/newsfirstlive-kannada/media/media_files/2025/11/05/farmer-protest-1-2025-11-05-08-18-40.jpg)
ಕಬ್ಬಿನ ಗಾಣ ಗದ್ದೆಯಿಂದ ಮರೆಯಾದ ಬಳಿಕ ಆ ಜಾಗ ಅಕ್ರಮಿಸಿದ್ದು ಸಕ್ಕರೆ. ಅದು ಅಕ್ಕರೆಯ ಸಕ್ಕರೆ.. ಆದ್ರೆ, ಕಬ್ಬು ಅದೆಷ್ಟೇ ಸಿಹಿಯಾದ್ರೂ ಅದನ್ನ ಬೆಳೆದ ರೈತನ ಪಾಲಿಗೆ ಮಾತ್ರ ಸದಾ ಕಹಿ.. ಈಗ ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಕಬ್ಬಿನ ಕಾಳಗ ಶುರುವಾಗಿದೆ..
ಬೆಳಗಾವಿ, ವಿಜಯಪುರದಲ್ಲಿ ಅನ್ನದಾತರ ಆಕ್ರೋಶ
ನವೆಂಬರ್ 7 ಶುಕ್ರವಾರದಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕು ಬಂದ್​ಗೆ ನಿರ್ಣಯ ಕೈಗೊಳ್ಳಲಾಗಿದೆ.. ಗುರ್ಲಾಪುರ ಕ್ರಾಸ್​ನಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.. ಪುಣೆ - ಬೆಂಗಳೂರು ಸಂಪರ್ಕಿಸುವ ಹುಕ್ಕೇರಿ ತಾಲೂಕಿನ ಹತ್ತರಗಿ ಬಳಿ ಹೆದ್ದಾರಿ ಬಂದ್​​​ಗೆ ನಿರ್ಧರಿಸಲಾಗಿದೆ.
ರೈತರ ಬೆನ್ನಿಗೆ ನಿಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ರೈತರ ಬೆನ್ನಿಗೆ ನಿಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಇವತ್ತು ಹುಟ್ಟುಹಬ್ಬ.. ರೈತ ಹೋರಾಟದಲ್ಲಿ ಭಾಗಿಯಾದ ವಿಜಯೇಂದ್ರ, ರಸ್ತೆಯಲ್ಲೇ ನಿದ್ರೆಗೆ ಜಾರಿದ್ರು.. ಸರ್ಕಾರ ಕೂಡಲೇ ರೈತರಿಗೆ ಸ್ಪಂದಿಸಬೇಕು ಅಂತ ಆಗ್ರಹಿಸಿದ್ದಾರೆ.
ಇದನ್ನೂ ಓದಿ: RSS vs ಸರ್ಕಾರ, ನವೆಂಬರ್ 7ಕ್ಕೆ ಮಹತ್ವದ ತೀರ್ಪು! ವಾದ-ಪ್ರತಿವಾದ ಹೇಗಿತ್ತು..?
/filters:format(webp)/newsfirstlive-kannada/media/media_files/2025/11/05/farmer-protest-2025-11-05-08-26-52.jpg)
ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ಸಂಧಾನಕ್ಕೆ ಸಚಿವರನ್ನ ಕಳುಹಿಸ್ತಿದೆ. ಹನ್ನೆರಡು ಗಂಟೆಗೆ ಪ್ರತಿಭಟನಾ ಸ್ಥಳಕ್ಕೆ ಸಚಿವರನ್ನ ರವಾನಿಸ್ತಿದೆ... ಸಿಎಂ ಸೂಚನೆ ಮೇರೆಗೆ ಹಿರಿಯ ಸಚಿವ ಎಚ್.ಕೆ ಪಾಟೀಲ್ ಆಗಮಿಸ್ತಿದ್ದಾರೆ.. ದರ ಘೋಷಣೆ ಬಗ್ಗೆ ಚರ್ಚಿಸಿ ಮನವೊಲಿಸಲು ಯತ್ನಿಸಲಿದ್ದಾರೆ..
ಇದನ್ನೂ ಓದಿ:ಜ್ಞಾನ, ಸಹಕಾರ, ಚರ್ಚೆ, ಸಂಯೋಜನೆಗೆ ಕರ್ನಾಟಕ ಮುಕ್ತ ಹಾಗೂ ಸೂಕ್ತ ಸ್ಥಳ: ಡಿಸಿಎಂ
ಕೋಲಾರದಲ್ಲಿ ಮಾತ್ನಾಡಿದ ಸಿಎಂ ಸಿದ್ದರಾಮಯ್ಯ, ಕಬ್ಬು ದರ ನಿಗದಿಸೋದು ಕೇಂದ್ರ ಸರ್ಕಾರ, ಮಹಾರಾಷ್ಟ್ರದಲ್ಲಿ ಬೆಲೆ ಜಾಸ್ತಿ ಕೊಡ್ತಿದ್ದಾರೆ.. ಅದಕ್ಕೆ ಸಮನಾಗಿ ರಾಜ್ಯದಲ್ಲು ನೀಡುವ ಬೇಡಿಕೆ ಇದೆ.. ಈ ಎಲ್ಲದರ ಬಗ್ಗೆ ಮಾತ್ನಾಡಲು ಸಚಿವರನ್ನ ನಿಯೋಜಿಸಲಾಗಿದೆ ಎಂದ್ರು..
ಸಕ್ಕರೆ ಸಚಿವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರೈತರು!
ಅಥಣಿ ಪಟ್ಟಣದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್​ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಬೆಳಿಗ್ಗೆಯಿಂದ ಅಥಣಿ ಬಂದ್ ಮಾಡಿ ಸಂಜೆ ಆಗ್ತಿದ್ದಂತೆ ಸಚಿವ ಶಿವಾನಂದ ಪಾಟೀಲ ಭಾವಚಿತ್ರಕ್ಕೆ ಭಾವಪೂರ್ವಕ ಶ್ರದ್ಧಾಂಜಲಿ ಅರ್ಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..
/filters:format(webp)/newsfirstlive-kannada/media/media_files/2025/11/05/farmer-protest-2-2025-11-05-08-27-07.jpg)
ಗಗನ್ ಮಹಲ್ ಬಳಿ ಅಹೋರಾತ್ರಿ ಧರಣಿ ಸತ್ಯಾಗ್ರಹ!
ಗುರ್ಲಾಪುರದಲ್ಲಿನ ರೈತರ ಕಿಚ್ಚು ವಿಜಯಪುರಕ್ಕೂ ವ್ಯಾಪಿಸಿದೆ.. ಕಬ್ಬಿಗೆ ಬೆಂಬಲ ಬೆಲೆ ಪ್ರತಿ ಟನ್ ಗೆ 3500 ಆಗ್ರಹಿಸಿ ವಿಜಯಪುರದ ಗಗನ್ ಮಹಲ್ ಬಳಿ ಅಹೋರಾತ್ರಿ ಸತ್ಯಾಗ್ರಹ ಆರಂಭಿಸಿದ್ದಾರೆ.. ಬೆಳಿಗ್ಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ..
ಒಟ್ಟಾರೆ, ರೈತರ ಹೋರಾಟ ರಾಜ್ಯವ್ಯಾಪ್ತಿ ವ್ಯಾಪಿಸಿಕೊಳ್ತಿದ್ದು, ಮಂಡ್ಯ, ಮೈಸೂರು, ಶಿವಮೊಗ್ಗ, ಹಾವೇರಿ, ಧಾರವಾಡದಲ್ಲಿ ಪ್ರತಿಭಟನೆಗೆ ರೈತರು ಸಜ್ಜಾಗಿದ್ದಾರೆ..
ಇದನ್ನೂ ಓದಿ: ಶ್ರೀಕೃಷ್ಣನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ.. ದೀಪಗಳ ಅಲಂಕಾರ ನೋಡಬನ್ನಿ..! Photos
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us