/newsfirstlive-kannada/media/media_files/2025/10/14/rss-2025-10-14-07-11-51.jpg)
RSS vs ಸರ್ಕಾರ.. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆ ಶುರುವಾದ ಸಂಘರ್ಷಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ರಾಜ್ಯದ ಉಳಿದೆಡೆ ಯಾವುದೇ ಅಡ್ಡಿ-ಆತಂಕವಿಲ್ಲದೇ ಪಥಸಂಚಲನ ನಡೆದ್ರೂ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಮಾತ್ರ ನಾನಾ ತಗಾದೆ.. ಈ ಸಂಬಂಧ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್​ ಮಧ್ಯಂತರ ತಡೆ ನೀಡಿತ್ತು. ಈ ತಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆದಿದೆ.
ಇದನ್ನೂ ಓದಿ:‘ಬೆಂಗಳೂರು ಕೌಶಲ್ಯ ಶೃಂಗಸಭೆ’ಗೆ ಚಾಲನೆ ನೀಡಿದ ಸಿದ್ದರಾಮಯ್ಯ.. ವಿಶೇಷತೆ ಏನು..?
ಆರ್​​ಎಸ್​ಎಸ್ ಚಟುವಟಿಕೆಗಳಿಗೆ ಪರೋಕ್ಷ ಅಂಕುಶ ಹಾಕಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಕಳೆದ 28ರಂದು ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್ ಧಾರವಾಡದ ವಿಭಾಗೀಯ ಪೀಠದಲ್ಲಿ ವಾದ ಮಂಡಿಸಿದರು. ಸರ್ಕಾರದ ಆದೇಶ ನಾಗರಿಕರ ಹಕ್ಕಿಗೆ ಧಕ್ಕೆ ಎಂದಿದ್ದ ತಡೆಯಾಜ್ಞೆ ತೆರವುಗೊಳಿಸಲು ಎಜಿ ವಾದ ಮಾಡಿದರು. ಸರ್ಕಾರಿ ಜಾಗದಲ್ಲಿ ಯಾಕೆ ಕಾರ್ಯಕ್ರಮ ನಡೆಸಬಾರದು? 10 ಜನ ಸೇರಿದರೆ ಅನುಮತಿ ಬೇಕಾ? ಪಾರ್ಕ್‌ಗಳಲ್ಲಿ ಜೊತೆಯಾಗಿ ಹೋಗೋಕೂ ಅನುಮತಿ ಬೇಕಾ? ಎಂಬ ಪೀಠದ ಪ್ರಶ್ನೆಗೆ ಎಜಿ ವಿವರಣೆ ನೀಡಿದ್ರು.
ಸರ್ಕಾರದ ಪರ ವಕೀಲರ ವಾದವೇನು?
- ಪಾರ್ಕ್​ ಹಾಗೂ ವಾಯು ವಿಹಾರಕ್ಕೆ ಹೋಗಲು ನಿಷೇಧ ಮಾಡಿಲ್ಲ
- ಸರ್ಕಾರದ ಸ್ವತ್ತುಗಳಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದ ನಿರ್ಬಂಧ
- ಇಬ್ಬರು ಅರ್ಜಿದಾರರು ಅನುಮತಿ ಇಲ್ಲದೇ ಕಾರ್ಯಕ್ರಮ ಮಾಡಿದ್ರೆ ತೊಂದರೆ
- ಖಾಸಗಿಯವರು ಕಾರ್ಯಕ್ರಮ ಮಾಡೋದಾದರೆ ಬೇರೆ ಕಡೆ ಬಾಡಿಗೆ ಪಡೆಯಲಿ
- ಅನುಮತಿ ಪಡೆದು ಮಾಡಬಹುದೆಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖ
- ಆದೇಶ ಜನರ ಹಿತದೃಷ್ಟಿಯಿಂದ ಮಾಡಿದ್ದು ಯಾವುದೇ ದುರುದ್ದೇಶವಿಲ್ಲ
- ತಡೆಯಾಜ್ಞೆ ತೆರವುಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮನವಿ
ಅರ್ಜಿದಾರ ಪರ ವಕೀಲರು ವಾದವೇನು?
ಪಾರ್ಕ್, ಮೈದಾನ ಎಲ್ಲವನ್ನೂ ಸರ್ಕಾರದ ಸ್ವತ್ತೆಂದು ಭಾವಿಸಬಾರದು. ಏಕಸದಸ್ಯ ಪೀಠದಲ್ಲೇ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಬಹುದಿತ್ತು. ಸರ್ಕಾರದ ಆದೇಶ ಸರಿಯಾದುದಲ್ಲ. ಸರ್ಕಾರಿ ಜಾಗ ಇರುವುದೇ ಸಾರ್ವಜನಿಕರಿಗೋಸ್ಕರ. ಅಲ್ಲಿ ಈ ರೀತಿ ಅಡ್ಡಿಪಡಿಸೋದು ನ್ಯಾಯ ಸಮ್ಮತವಲ್ಲ. ಇದು ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯಾಗುತ್ತದೆ. ಪಾರ್ಕುಗಳು ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿ ಇರುತ್ತವೆ. ಅವುಗಳಿಗೆ ನಿರ್ಬಂಧ ಹೇರುವುದು ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯಾಗುತ್ತದೆ. ಮೈದಾನದಲ್ಲಿ ಕ್ರಿಕೆಟ್ ಆಡಲೂ ಅನುಮತಿ ಬೇಕೆಂಬಂತೆ ನಿಯಮವಿದೆ. ಇದಕ್ಕಿಂತ ಏಕಪಕ್ಷೀಯ ಆದೇಶ ಕಾಣಲು ಸಾಧ್ಯವಿಲ್ಲ ಅಂತ ಪುನಶ್ಚೇತನಾ ಸಂಸ್ಥೆ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.
ಇದನ್ನೂ ಓದಿ: ಖ್ಯಾತ ಸೀರಿಯಲ್​ ನಟಿಗೆ ‘ಆ’ ಫೋಟೋ ಕಳಿಸಿ ಲಾಕ್ ಆದ ‘ನವರಂಗಿ’ ನವೀನ..!
ಸರ್ಕಾರ ಹಾಗೂ ಪುನಶ್ಚೇತನ ಸೇವಾ ಸಂಸ್ಥೆ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ನವೆಂಬರ್ 7ರಂದು ಆದೇಶ ಕಾಯ್ದಿರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us