/newsfirstlive-kannada/media/media_files/2026/02/04/chikkamagaluru-7-2026-02-04-08-37-06.jpg)
ಚಿಕ್ಕಮಗಳೂರು: ಮದುವೆ ಬಗ್ಗೆ ಜಾತಕ ತೋರಿಸಲು ಹೋದಾಗ ಅರ್ಚಕ ಅತ್ಯಾಚಾರ ನಡೆಸಿರೋ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಜಾತಕದಲ್ಲಿ ದೋಷ ಇದೆ. ತಡೆ ಹೊಡೆಯಬೇಕು ಅಂತ ಯುವತಿಗೆ ನಂಬಿಸಿದ್ದ ಅರ್ಚಕ 2025 ನವೆಂಬರ್ 23 ರಿಂದ 2026 ಫೆಬ್ರವರಿ 2ರವರೆಗೆ ಹಲವು ಬಾರಿ ಅತ್ಯಾಚಾರ ನಡೆಸಿರೋದಾಗಿ ಆರೋಪ ಕೇಳಿ ಬಂದಿದೆ.
ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕನಿಂದ 23 ವರ್ಷದ ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆಯಂತೆ. ಆರೋಪಿ ಅರ್ಚಕ ಕೃಷ್ಣ ವಿರುದ್ಧ ನೊಂದ ಯುವತಿ ಬಣಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಬಣಕಲ್ ಪೊಲೀಸರು ಆರೋಪಿ ಅರ್ಚಕ ಕೃಷ್ಣರಾವ್​ನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: R.B ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿ ಮೈತ್ರಿ ನಾಯಕರ ಆಹೋರಾತ್ರಿ ಧರಣಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us