/newsfirstlive-kannada/media/media_files/2025/08/23/lawyer-jagadish2-2025-08-23-21-29-26.jpg)
ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಲಾಯರ್ ಜಗದೀಶ್​ರನ್ನ ಕೊಡಿಗೆಹಳ್ಳಿ ಪೊಲೀಸರು ನಿನ್ನೆ ಬಂಧಿಸಿದ್ರು. ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಅನ್ವಯ ಲಾಯರ್ ಜಗದೀಶ್​ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಇಂದು ವಕೀಲ ಜಗದೀಶ್​​ಗೆ 7ನೇ ಎಸಿಜೆಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೇ 8,000 ರೂಪಾಯಿ ಶ್ಯೂರಿಟಿ ಬಾಂಡ್ ನೀಡಲು ಸಹ ಕೋರ್ಟ್​ ಸೂಚಿಸಿದೆ. ಈ ಬೆನ್ನಲ್ಲೇ ಲಾಯರ್​ ಜಗದೀಶ್​ ವಿರುದ್ಧ ಮತ್ತೊಂದು ಕೇಸ್​ ಸಹ ದಾಖಲಾಗಿದೆ.
/filters:format(webp)/newsfirstlive-kannada/media/media_files/2025/08/22/lawyer-jagadish-2025-08-22-19-19-55.jpg)
ಜಗದೀಶ್ ಮಾಡಿದ್ದ ಮಾರ್ವಾಡಿ ಗೋ ಬ್ಯಾಕ್ ಎಂದು ಬರೆದ ಪೋಸ್ಟ್ ವೈರಲ್ ಆಗಿತ್ತು. ತೆಲಂಗಾಣದಲ್ಲಿ ಮಾರ್ವಾಡಿ ಗೋ ಬ್ಯಾಕ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕದ ಪ್ರತಿ ಹಳ್ಳಿಯಲ್ಲಿ ಅಭಿಯಾನ ನಡೆಸುವಂತೆ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಶಾಂತಿ ಕದಡುವ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜಗದೀಶ್ ಸೇರಿದಂತೆ ಇತರರ ವಿರುದ್ಧ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us