/newsfirstlive-kannada/media/media_files/2025/09/07/cbl_student_new-2025-09-07-18-09-15.jpg)
ಚಿಕ್ಕಬಳ್ಳಾಪುರ: ಸಂಸದ ಡಾ.ಕೆ ಸುಧಾಕರ್ ಅವರಿಗೆ ಸೇರಿದ ಕಾಲೇಜ್ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾನೆ. ಈ ಘಟನೆಯು ಪೆರೇಸಂದ್ರ ಕ್ರಾಸ್ನಲ್ಲಿರುವ ಶಾಂತಾ ಗ್ರೂಪ್ ಆಪ್ ಇನ್ಸ್ಟಿಟ್ಯೂಟ್ನಲ್ಲಿ ನಡೆದಿದೆ.
ಕೇರಳ ಮೂಲದ ಮೊಹಮ್ಮದ್ ಶಬೀರ್ (26) ಜೀವ ಕಳೆದುಕೊಂಡ ವಿದ್ಯಾರ್ಥಿ. ಸಂಸದ ಡಾ.ಕೆ ಸುಧಾಕರ್ ಅವರಿಗೆ ಸೇರಿದ ಪೆರೇಸಂದ್ರ ಕ್ರಾಸ್ನಲ್ಲಿರುವ ಶಾಂತಾ ಗ್ರೂಪ್ ಆಪ್ ಇನ್ಸ್ಟಿಟ್ಯೂಟ್ನಲ್ಲಿ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದನು. ಅಲ್ಲೇ ಹಾಸ್ಟೆಲ್ ಕೂಡ ಇತ್ತು. ಈ ಹಾಸ್ಟೆಲ್ನಲ್ಲಿನ ರೂಮ್ನ ಕಿಟಕಿಗೆ ವಿದ್ಯಾರ್ಥಿ ನೇಣು ಬಿಗಿದುಕೊಂಡು ಜೀವ ಬಿಟ್ಟಿದ್ದಾನೆ.
ಇದನ್ನೂ ಓದಿ: Asia Cup; ಹದ್ದಿನ ಕಣ್ಣಿಟ್ಟ ಸೂರ್ಯಕುಮಾರ್ ಸೇನೆ.. ಭರ್ಜರಿ ಬ್ಯಾಟಿಂಗ್, ಬೌಲಿಂಗ್ ಸಮರಾಭ್ಯಾಸ
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಡಾ.ಕೆ ಸುಧಾಕರ್ ಅವರ ಸ್ವಂತ ಊರು ಆಗಿದೆ. ಈ ಊರು ಕ್ರಾಸ್ನಲ್ಲಿ ಶಾಂತಾ ಸಮೂಹ ಸಂಸ್ಥೆ ಇದೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೆರೇಸಂದ್ರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಂತಾ ನರ್ಸಿಂಗ್ ಕಾಲೇಜಿನಲ್ಲಿ ಟೆಕ್ನಿಷಿಯನ್ ಕೋರ್ಸ್ ಅನ್ನು ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದನು. ಪ್ರೇಮ ವೈಫಲ್ಯದಿಂದ ಈ ದಾರಿ ಹಿಡಿದ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ