/newsfirstlive-kannada/media/media_files/2025/11/05/by-vijayendra-car-driver-2025-11-05-16-55-20.jpg)
ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y.Vijayendra) ಅವರು ಇವತ್ತು 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರಿಗೆ ಕೇಂದ್ರ ಸಚಿವರಾದ ಅಮಿತ್ ಶಾ, ಹೆಚ್​ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ.
ಕಾರ್ಯಕರ್ತರು, ಬಿಜೆಪಿ ನಾಯಕರು, ಸಂಬಂಧಿಕರು, ಸ್ನೇಹಿತರು ತುಂಬು ಹೃದಯದಿಂದ ಶುಭ ಹಾರೈಸುತ್ತಿದ್ದಾರೆ. ಅಂತೆಯೇ ವಿಜಯೇಂದ್ರ ಅವರ ಕಾರು ಚಾಲಕ ಸಿದ್ದು ಸ್ವಾಮಿ ನಿಷ್ಠೆ ಮೆರೆದಿದ್ದಾರೆ. ವಿಜಯೇಂದ್ರ ಅವರ ಮನೆ ದೇವರು ‘ಯಡಿಯೂರು ಸಿದ್ಧಲಿಂಗೇಶ್ವರ ದೇವಾಲಯ’ಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬೆಳಗ್ಗೆಯೇ ದೇವಾಲಯಕ್ಕೆ ತೆರಳಿ, ಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ನಾಯಕ ವಿಜಯೇಂದ್ರಗೆ ಆಯುರಾರೋಗ್ಯ, ಸಂಪತ್ತು, ಯಶಸ್ಸು ನೀಡಲಿ ಎಂದು ಕೋರಿಕೊಂಡಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ದೂರವಾಣಿ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ರೈತರ ಬೆನ್ನಿಗೆ ನಿಂತ ವಿಜಯೇಂದ್ರ
ಕಳೆದ ರಾತ್ರಿ ವಿಜಯೇಂದ್ರ ಅವರು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರೊಂದಿಗೆ ಕಳೆದಿದ್ದಾರೆ. ರೈತ ಹೋರಾಟದಲ್ಲಿ ಭಾಗಿಯಾದ ವಿಜಯೇಂದ್ರ, ರಸ್ತೆಯಲ್ಲೇ ನಿದ್ರೆಗೆ ಜಾರಿದ್ರು. ಸರ್ಕಾರ ಕೂಡಲೇ ರೈತರಿಗೆ ಸ್ಪಂದಿಸಬೇಕು ಅಂತ ಆಗ್ರಹಿಸಿದ್ದಾರೆ. ಕಬ್ಬು ಬೆಳೆಗಾರರ ಹೋರಾಟ ಏಳನೇ ದಿನಕ್ಕೆ ಕಾಲಿಟ್ಟಿದೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ರಣಕಹಳೆ.. ರೈತರ ಕಿಚ್ಚಿಗೆ ಮಣಿದು ಸಂಧಾನಕ್ಕೆ ಕಳುಹಿಸಿದ ಸರ್ಕಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us