/newsfirstlive-kannada/media/media_files/2025/08/25/cbl_woman_chain-2025-08-25-14-36-17.jpg)
ಚಿಕ್ಕಬಳ್ಳಾಪುರ: ನಾಮಗೊಂಡ್ಲು ಬಳಿ ಸಿಕ್ಕ ಅಪರಿಚಿತ ಮಹಿಳೆಯ ಮೃತದೇಹ ಕೇಸ್​​ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಇಎಂಐಗೆ ಹಣ ಕಟ್ಟಲು ಆಟೋ ಚಾಲಕ, ತನ್ನ ಸ್ನೇಹಿತೆಯನ್ನೇ ಮುಗಿಸಿದ್ದಾನೆ ಎಂದು ಪೊಲೀಸರ ತನಿಖೆಯಿಂದ ಸತ್ಯ ಹೊರ ಬಂದಿದೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಬಳಿ ಆಂಧ್ರ ಪ್ರದೇಶದ ಹಿಂದೂಪುರ ಮೂಲದ ಅರ್ಚನಾ ಜೀವ ತೆಗೆದು ಬಿಸಾಕಿ ಹೋಗಿದ್ದರು. ಈ ಸಂಬಂಧ ಆರೋಪಿಗಳಾದ ಅಂಜಲಿ ಹಾಗೂ ಆಟೋ ಚಾಲಕ ರಾಕೇಶ್​ನನ್ನ ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ನಾಮಗೊಂಡ್ಲು ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಎಲ್ಲ ಸತ್ಯವೂ ಇದೀಗ ಹೊರ ಬಂದಿದ್ದು ಹುಟ್ಟಿ ದಿನದಂದೇ ಅರ್ಚನಾಳನ್ನ ಮುಗಿಸಿದ್ದಾರೆ.
ಇದನ್ನೂ ಓದಿ:ಶಾಲೆಯ ಹೋಮ್ ವರ್ಕ್​ ಒತ್ತಡ.. ಜೀವ ಕಳೆದುಕೊಂಡ SSLC ವಿದ್ಯಾರ್ಥಿನಿ, ಅನುಮಾನ
/filters:format(webp)/newsfirstlive-kannada/media/media_files/2025/08/25/cbl_woman_gold_chain-2025-08-25-14-52-37.jpg)
ಆಟೋ ಚಾಲಕ ರಾಕೇಶ್ ಇಎಂಐ ಹಣ ಕಟ್ಟಲು ಹರಸಾಹಸ ಪಡುತ್ತಿದ್ದನು. ಒಮ್ಮೆ ಅರ್ಚನಾಗೆ ವಿಡಿಯೋ ಕಾಲ್ ಮಾಡಿ ಮಾತನಾಡುವಾಗ ಕತ್ತಲ್ಲಿ ಇದ್ದಂತಹ ಚಿನ್ನದ ಸರ ನೋಡಿದ್ದನು. ಅಂದಿನಿಂದ ಅದರ ಮೇಲೆ ಕಣ್ಣಿಟ್ಟಿದ್ದನು. ಆ ಚಿನ್ನದ ಸರ ಕದಿಯಬೇಕು ಎಂದೇ ತನ್ನ ಗರ್ಲ್​ಫ್ರೆಂಡ್​ ಜೊತೆ ಸೇರಿ ಟ್ರಿಪ್​ ಪ್ಲಾನ್ ಮಾಡಿದ್ದನು. ಅದರಂತೆ ಅರ್ಚನಾ ಹುಟ್ಟಿದ ದಿನಕ್ಕೆ ಸರ್​ಪ್ರೈಸ್​ ಎನ್ನುವಂತೆ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ಹೋದ ಮೇಲೆ ಇಬ್ಬರು ಸೇರಿ ಆಕೆಯ ಜೀವ ತೆಗೆದಿದ್ದರು.
ಬಳಿಕ ಮೃತದೇಹವನ್ನು ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಮಗೊಂಡ್ಲು ಬಳಿ ಎಸೆದು ಹೋಗಿದ್ದರು. ಈ ಅಪರಿಚಿತ ಶವದ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ಕೊನೆಗೂ ಪತ್ತೆ ಹಚ್ಚಿದ್ದಾರೆ. ಆರೋಪಿಗಳಾದ ಅಂಜಲಿ ಹಾಗೂ ರಾಕೇಶ್​ನನ್ನ ಬಂಧಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ರಾಕೇಶ್ ಆಟೋ ಚಾಲಕನಾಗಿದ್ರೆ, ಜೀವ ಕಳೆದುಕೊಂಡ ಅರ್ಚನಾ ಮದುವೆ ಕಾರ್ಯಕ್ರಮಗಳಲ್ಲಿ ವೆಲ್​ಕಮ್​ ಗರ್ಲ್​ ಆಗಿ ಕೆಲಸ ಮಾಡುತ್ತಿದ್ದಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us