/newsfirstlive-kannada/media/media_files/2025/08/22/lawyer-jagadish-2025-08-22-19-19-55.jpg)
ಬಿಗ್​ಬಾಸ್​ ಸೀಸನ್ 11ರ ಮಾಜಿ ಸ್ಪರ್ಧಿ ಲಾಯರ್​ ಜಗದೀಶ್ ಅವರನ್ನ ಕೊಡಿಗೆಹಳ್ಳಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಲಾಯರ್​ ಜಗದೀಶ್​ರನ್ನು ಬಂಧಿಸಲಾಗಿದೆ.
/filters:format(webp)/newsfirstlive-kannada/media/media_files/2025/08/22/lawyer-jagadish1-2025-08-22-19-35-00.jpg)
ಇದನ್ನೂ ಓದಿ:ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಯಾರಾರಿಗೆ ಎಷ್ಟೆಷ್ಟು ಕೋಟಿ ಕೊಟ್ರು?
ಏನಿದು ಪ್ರಕರಣ..?
ಸಾಮಾಜಿಕ ಜಾಲತಾಣದಲ್ಲಿ ಲಾಯರ್​ ಜಗದೀಶ್ ಅವರು ಜಾತಿ ನಿಂದನೆ ಮಾಡಿದ್ದರಂತೆ. ಈ ಹಿನ್ನೆಲೆಯಲ್ಲಿ ಮಂಜುನಾಥ್ ಎಂಬುವವರು ಲಾಯರ್​ ಜಗದೀಶ್​ ವಿರುದ್ಧ ದೂರು ದಾಖಲಿಸಿದ್ದರು.
ಹೀಗಾಗಿ ಬಿಎನ್ಎಸ್ 196, 299 ಅಡಿಯಲ್ಲಿ ಜಗದೀಶ್​ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ನಿನ್ನೆ ನೋಟಿಸ್ ನೀಡಲು ಜಗದೀಶ್​ರ ಮನೆಗೆ ಪೊಲೀಸರು ಹೋದಾಗ ಬಾಗಿಲು ತೆಗೆಯದೆ ನೊಟೀಸ್ ಪಡೆದುಕೊಳ್ಳಲು ಸಹ ನಿರಾಕರಿಸಿದ್ದರು. ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಪೊಲೀಸರು ಜಗದೀಶ್​ ಅವರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಲಾಯರ್​ ಜಗದೀಶ್​ ಅವರನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us