/newsfirstlive-kannada/media/media_files/2025/08/22/sujata-bhatt1-2025-08-22-22-11-03.jpg)
ಧರ್ಮಸ್ಥಳಕ್ಕೆ ಬಂದ ನನ್ನ ಮಗಳು ಅನನ್ಯಾ ಭಟ್ 2003ರಲ್ಲಿ ಕಾಣೆಯಾಗಿದ್ದಳು ಅಂತ ಸುಜಾತಾ ಭಟ್ ಹೇಳಿದ್ದರು. ಅಲ್ಲದೇ ಮಾಧ್ಯಮಗಳೊಂದಿಗೆ ಮಾತಾಡಿರುವ ಸುಜಾತಾ ಭಟ್ ಅವರು ಅನನ್ಯ ಭಟ್ ತನ್ನ ಮಗಳು, ಅದನ್ನು ಪ್ರೂವ್ ಮಾಡಲು ಯಾವ ದಾಖಲೆಯನ್ನೂ ಕೊಡಲಾರೆ, ದಾಖಲಾತಿಗಳನ್ನು ಸುಟ್ಟುಹಾಕಿದ್ದಾರೆ. ಆಕೆಯೊಂದಿಗಿದ್ದ ತನ್ನ ಫೋಟೊಗಳನ್ನು ಸಹ ಸುಡಲಾಗಿದೆ. ಅನನ್ಯ ಭಟ್ ತನ್ನ ಮಗಳೇ ಎಂದು ಅವರು ಧರ್ಮಸ್ಥಳದ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿ ಮೇಲೆ ಆಣೆ ಮಾಡಿದ್ದರು.
ಇದನ್ನೂ ಓದಿ: ಸುಜಾತ ಭಟ್ ಬಗ್ಗೆ ಸೋದರನ ಶಾಕಿಂಗ್ ಹೇಳಿಕೆ, ಮಗಳು ಇರಲು ಸಾಧ್ಯವೇ ಇಲ್ಲ!
ಇದೀಗ ಖಾಸಗಿ ಯೂಟ್ಯೂಬ್ ಚಾನೆಲ್ವೊಂದರಲ್ಲಿ ಸುಜಾತಾ ಭಟ್ ಅಸಲಿ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ಸುಜಾತಾ ಭಟ್, ‘‘ಅನನ್ಯಾ ಭಟ್ ಅಂತ ನನಗೆ ಮಗಳೇ ಇರಲಿಲ್ಲ. ಇಷ್ಟು ದಿನ ನಾನೂ ಸುಳ್ಳು ಹೇಳಿದ್ದೇನೆ. ಕೆಲವರು ನನಗೆ ಹೀಗೆ ಸುಳ್ಳು ಹೇಳು ಅಂತ ಹೇಳಿದ್ದರು ಅದಕ್ಕೆ ನಾನು ಹೇಳಿದ್ದೇನೆ. ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಇನ್ನಿತರರು ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳು ಅಂತ ಅವರೆಲ್ಲಾ ಹೇಳಿದ್ದರು. ಅದಕ್ಕೆ ನಾನು ಹೇಳಿಬಿಟ್ಟೆ. ನಾನು ಯಾವುದೇ ದುಡ್ಡಿಗೊಸ್ಕರ ಡಿಮ್ಯಾಂಡ್ ಮಾಡಿಲ್ಲ. ನಾನು ಯಾರು ಕೂಡ ದುಡ್ಡು ಕೊಡ್ತೀನಿ ಅಂತ ಹೇಳಲಿಲ್ಲ. ನಮ್ಮ ಆಸ್ತಿ ಜೈನರಿಗೆ ಕೊಟ್ಟಿದ್ದರು. ಆದ್ರೆ, ನನ್ನ ಸಹಿ ಇಲ್ಲದೇ ಆಸ್ತಿಯನ್ನು ಹೇಗೆ ಕೊಟ್ರಿ ಅಂತ ಕೇಳಿದೆ. ನನ್ನ ತಾತನ ಆಸ್ತಿ ಅದು ಮೊಮ್ಮಕ್ಕಳಿಗೆ ಸಿಗಬೇಕಿತ್ತು ಅಷ್ಟೇ ಅದಕ್ಕೆ ಹೀಗೆ ಮಾಡಿದ್ದೇನೆ ಎಂದಿದ್ದಾರೆ. ಹೀಗೆ ಮಾತನ್ನು ಮುಂದುವರೆಸಿದ ಅವರು, ನಾನು ಜನರ ಭಾವನೆಗಳ ಜೊತೆಗೆ ಆ ಆಡಿಲ್ಲ. ಅವರೆಲ್ಲಾ ಸೇರಿಕೊಂಡು ಪ್ರಚೋದಿಸುವಂತೆ ಮಾಡಿದ್ರು. ಅನನ್ಯಾ ಭಟ್ ಅನ್ನೋದೇ ಸುಳ್ಳು. ಧರ್ಮಸ್ಥಳ ದೇವರಿಗೆ ನಾನು ದಕ್ಕೆ ತಂದಿಲ್ಲ. ನಾನು ಕೇಳುತ್ತಿರುವುದು ನನ್ನ ಆಸ್ತಿ ಅಷ್ಟೇ. ಆಸ್ತಿಗೋಸ್ಕರ ಅನನ್ಯಾ ಭಟ್ ಕಥೆಯನ್ನು ಕಟ್ಟಿದ್ದೇನೆ. ಈ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ಕರ್ನಾಟಕದ ಜನತೆಗೆ ನಾನು ಕ್ಷಮೆ ಕೆಳುತ್ತೇನೆ. ನನ್ನಿಂದ ತಪ್ಪಾಗಿದೆ ಧರ್ಮಸ್ಥಳಕ್ಕೂ ನಾನು ಕ್ಷಮೆ ಕೇಳುತ್ತೇನೆ ದಯವಿಟ್ಟು ಕ್ಷಮಿಸಿ’’ ಎಂದು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ