/newsfirstlive-kannada/media/media_files/2026/01/08/chikka-ballapura-2026-01-08-14-43-12.jpg)
ಚಿಕ್ಕಬಳ್ಳಾಪುರ: ಅವರಿಬ್ಬರು ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳು. ಬಾಲ್ಯದಿಂದಲೂ ಒಟ್ಟಿಗೆ ಇದ್ದ ಅಣ್ಣ-ತಂಗಿ ಮಧ್ಯೆ ಸಲುಗೆ ಬೆಳೆದು ಪ್ರೀತಿಗೆ ತಿರುಗಿತ್ತು. ಇದೀಗ ಯುವತಿ ದುರಂತ ಅಂತ್ಯ ಕಂಡಿದ್ದಾಳೆ.
21 ವರ್ಷದ ರಾಮಲಕ್ಷ್ಮೀ ಜೀವ ಕಳೆದುಕೊಂಡ ಯುವತಿ. ಈಕೆ ತನ್ನ ಕಸಿನ್ ಸಹೋದರ ಕೃಷ್ಣ ಎಂಬಾತನ ಪ್ರೀತಿಸುತ್ತಿದ್ದಳು. ಇವರ ಪ್ರೀತಿಗೆ ಸಹಜವಾಗಿಯೇ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಬೈದು ಬುದ್ದಿ ಕೂಡ ಹೇಳಿದ್ದರು. ಆದರೂ, ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಮನೆ ಮಾಡಿಕೊಂಡು ಲೀವ್-ಇನ್ ರಿಲೇಷನ್​ನಲ್ಲಿ ಇದ್ದರು.
ಇದೀಗ ರಾಮಲಕ್ಷ್ಮೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ರಾಮಲಕ್ಷ್ಮಿ ಹಾಗೂ ಕೃಷ್ಣ ಕಳೆದ ಮೂರು ವರ್ಷಗಳಿಂದ ಪ್ರೀತಿ ಪ್ರೇಮ ಅಂತ ಅನೈತಿಕ ಸಂಬಂಧ ಹೊಂದಿದ್ದರು. ಇವರಿಬ್ಬರು ಮೂಲತಃ ಗುಡಿಬಂಡೆ ತಾಲೂಕಿನ ರಾಮಕೃಷ್ಣಾಪುರದವರು.
ಇವರ ಕುಟುಂಬವು ಬಾಗೇಪಲ್ಲಿ ಪಟ್ಟಣದಲ್ಲಿ ಪ್ರತ್ಯೇಕವಾಗಿ ನೆಲೆಸಿದೆ. ಮತ್ತೊಂದೆಡೆ ಕೃಷ್ಣನಿಗೆ ಬೇರೆ ಹುಡುಗಿಯೊಬ್ಬಳ ಜೊತೆ ಮದುವೆಯನ್ನು ಮಾಡಿದ್ದರು. ಹೀಗಿದ್ದೂ ಕೃಷ್ಣ ತನ್ನ ತಂಗಿ ರಾಮಲಕ್ಷ್ಮಿಯನ್ನು ಬಿಟ್ಟಿರಲಿಲ್ಲ. ಆಕೆಯ ತಲೆ ಕೆಡಿಸಿ ಪ್ರತ್ಯೇಕ ಮನೆ ಮಾಡಿ ಕಳ್ಳ ಸಂಸಾರ ಮಾಡುತ್ತಿದ್ದ ಎಂದು ಎನ್ನಲಾಗಿದೆ. ಇದೀಗ ರಾಮಲಕ್ಷ್ಮಿ ಸಾವಿಗೆ ಶರಣಾಗಿದ್ದು, ಕುಟುಂಬಸ್ಥರ ಕಣ್ಣಿರಿಗೆ ಕಾರಣವಾಗಿದೆ. ಅಲ್ಲದೇ ಯುವತಿ ಕುಟುಂಬಸ್ಥರ ಮಗಳ ಅಗಲಿಕೆಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’​ನಲ್ಲಿ ಯಶ್ ಕಿವಿ ಕಚ್ಚಿದ ನಟಿ ಯಾರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us