ಕಾಫಿನಾಡಿನ ಸತ್ಯಹರಿಶ್ಚಂದ್ರ! ಕೊಟ್ಟ ಮಾತಿನಂತೆ ತೋಟ ಕಡಿದು ಊರಿಗೆ ರಸ್ತೆ ನಿರ್ಮಿಸಿಕೊಟ್ಟ ಮಾಲೀಕ!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ವ್ಯಕ್ತಿಯೊಬ್ಬರು ಗ್ರಾಮದ ಹಿತಕ್ಕಾಗಿ ತಾವು ಕೊಟ್ಟ ಮಾತಿನಂತೆ ಫಸಲು ನೀಡುತ್ತಿದ್ದ ಕಾಫಿ ತೋಟವನ್ನೇ ಕಡಿದು ರಸ್ತೆ ನಿರ್ಮಿಸಿಕೊಡುವ ಮೂಲಕ ಅಪ್ಪಟ 'ಸತ್ಯಹರಿಶ್ಚಂದ್ರ'ನಂತೆ ನಡೆದುಕೊಂಡಿದ್ದಾರೆ.

author-image
Ganesh Kerekuli
Chikkamagaluru (6)
Advertisment

ಚಿಕ್ಕಮಗಳೂರು: ರಾಜಕಾರಣಿಗಳು ಚುನಾವಣೆ ವೇಳೆ ನೀಡುವ ಭರವಸೆಗಳು ಚುನಾವಣೆ ಮುಗಿಯುತ್ತಿದ್ದಂತೆ ಗಾಳಿಯಲ್ಲಿ ತೂರಿ ಹೋಗುವುದು ಸಾಮಾನ್ಯ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ವ್ಯಕ್ತಿಯೊಬ್ಬರು ಗ್ರಾಮದ ಹಿತಕ್ಕಾಗಿ ತಾವು ಕೊಟ್ಟ ಮಾತಿನಂತೆ ಫಸಲು ನೀಡುತ್ತಿದ್ದ ಕಾಫಿ ತೋಟವನ್ನೇ ಕಡಿದು ರಸ್ತೆ ನಿರ್ಮಿಸಿಕೊಡುವ ಮೂಲಕ ಅಪ್ಪಟ 'ಸತ್ಯಹರಿಶ್ಚಂದ್ರ'ನಂತೆ ನಡೆದುಕೊಂಡಿದ್ದಾರೆ.

ಏನಿದು ಘಟನೆ?

ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸಮೀಪದ ತುದಿಯಳ ಎಂಬ ಪುಟ್ಟ ಗ್ರಾಮವದು. ಈ ಗ್ರಾಮದಲ್ಲಿ ಸುಮಾರು 15 ಕುಟುಂಬಗಳು ವಾಸವಾಗಿವೆ. ದಶಕಗಳಿಂದ ಈ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿರಲಿಲ್ಲ. ಪ್ರತಿ ಚುನಾವಣೆಯಲ್ಲೂ ರಾಜಕಾರಣಿಗಳು ಬಂದು "ರಸ್ತೆ ಮಾಡಿಕೊಡುತ್ತೇವೆ" ಎಂದು ಬಡವರ ಮೂಗಿಗೆ ತುಪ್ಪ ಸವರಿ ಮತ ಪಡೆದು ಹೋಗುತ್ತಿದ್ದರು. ಆದರೆ, ಜನರ ಸಮಸ್ಯೆ ಮಾತ್ರ ದಶಕಗಳಿಂದ ಹಾಗೆಯೇ ಇತ್ತು.

ಇದನ್ನೂ ಓದಿ: ಕನ್ನಡದ ‘ಅಕ್ಷರ ಯೋಗಿ’ ಅಂಕೇಗೌಡರಿಗೆ ಪದ್ಮಶ್ರೀ ಗೌರವ; 10 ಲಕ್ಷ ಪುಸ್ತಕಗಳ ‘ಪುಸ್ತಕ ಮನೆ’ಗೆ ಸಂದ ದೊಡ್ಡ ಮನ್ನಣೆ..!

Chikkamagaluru (4)

2020ರಲ್ಲಿ ನೀಡಿದ್ದ ಆ ಒಂದು ಮಾತು!

2020ರ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ತೋಟದ ಮಾಲೀಕ ಸತ್ಯ ಎಂಬುವವರು ಗ್ರಾಮಸ್ಥರಿಗೆ ಒಂದು ಭರವಸೆ ನೀಡಿದ್ದರು. "ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪುಟ್ಟರಾಜು ಅವರನ್ನು ಗೆಲ್ಲಿಸಿದರೆ, ಗ್ರಾಮಕ್ಕೆ ರಸ್ತೆ ನಿರ್ಮಿಸಲು ನನ್ನ ತೋಟದ ಜಾಗವನ್ನೇ ನೀಡುತ್ತೇನೆ. ಅಷ್ಟೇ ಅಲ್ಲ, ಕಾಫಿ ಗಿಡಗಳನ್ನು ಕಡಿದು ರಸ್ತೆ ಮಾಡಿಕೊಡುತ್ತೇನೆ" ಎಂದು ಮಾತು ಕೊಟ್ಟಿದ್ದರು.

30 ವರ್ಷದ ಫಸಲು ಬರುವ ತೋಟದ ತ್ಯಾಗ:

ಚುನಾವಣೆಯಲ್ಲಿ ಪುಟ್ಟರಾಜು ಗೆದ್ದರು. ಇತ್ತೀಚೆಗೆ ಅಂದರೆ ಎರಡು ತಿಂಗಳ ಹಿಂದೆಯಷ್ಟೇ ಅವರು ಪಂಚಾಯಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಪುಟ್ಟರಾಜು ಅಧ್ಯಕ್ಷರಾಗುತ್ತಿದ್ದಂತೆಯೇ ಅವರು ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. 30 ವರ್ಷಗಳಿಂದ ಫಸಲು ನೀಡುತ್ತಿದ್ದ, ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ. ಸುಮಾರು 750 ಮೀಟರ್ ಉದ್ದ ಹಾಗೂ 14 ಅಡಿ ಅಗಲದ ರಸ್ತೆಯನ್ನು ಸ್ವಂತ ಜಾಗದಲ್ಲಿ ನಿರ್ಮಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ‘ಅಕ್ಷರ ಯೋಗಿ’ ಅಂಕೇಗೌಡ ಯಾರು..? KSRTC ನೌಕರನ ಅಕ್ಷರ ಪ್ರೇಮ ‘ಪದ್ಮಶ್ರೀ’ ಮಟ್ಟಕ್ಕೆ ಬೆಳೆದ ಅಪರೂಪದ ಕಥೆ..!

Chikkamagaluru (3)

ಅಧ್ಯಕ್ಷರಿಂದಲೇ ರಸ್ತೆ ಉದ್ಘಾಟನೆ

ಹಲವು ದಶಕಗಳ ಕಾಲ ರಸ್ತೆಗಾಗಿ ಕಾದು ಕುಳಿತಿದ್ದ ಹಳ್ಳಿಗರಿಗೆ ಈಗ ಸಂಭ್ರಮವೋ ಸಂಭ್ರಮ. ನಿನ್ನೆ ಸತ್ಯ ಅವರು ಮತ್ತು ಗ್ರಾಮಸ್ಥರು ಸೇರಿ, ಯಾರ ಗೆಲುವಿಗಾಗಿ ರಸ್ತೆಯ ಭರವಸೆ ನೀಡಲಾಗಿತ್ತೋ ಅದೇ ಅಧ್ಯಕ್ಷ ಪುಟ್ಟರಾಜು ಅವರ ಕೈನಿಂದಲೇ ಹೊಸ ರಸ್ತೆಯನ್ನು ಉದ್ಘಾಟನೆ ಮಾಡಿಸಿದ್ದಾರೆ. ಈ ವೇಳೆ ಮಾತನಾಡಿದ ಪುಟ್ಟರಾಜು, "ಮುಂದಿನ ದಿನಗಳಲ್ಲಿ ಈ ರಸ್ತೆಗೆ ಕಾಂಕ್ರೀಟ್ ಹಾಕಿಸಿಕೊಡಲಾಗುವುದು" ಎಂದು ಭರವಸೆ ನೀಡಿದ್ದಾರೆ.

ಸಾರ್ವಜನಿಕರ ಪ್ರಶಂಸೆ

ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಜನ ಕಿತ್ತಾಡುವ ಈ ಕಾಲದಲ್ಲಿ, ಸಾರ್ವಜನಿಕ ಹಿತಕ್ಕಾಗಿ ಮತ್ತು ಕೊಟ್ಟ ಮಾತಿಗಾಗಿ ಫಸಲು ನೀಡುವ ತೋಟವನ್ನೇ ತ್ಯಾಗ ಮಾಡಿದ ಸತ್ಯ ಅವರ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಇವರು ಕೇವಲ ಹೆಸರಿಗೆ ಮಾತ್ರ 'ಸತ್ಯ' ಅಲ್ಲ, ಕಾಯಕದಲ್ಲೂ ಸತ್ಯವಂತ ಎಂದು ಜನ ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ಚಹಲ್​ಗೆ ಮತ್ತೆ ‘ಬ್ರೇಕ್​ ಅಪ್​’ ನೋವು.. ಸಿಕ್ಕ ಮತ್ತೊಬ್ಬ ಗೆಳತಿಗೂ ಟಾಟಾ ಹೇಳಿದ ಸ್ಪಿನ್ನರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chikkamagaluru news Satya Harishchandra
Advertisment