ವ್ಯಕ್ತಿ ಜೀವ ಬಿಟ್ಟ ಕೇಸ್​; ಪತ್ರದಲ್ಲಿ ಸಂಸದ ಡಾ.ಕೆ ಸುಧಾಕರ್ ಹೆಸರು, ಪಾರದರ್ಶಕ ತನಿಖೆ ಆಗಬೇಕು; ಸಚಿವ

ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಆವರಣದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಜೀವ ತೆಗೆದುಕೊಂಡಿದ್ದಾರೆ. ಸದ್ಯ ಈ ಸಂಬಂಧ ಪತ್ರದಲ್ಲಿ ಸಂಸದ ಡಾ.ಕೆ ಸುಧಾಕರ್ ಹೆಸರು ಉಲ್ಲೇಖ ಇರುವುದು ಸೂಕ್ಷ್ಮವಾದ ವಿಚಾರ

author-image
Bhimappa
SUDHAKAR_MC
Advertisment

ಬೆಂಗಳೂರು: ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಆವರಣದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಜೀವ ತೆಗೆದುಕೊಂಡಿದ್ದಾರೆ. ಸದ್ಯ ಈ ಸಂಬಂಧ ಪತ್ರದಲ್ಲಿ ಸಂಸದ ಡಾ.ಕೆ ಸುಧಾಕರ್ ಹೆಸರು ಉಲ್ಲೇಖ ಇರುವುದು ಸೂಕ್ಷ್ಮವಾದ ವಿಚಾರ, ತನಿಖೆ ಪಾರದರ್ಶಕದಿಂದ ಆಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರು ಹೇಳಿದ್ದಾರೆ. 

ವಿಧಾನಸೌಧದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರು, ಈ ಕುರಿತು ಇಂದು ಬೆಳಗ್ಗೆಯೇ ಮಾಹಿತಿ ಬಂದಿದೆ. ಬಾಬು ಎನ್ನುವ ಚಾಲಕ ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರ ಜೇಬಿನಲ್ಲಿ ಚೀಟಿ ಇರುವುದು ಪತ್ತೆ ಆಗಿದ್ದು ಇದರಲ್ಲಿ ಸಂಸದ ಡಾ.ಕೆ ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ನಾಗೇಶ್​ ಎನ್ನುವವರ ಹೆಸರುಗಳು ಇವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ:ಸಂಸದ ಡಾ.ಕೆ ಸುಧಾಕರ್ ಹೆಸರು ಬರೆದು ಜೀವ ಬಿಟ್ಟ ವ್ಯಕ್ತಿ.. ಲಕ್ಷ ಲಕ್ಷ ಹಣ ವಂಚನೆ ಆರೋಪ

CKB_SUDHAKAR_MP

ಸಂಸದ ಡಾ.ಕೆ ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ನಾಗೇಶ್​ ಅವರ ಹೆಸರುಗಳು ಇರುವುದರಿಂದ ಇದು ಸೂಕ್ಷ್ಮವಾದ ವಿಚಾರ ಆಗಿದೆ. ಸಂಪೂರ್ಣವಾಗಿ ಪ್ರಕರಣದ ತನಿಖೆ ಆಗಬೇಕು. ಪೋಲೀಸ್ ಅಧಿಕಾರಿಗಳು, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಲಿದೆ. ವಸ್ತುಸ್ಥಿತಿ ಏನೇನಿದೆ ಅಂತ ನೋಡಬೇಕು. ಪಾರದರ್ಶಕ ತನಿಖೆ ಆಗಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MP Dr.K Sudhakar
Advertisment