/newsfirstlive-kannada/media/media_files/2025/08/05/davangere-fighting-2025-08-05-07-18-19.jpg)
ದಾವಣಗೆರೆ: ವೇತನ ಪರಿಷ್ಕರಣೆ ಹಾಗೂ 20 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ 4 ವಿಭಾಗಗಳ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದೆ.
ಇದನ್ನೂ ಓದಿ:ಬೆಳಗ್ಗೆ 6 ಗಂಟೆಯಿಂದ ಮುಷ್ಕರ.. ಬಸ್ ಡಿಪೋ ಕಡೆಗೆ ಹೋಗಬೇಡಿ, ಮನೆಯಲ್ಲಿ ಇರಿ; ಅನಂತ
ಸರ್ಕಾರಕ್ಕೆ ಜೊತೆ ಸಭೆ ಮೇಲೆ ಸಭೆ ನಡೆದ್ರೂ ಅವರ ಬೇಡಿಕೆ ಈಡೇರಿಸಿಕಲ್ಲ. ಹೀಗಾಗಿ ಇಂದು ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮಧ್ಯೆ ಬಸ್ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಿದೆ.
ಹೌದು, ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ಬಸ್ಗಾಗಿ ಪ್ರಯಾಣಿಕರು ನಿಲ್ದಾಣದಲ್ಲೇ ಕಾಯುತ್ತಿದ್ದಾರೆ. ಬಸ್ ಬಾರದ್ದಕ್ಕೆ ಅಧಿಕಾರಿಗಳ ಜೊತೆ ಪ್ರಯಾಣಿಕರ ಜಗಳಕ್ಕೆ ಇಳಿದಿದ್ದಾರೆ. ನಾವು ಬಸ್ ಟಿಕೆಟ್ ಹಣ ಪಾವತಿಸಿ ಬಂದಿದ್ದೇವೆ. ಬಸ್ ಇಲ್ಲ ಅಂದ್ರೆ ಬುಕಿಂಗ್ ಯಾಕೆ ಮಾಡಿಕೊಳ್ಳಬೇಕು? ಧಿಡೀರ್ ಬಸ್ ಇಲ್ಲ ಅಂದ್ರೆ ಊರಿಗೆ ಹೋಗೋದು ಹೇಗೆ ಅಂತ ನಿಲ್ದಾಣದಲ್ಲೇ ಆಕ್ರೋಶ ಹೊರ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ