/newsfirstlive-kannada/media/media_files/2025/08/07/tmk_2_hands-2025-08-07-10-46-17.jpg)
ತುಮಕೂರು: ಮನುಷ್ಯನ ಎರಡು ಕೈಗಳು ಕತ್ತರಿಸಿ ಕವರ್ನಲ್ಲಿ ಸುತ್ತಿ ಬಿಸಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಚಿಂಪುಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ಎರಡು ಕೈಗಳು ಕತ್ತರಿಸಿದ ರೀತಿಯಲ್ಲಿದ್ದು ಕಪ್ಪು ಬಣ್ಣದ ಕವರ್ನಲ್ಲಿ ಅವುಗಳನ್ನು ಇಟ್ಟು ಅಪರಿಚಿತರು ಬಿಸಾಡಿ ಹೋಗಿದ್ದಾರೆ. ಗ್ರಾಮದ ಮುತ್ಯಾಲಮ್ಮ ದೇವಾಲಯದ ಬಳಿ ಒಂದು ಕೈ ಪತ್ತೆ ಆಗಿದೆ. ಈ ಸ್ಥಳದಿಂದ ಸುಮಾರು 1 ಕಿಲೋ ಮೀಟರ್ ದೂರದಲ್ಲಿ ಇನ್ನೊಮದು ಕೈ ಪತ್ತೆ ಆಗಿದೆ.
ಇದನ್ನೂ ಓದಿ: ಧರ್ಮಸ್ಥಳ ಘರ್ಷಣೆ; ಸ್ಥಳದಲ್ಲಿ ನಡೆದ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ಬಿಗ್ಬಾಸ್ ಸ್ಪರ್ಧಿ ರಜತ್ ಕಿಶನ್
ಈ ಎರಡು ಕೈಗಳನ್ನು ಕವರ್ನಲ್ಲಿ ಸುತ್ತಿ ಯಾರು ಇಲ್ಲದ ಸಮಯದಲ್ಲಿ ರಸ್ತೆ ಬದಿಯಲ್ಲಿ ದುಷ್ಕರ್ಮಿಗಳು ಬಿಸಾಕಿ ಹೋಗಿದ್ದಾರೆ. ಜೀವ ತೆಗೆದು ಕೈ ಕತ್ತರಿಸಿರುವ ಅನುಮಾನ ವ್ಯಕ್ತಪಡಿಸಲಾಗಿದೆ. ಇನ್ನು ಮಾಹಿತಿ ಗೊತ್ತಾಗುತ್ತಿದ್ದಂತೆ ಗ್ರಾಮದ ಜನರು ಗುಂಪು ಗುಂಪಾಗಿ ಬಂದು ನೋಡಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎರಡು ಕೈ ಹೊರತು ದೇಹದ ಇತರೆ ಭಾಗಗಳು ಪತ್ತೆಯಾಗಿಲ್ಲ. ಸದ್ಯ ಈ ಸಂಬಂಧ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ