ಸಂಸದ ಡಾ.ಕೆ ಸುಧಾಕರ್ ಹೆಸರು ಬರೆದು ಜೀವ ಬಿಟ್ಟ ವ್ಯಕ್ತಿ.. ಲಕ್ಷ ಲಕ್ಷ ಹಣ ವಂಚನೆ ಆರೋಪ

ನಗರದ ಭಾಪೂಜಿನಗರ ನಿವಾಸಿಯೊಬ್ಬರು ನೇಣು ಬಿಗಿದುಕೊಂಡು ಜೀವ ತೆಗೆದುಕೊಂಡಿದ್ದಾರೆ. ಇವರು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ನನ್ನ ಈ ಸ್ಥಿತಿಗೆ ಮೂವರು ಕಾರಣ ಎಂದು ಬರೆದಿದ್ದಾರೆ.

author-image
Bhimappa
CKB_SUDHAKAR_MP
Advertisment

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದ ಆವರಣದಲ್ಲೇ ವ್ಯಕ್ತಿಯೊಬ್ಬರು ನೇಣು ಬಿಗಿದು ಜೀವ ತೆಗೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಡೆತ್​​ನೋಟ್ ಬರೆದಿಟ್ಟಿದ್ದು ಇದರಲ್ಲಿ ಸಂಸದ ಡಾ.ಕೆ ಸುಧಾಕರ್ ಹೆಸರನ್ನು ಉಲ್ಲೇಖ ಮಾಡಿ ಆರೋಪಿಸಲಾಗಿದೆ. 

ಚಿಕ್ಕಬಳ್ಳಾಪುರ ಸಿಟಿಯ ಭಾಪೂಜಿನಗರ ನಿವಾಸಿ ಬಾಬು (30) ಎನ್ನುವರು ನೇಣು ಬಿಗಿದುಕೊಂಡು ಜೀವ ತೆಗೆದುಕೊಂಡವರು. ಇವರು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ನನ್ನ ಈ ಸ್ಥಿತಿಗೆ ಮೂವರು ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. 

ಇದನ್ನೂ ಓದಿ: ಕತ್ತರಿಸಿದ ಎರಡು ಕೈಗಳನ್ನ ಕವರ್​ನಲ್ಲಿ ಹಾಕಿ, ರಸ್ತೆ ಬದಿ ಬಿಸಾಕಿ ಹೋಗಿರುವ ದುಷ್ಕರ್ಮಿಗಳು

CKB_SUDHAKAR_MP_1

ನಾನು ಈ ಸ್ಥಿತಿಗೆ ಬರಲು ಸಂಸದ ಡಾ.ಕೆ.ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ಎನ್​ಎನ್​ಆರ್​ ಟ್ರಾವೆಲ್ಸ್ ನಾಗೇಶ್ ಕಾರಣ ಅಂತ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾರೆ ಅಂತ ಆರೋಪ ಮಾಡಲಾಗಿದೆ. 

ಸಂಸದ ಡಾ.ಕೆ ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ನಾಗೇಶ್​ ಅವರ ಮೇಲೆ ವಂಚನೆ ಆರೋಪ ಮಾಡಲಾಗಿದೆ. 2021ರಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ 40 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಆಗ ಮುಂಗಡವಾಗಿ 25 ಲಕ್ಷ ಹಣ ಕೊಟ್ಟಿದ್ದೆ. ಆದರೆ ಈಗ ಕೆಲಸನೂ ಇಲ್ಲ ಹಣವೂ ವಾಪಸ್ ಕೊಟ್ಟಿಲ್ಲ ಅಂತ ಬಾಬು ಮನನೊಂದಿದ್ದರು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MP Dr.K Sudhakar
Advertisment