ಚರ್ಚ್‌ಗೆ ಹೋಗಿ ವಾಪಸ್‌ ಆಗ್ತಿದ್ದಾಗ ದುರಂತ; ಇಬ್ಬರು ಸಹೋದರರು ಸೇರಿ ನಾಲ್ವರು ಯುವಕರು ಬಲಿ

ಟಿಪ್ಪರ್ ಬೈಕ್ ನಡುವೆ ಡಿಕ್ಕಿಯಾಗಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ನಡೆದಿದೆ. ಒಂದೇ ಬೈಕ್‌ನಲ್ಲಿ ನಾಲ್ವರು ಯುವಕರು ಪ್ರಯಾಣ ಮಾಡ್ತಿದ್ದದ್ದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.

author-image
Ganesh Kerekuli
chikkaballapura (3)
Advertisment

ಚಿಕ್ಕಬಳ್ಳಾಪುರ: ಟಿಪ್ಪರ್  ಬೈಕ್ ನಡುವೆ ಡಿಕ್ಕಿಯಾಗಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್  ಬಳಿ ನಡೆದಿದೆ. ಒಂದೇ ಬೈಕ್‌ನಲ್ಲಿ ನಾಲ್ವರು ಯುವಕರು ಪ್ರಯಾಣ ಮಾಡ್ತಿದ್ದದ್ದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. 

ನರಸಿಂಹಮೂರ್ತಿ(22), ನಂದೀಶ್ (19),  ಅರುಣ್ (18) ಹಾಗೂ ಮತ್ತೋರ್ವ ಮನೋಜ್ (23)ಸಾವು ಮೃತ ದುರ್ದೈವಿಗಳು. ನರಸಿಂಹಮೂರ್ತಿ ಹಾಗೂ ನಂದೀಶ್ ಒಂದೇ ಕುಟುಂಬದ ಅಣ್ಣ ತಮ್ಮಂದಿರು. ಮೃತರೆಲ್ಲ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದ ನಿವಾಸಿಗಳು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. 

Bike Accident


ರಾಷ್ಟ್ರೀಯ ಹೆದ್ದಾರಿ 69 ರ ಅಜ್ಜವಾರ ಗೇಟ್ ಬಳಿ ದುರಂತ ಸಂಭವಿಸಿದೆ. ಕೆಎ 40 ಇಡಿ 2256 ಬೈಕ್ ಹಾಗೂ ಕೆಎ 40 ಬಿ 3087 ಟಿಪ್ಪರ್ ಲಾರಿ ನಡುವೆ ಡಿಕ್ಕಿಯಾಗಿದೆ.  ಶಿಡ್ಲಘಟ್ಟ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಹಾಗೂ ಚಿಕ್ಕಬಳ್ಳಾಪುರದಿಂದ ಅಜ್ಜವಾರ ಗ್ರಾಮದ ಕಡೆ ಹೋಗುತ್ತಿದ್ದ ಯುವಕರ ಮಧ್ಯೆ ಅಪಘಾತವಾಗಿದೆ. ಯುವಕರು ಚಿಕ್ಕಬಳ್ಳಾಪುರದಲ್ಲಿ ಚರ್ಚ್ ಗೆ ಹೋಗಿ ವಾಪಸ್‌ ಆಗುತ್ತಿದ್ದರು.

chikkaballapura (1)

ದುರ್ಘಟನೆಯಲ್ಲಿ ಜೀವ ಕಳೆದುಕೊಂಡ ನರಸಿಂಹಮೂರ್ತಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ. ಇಬ್ಬರು ಡೆಕೋರೆಷನ್, ಓರ್ವ ಡಿಮಾರ್ಟ್, ಮತ್ತೊಬ್ಬ ಮೊಬೈಲ್ ಅಂಗಡಿ ಯಲ್ಲಿ‌ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ:ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಪ್ರಕಾರ ಸಂಬಳ- ಎಷ್ಟು ಹೈಕ್ ಆಗಬಹುದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chikkaballapur Chikkaballapura news
Advertisment