/newsfirstlive-kannada/media/media_files/2025/12/17/chikkamagaluru-heart-attack-2025-12-17-09-25-38.jpg)
ಚಿಕ್ಕಮಗಳೂರು: ಹೃದಯಾಘಾತಕ್ಕೆ 22 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶೃಂಗೇರಿ ಪಟ್ಟಣದ ಬಿಸಿಎಂ ಹಾಸ್ಟೆಲ್​ನಲ್ಲಿ ನಡೆದಿದೆ.
ದಿಶಾ (22) ಹೃದಯಾಘಾತಕ್ಕೆ ಬಲಿಯಾದ ವಿದ್ಯಾರ್ಥಿನಿ. ದಿಶಾ, ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಳು. ಬಿಸಿಎಂ ಹಾಸ್ಟೆಲ್​​ನಲ್ಲಿ ಎದೆನೋವಿನಿಂದ ಕುಸಿದು ಬಿದ್ದಾಳೆ. ಕೂಡಲೇ ಹಾಸ್ಟೆಲ್ ವಿದ್ಯಾರ್ಥಿನಿಯರು, ದಿಶಾಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಫಲ ಸಿಗಲಿಲ್ಲ.
ದಿಶಾ, ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹುಡುಗಿ ಆಗಿದ್ದಳು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿಗೆ ಬಿಕಾಂ ಮಾಡಲು ಬಂದಿದ್ದಳು. ಬಿಸಿಎಂ ಹಾಸ್ಟೆಲ್​ನಲ್ಲಿ ಇದ್ದಿಕೊಂಡು ಜೆಸಿಬಿಎಂ ಕಾಲೇಜಿಗೆ ಹೋಗುತ್ತಿದ್ದಳು.
ಇದನ್ನೂ ಓದಿ: ಬಲಿಷ್ಠ ತಂಡ ಕಟ್ಟಿದ RCB ಫ್ರಾಂಚೈಸಿ.. ತಂಡದ ಆಟಗಾರರ ಸಂಪೂರ್ಣ ಲಿಸ್ಟ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us