿಕೆ ಮಾಡಲು ಒತ್ತಾಯಿಸಿ ಮಾನಸಿಕ ಕಿರುಕುಳ ನೀಡಿದ್ದಾಗಿ FIR ನಲ್ಲಿ ಉಲ್ಲೇಖ ಮಾಡಲಾಗಿದೆ.
ನನ್ನ ಮಗಳಿಗೆ ಅನೈತಿಕ ಸಂಬಂಧ ಇಟ್ಕೋಬೇಕು ಎಂದು ಕಿರುಕುಳ ನೀಡಿದ್ದರು ಎಂದು ಮೃತ ಗ್ರಹಿಣಿ ಅಂಜನಾಬಾಯಿ ತಂದೆ ವಿಜಯಕುಮಾರ್ ದೂರು ನೀಡಿದ್ದಾರೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 6ರಂದು ದೂರು ದಾಖಲಾಗಿದೆ. ಮೃತಳ ಗಂಡ ಶೇಖರ್ ಪಾಟೀಲ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ತನಿಖೆ ಆರಂಭಿಸಿರುವ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಪ್ರಕರಣ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us