/newsfirstlive-kannada/media/media_files/2025/08/26/jaga_biklu_shiva-2025-08-26-11-14-50.jpg)
ಬೆಂಗಳೂರು: ಜುಲೈ 15 ರಂದು ರೌಡಿಶೀಟರ್ ಬಿಕ್ಲು ಶಿವನ ಜೀವ ತೆಗೆದ ಕೇಸ್ಗೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ಪೊಲೀಸರು ಎ1 ಆರೋಪಿ ಜಗದೀಶ್ನನ್ನು ಅರೆಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಕ್ಲು ಶಿವನ ಪ್ರಕರಣದ ಬಳಿಕ ಆರೋಪಿ ಜಗ್ಗ ಎಲ್ಲೆಲ್ಲಿ ಸುತ್ತಾಡಿ ಪ್ರಯಾಣ ಮಾಡಿದ್ದ ಎನ್ನುವುದು ಗೊತ್ತಾಗಿದೆ.
ರೌಡಿಶೀಟರ್ ಬಿಕ್ಲು ಶಿವನ ಘಟನೆ ಜುಲೈ 15 ರಂದು ನಡೆದಿತ್ತು. ಅದೇ ದಿನವೇ ಜಗ್ಗ ಬೆಂಗಳೂರಿನಿಂದ ಪರಾರಿಯಾಗಿದ್ದನು. ಸಿಲಿಕಾನ್ ಸಿಟಿಯಿಂದ ಚೆನ್ನೈಗೆ ತೆರಳಿದ್ದನು. ಬಳಿಕ ಅಲ್ಲಿಂದ ದುಬೈಗೆ ಹಾರಿದ್ದನು. ದುಬೈಗೆ ಹೋದ ಮೇಲೆ ಅಲ್ಲಿಯೂ ಕೆಲವೇ ದಿನಗಳಿದ್ದು ಮತ್ತೆ ಬೇರೆ ಕಡೆ ಪ್ರಯಾಣ ಬೆಳೆಸಿದ್ದನು. ಈ ಬಾರಿ ಥೈಲ್ಯಾಂಡ್ ಪ್ರವಾಸ ಮಾಡಿ ಸುತ್ತಾಡುತ್ತಿದ್ದನು. ಇಲ್ಲಿಯೇ ಜಗ್ಗನಿಗೆ ಒಂದು ನೋಟಿಸ್ ಕಳುಹಿಸಲಾಗಿತ್ತು.
ಥೈಲ್ಯಾಂಡ್ ಅನ್ನು ಬಿಟ್ಟು ಇಂಡೋನೇಷ್ಯಾ ಟೂರ್ಗೆ ಹೋಗಿದ್ದಾನೆ. ಇದೇ ಸಮಯದಲ್ಲೇ ಸಿಐಡಿ ಅಧಿಕಾರಿಗಳು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರು. ಕಳೆದ ಒಂದು ತಿಂಗಳಲ್ಲಿ ಇಷ್ಟೆಲ್ಲಾ ಓಡಾಡಿದ್ದ ಜಗ್ಗನಿಗೆ ಸಿಐಡಿ ಇಂಟರ್ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೋಗುತ್ತದೆ. ದೇಶ ಬದಲಿಸದಂತೆ ಇರುವ ಸ್ಥಳದ ಮಾಹಿತಿ ಪಡೆದು ನೋಟಿಸ್ ನೀಡಲಾಗುತ್ತದೆ.
ಇದನ್ನೂ ಓದಿ: ಮಿನಿ ಆಕ್ಷನ್ ಆರಂಭಿಸಿದ RCB.. ಸ್ಟಾರ್ ಆಲ್ರೌಂಡರ್ ಮೇಲೆ ಕಣ್ಣಿಟ್ಟ ಬೆಂಗಳೂರು ಟೀಮ್!
ಥೈಲ್ಯಾಂಡ್ನಲ್ಲಿದ್ದಾಗಲೇ ಜಗ್ಗನಿಗೆ ಇಂಟರ್ಪೋಲ್ ನೋಟಿಸ್ ಮಾಹಿತಿ ಸಿಗುತ್ತದೆ. ಹೀಗಾಗಿ ನಾನು ಯಾವ ದೇಶಕ್ಕೆ ಹೋದರು ಸಿಐಡಿ ಬಿಡಲ್ಲ ಎಂದು ಭಯ ಬಿದ್ದಿದ್ದ ಜಗ್ಗ ಕೂಡಲೇ ಭಾರತಕ್ಕೆ ವಿಮಾನದ ಮೂಲಕ ಪ್ರಯಾಣ ಮಾಡುತ್ತಾನೆ. ಈ ವೇಳೆ ಜಗ್ಗನ ಚಲನವಲನ ಬಗ್ಗೆ ಸಿಐಡಿ ತನಿಖಾ ತಂಡ ಸತತ ಮಾನಿಟರ್ ಮಾಡುತ್ತಲೇ ಇತ್ತು. ಭಾರತಕ್ಕೆ ವಾಪಸ್ ಆಗುತ್ತಿರುವ ಮಾಹಿತಿ ಪಡೆದು ಸಿಐಡಿ ಅಧಿಕಾರಿಗಳು ದೆಹಲಿಗೆ ತೆರಳಿದ್ದರು.
ಜಗ್ಗ ದೆಹಲಿ ಏರ್ಪೋರ್ಟ್ಗೆ ಬರುತ್ತಿದ್ದಂತೆಯೇ ಲಾಕ್ ಮಾಡಿ, ಟ್ರಾನ್ಸಿಸ್ಟ್ ವಾರೆಂಟ್ ಪಡೆದು ಬೆಂಗಳೂರಿಗೆ ಕರೆತರಲಾಗಿದೆ. ಎಸ್.ಪಿ ವೆಂಕಟೇಶ್, ಡಿವೈಎಸ್ಪಿ ನಂದಕುಮಾರ್, ಗೋಪಾಲ್ ನಾಯ್ಕ್, ಹೇಮಂತ್, ಇನ್ಸ್ಪೆಕ್ಟರ್ಗಳಾದ ಮಂಜುನಾಥ್ ಹಾಗೂ ಪ್ರಶಾಂತ್ರ ತಂಡದಿಂದ ಜಗ್ಗನನ್ನು ಬಂಧಿಸಲಾಗಿದೆ. ಸದ್ಯ ಜಗ್ಗನನ್ನ ಸಿಐಡಿ ಕಚೇರಿಗೆ ಕರೆ ತರಲಾಗುತ್ತಿದೆ. ಬೆಂಗಳೂರು ಏರ್ಪೋರ್ಟ್ನಿಂದ ಕರೆತಂದ ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಪ್ರಶಾಂತ್ ತಂಡ.…
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ