/newsfirstlive-kannada/media/media_files/2025/08/21/bmtc_kogilu_cross-2025-08-21-12-01-24.jpg)
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ಗೆ ಮತ್ತೊಂದು ಬಲಿಯಾಗಿದೆ. ಬಸ್ನ ಚಕ್ರಕ್ಕೆ ಸಿಲುಕಿ 7ನೇ ತರಗತಿ ಓದುತ್ತಿದ್ದ ಬಾಲಕಿ ಜೀವ ಕಳೆದುಕೊಂಡಿದ್ದಾಳೆ.
ತಾಯಿ ಹಾಗೂ 10 ವರ್ಷದ ಬಾಲಕಿ ಇಬ್ಬರು ಬೈಕ್ನಲ್ಲಿ ತೆರಳುತ್ತಿದ್ದರು. ಕೋಗಿಲು ಕ್ರಾಸ್ ಬಳಿ ಮಾರುತಿನಗರ ಹತ್ತಿರ ಹೋಗುವಾಗ ಎಡಗಡೆಯಿಂದ ಬಂದ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದಿದೆ. ಈ ವೇಳೆ ಬಾಲಕಿ ಬಿಎಂಟಿಸಿ ಬಸ್ (KA-57 F-5375) ನ ಚಕ್ರದಡಿ ಬಿದ್ದಿದ್ದಾಳೆ. ಆದರೆ ಇದನ್ನು ಗಮನಿಸಿದ ಚಾಲಕ ಹಾಗೇ ಬಸ್ ಚಾಲನೆ ಮಾಡಿದ್ದರಿಂದ ಚಕ್ರ ತಲೆಯ ಮೇಲೆ ಹೋಗಿದೆ. ಇದರಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: IPL ದ್ವೇಷ.. ಶ್ರೇಯಸ್ ಅಯ್ಯರ್ನ ಟೀಮ್ ಇಂಡಿಯಾದಿಂದ ಹೊರಗಿಟ್ಟ ಕೋಚ್ ಗಂಭೀರ್!
ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನ ಶಾಲೆಗೆ ಬಿಡಲು ಬೆಳಗ್ಗೆ 8:45ಕ್ಕೆ ಬೈಕ್ನಲ್ಲಿ ಹೊರಟಿದ್ದರು. ಈ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಆಗ ಬಾಲಕಿ ಬಸ್ ಕೆಳಗೆ ಸಿಲುಕಿದಾಗ ಕೂಗಿದರು ಬಿಎಂಟಿಸಿ ಡ್ರೈವರ್ ನಿಲ್ಲಿಸಲಿಲ್ಲ. ಮಗು ಕೆಳಗಡೆ ಬಿದ್ದ ಕೂಡಲೇ ಬಸ್ ನಿಲ್ಲಿಸಿ ಎಂದು ಜೋರಾಗಿ ತಾಯಿ ಕಿರುಚಿದ್ದಳು. ಆದರೆ ಇದಕ್ಕೆ ಖ್ಯಾರೆ ಎನ್ನದ ಚಾಲಕ ಮುಂದಕ್ಕೆ ಹೋಗಿದ್ದರಿಂದ ಚಕ್ರ ಬಾಲಕಿ ತಲೆ ಮೇಲೆ ಹೋಗಿದೆ ಎಂದು ಆರೋಪಿಸಲಾಗಿದೆ.
ಬಳಿಕ ಸ್ಥಳೀಯರು ಬಸ್ಗೆ ಅಡ್ಡ ಹಾಕಿ ನಿಲ್ಲಿಸುವಂತೆ ಹೇಳಿದ್ದರಿಂದ 200 ಮೀಟರ್ ದೂರ ಹೋಗಿ ಚಾಲಕ ನಿಲ್ಲಿಸಿದ್ದನು. ಘಟನೆಯನ್ನು ಕಣ್ಣಾರೆ ಕಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸದ್ಯ ಯಲಹಂಕ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ