Advertisment

ನಿಗದಿಯಂತೆ ಜಾತಿಗಣತಿ ನಡೆಸಲು ಅಧಿಕೃತ ಆದೇಶ.. ಸಮೀಕ್ಷೆ ಮುಂದೂಡಿದ್ರೆ ಯಾರಿಗೆ ಲಾಭ..?

ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಜೋಡಿಸಿ ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. ಈ ಪಟ್ಟಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

author-image
Bhimappa
CM_SIDDARAMAIAH (8)
Advertisment

ಜಾತಿಗಳ ಹೆಸರಿನ ವಿವಾದದಿಂದ ಕರ್ನಾಟಕ ಸರ್ಕಾರದ ಸಮೀಕ್ಷೆಯ ಭವಿಷ್ಯಕ್ಕೆ ಆವರಿಸಿದ್ದ ಅನಿಶ್ಚಿತತೆ ಕಾರ್ಮೋಡ ಕರಗಿದೆ. ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿ ನಿಗದಿಯಂತೆ ಸೋಮವಾರಿಂದ ಜಾತಿಗಣತಿ ನಡೆಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

Advertisment

ಸೆಪ್ಟೆಂಬರ್​​​ 22 ರಿಂದ ಅಕ್ಟೋಬರ್​​ 7ರವರೆಗೆ ನಡೆಯಲಿದೆ ಸರ್ವೆ

ಜಾತಿಗಳ ಹೆಸರಿನ ವಿವಾದದಿಂದ ಕರ್ನಾಟಕ ಸರ್ಕಾರದ ಸಮೀಕ್ಷೆಯ ಭವಿಷ್ಯಕ್ಕೆ ಆವರಿಸಿದ್ದ ಅನಿಶ್ಚಿತತೆ ಕಾರ್ಮೋಡ ಕರಗಿದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಜಾತಿ ಜೊತೆ ಕ್ರಿಶ್ಚಿಯನ್​​​ ಪದ ಕೈಬಿಡಲು ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಹಿಂದೆ ಘೋಷಿಸಿದಂತೆ ಸೆಪ್ಟೆಂಬರ್​ 22ರಿಂದ ಅಕ್ಟೋಬರ್​7ವರೆಗೆ ಸಮೀಕ್ಷೆ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. 

JATIGANATI

ಸಚಿವರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಸಮೀಕ್ಷೆಯನ್ನು ಮುಂದುವರೆಸಲು ಸರ್ಕಾರ ನಿರ್ಧರಿಸಿದ್ದೇಕೆ..? 

ಸಮೀಕ್ಷೆ ಮುಂದುವರಿಕೆಗೆ ಕಾರಣ ಏನು? 

  • ಸಮೀಕ್ಷೆಯಿಂದ ಹಿಂದೆ ಸರಿಯದಂತೆ ಹೈಕಮಾಂಡ್​​ ಆದೇಶ 
  • ಜಾತಿ ಗಣತಿ ಮುಂದೂಡಿಕೆ ಮಾಡಿದ್ರೆ ವಿಪಕ್ಷ ಲಾಭ ಆಗಲಿದೆ
  • ಮುಂದೂಡಿಕೆ ಮಾಡಿದರೆ ಸರ್ಕಾರಕ್ಕೆ ಮುಜುಗರ ಆಗಲಿದೆ 
  • ಒಂದ್ವೇಳೆ ಮುಂದೂಡಿಕೆ ಮಾಡಿದರೆ ಇನ್ನಷ್ಟು ಗೊಂದಲ 
  • ಗೊಂದಲದಿಂದ ಇತರೆ ಸಮುದಾಯಗಳಿಗೆ ಬೇರೆ ಸಂದೇಶ 
  • ಕರ್ನಾಟಕದ ಜಾತಿ ಗಣತಿ ಮೇಲೆ ಬೇರೆ ರಾಜ್ಯಗಳ ಕಣ್ಣು 
  • ದಸರಾ ನಂತರ ಸರ್ವೇಗೆ ಮುಂದಾದಲ್ಲಿ ಸಿಬ್ಬಂದಿ ಕೊರತೆ 
  • ದಿನದೂಡಿಕೆ ಮಾಡಿದರೆ ಸರ್ಕಾರಕ್ಕೆ ತಾಂತ್ರಿಕವಾಗಿ ತಲೆಬಿಸಿ 
  • ಜಾತಿ ಗಣತಿ ವಿಚಾರದಲ್ಲಿ ಸರ್ಕಾರದ ಮುಂದಿಲ್ಲ ಅನ್ಯ ದಾರಿ
Advertisment

ಇದನ್ನೂ ಓದಿ:ಅಯ್ಯೋ ನಾನು ರೋಹಿತ್ ಶರ್ಮಾ ಆಗಿಬಿಟ್ಟೇ.. ಪ್ಲೇಯರ್​ ಹೆಸರು ನೆನಪಿಗೆ ಬರದೇ ಸೂರ್ಯಕುಮಾರ್..

CM_SIDDARAMAIAH (7)

ಜಾತಿ ಜೊತೆ ಕ್ರಿಶ್ಚಿಯನ್​​​ ಪದ ಕೈಬಿಡಲು ಸಿಎಂ ಸೂಚನೆ

ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಜೋಡಿಸಿ ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. ಈ ಪಟ್ಟಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ವಿಪಕ್ಷಗಳು, ಹಿಂದೂ ಸಮುದಾಯ ಮಾತ್ರವಲ್ಲದೇ.. ಸಂಪುಟ ಸಭೆಯಲ್ಲಿ ಸಚಿವರೇ ಭಾರೀ ವಿರೋಧ ವ್ಯಕ್ತಪಡಿಸಿದ್ರು. ಕೆಲವರು ಸಮೀಕ್ಷೆ ಮುಂದೂಡುವಂತೆ ಬಿಗಿಪಟ್ಟು ಹಿಡಿದಿದ್ದರು. ಈ ಎಲ್ಲ ಒತ್ತಡಗಳಿಗೆ ಮಣಿದ ಸಿಎಂ ಸಿದ್ದರಾಮಯ್ಯನವರು, ಜಾತಿ ಜೊತೆಗೆ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಿರುವ ಕಲಂಗಳನ್ನು ತೆಗೆಯುವಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.

ಅದೇನೆ ಇರಲಿ.. ಹೈಕಮಾಂಡ್​ ಒತ್ತಡಕ್ಕೋ, ಇಲ್ಲ ಬೇರೆ ಕಾರಣಕ್ಕೋ ತೀವ್ರ ವಿರೋಧದ ನಡುವೆಯೂ ಸರ್ಕಾರ ಜಾತಿ ಸಮೀಕ್ಷೆಗೆ ಕೈ ಹಾಕಿದ್ದು, ಸೋಮವಾರದಿಂದ ಸಮೀಕ್ಷೆ ನಡೆಯಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH Caste census
Advertisment
Advertisment
Advertisment