Advertisment

ಹಣಕ್ಕಾಗಿ ಆಪ್ತಮಿತ್ರನ ಜೀವ ತೆಗೆದ.. ನಂತರ RS 2.5 ಲಕ್ಷ ದೋಚಿ 2ನೇ ಪತ್ನಿಗೆ ಭರ್ಜರಿ ಗಿಫ್ಟ್ ಕೊಟ್ಟ ಕಿರಾತಕ

ಏಳು ವರ್ಷಗಳ ಕಾಲ ಪ್ರಾಣ ಸ್ನೇಹಿತನಂತಿದ್ದ ವ್ಯಕ್ತಿಯನ್ನೇ ಹಣದ ಆಸೆಗಾಗಿ ಹ*ತ್ಯೆ ಮಾಡಿ, ಆ ಹಣದಲ್ಲಿ ತನ್ನ ಎರಡನೇ ಪತ್ನಿಗೆ ಉಡುಗೊರೆ ನೀಡಿದ ಘಟನೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಫಿಯನ್ನು ಪೊಲೀಸರು ಬಂಧಿಸಿದ್ದಾರೆ.

author-image
Ganesh Kerekuli
chikkamagaluru (8)
Advertisment

ಚಿಕ್ಕಮಗಳೂರು: ಏಳು ವರ್ಷಗಳ ಕಾಲ ಪ್ರಾಣ ಸ್ನೇಹಿತನಂತಿದ್ದ ವ್ಯಕ್ತಿಯನ್ನೇ ಹಣದ ಆಸೆಗಾಗಿ ಹ*ತ್ಯೆ ಮಾಡಿ, ಆ ಹಣದಲ್ಲಿ ತನ್ನ ಎರಡನೇ ಪತ್ನಿಗೆ ಉಡುಗೊರೆ ನೀಡಿದ ಘಟನೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಫಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisment

ಘಟನೆಯ ವಿವರ

ಚಿಕ್ಕಮಗಳೂರು ಜಿಲ್ಲೆಯ ಬೀರೂರು ನಿವಾಸಿಯಾದ ಶಫಿ ಮತ್ತು ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ಪುಟ್ಟರಾಜು ಕಳೆದ ಏಳು ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದರು. ಫೆಬ್ರವರಿ 19 ರಂದು ಶಫಿ ತನ್ನ ಗೆಳೆಯ ಪುಟ್ಟರಾಜುಗೆ ಒಂದು ಸುಳ್ಳು ಆಮಿಷ ಒಡ್ಡಿದ್ದ. ಹಣಕಾಸು ಕಂಪನಿಯೊಂದರಲ್ಲಿ ಚಿನ್ನದ ಹರಾಜು ನಡೆಯುತ್ತಿದೆ, ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಎಂದು ನಂಬಿಸಿದ್ದ. ಶಫಿಯ ಮಾತನ್ನು ನಂಬಿದ ಪುಟ್ಟರಾಜು, ಸುಮಾರು 2.5 ಲಕ್ಷ ರೂಪಾಯಿ ನಗದನ್ನು ತೆಗೆದುಕೊಂಡು ಅಂದು ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಹೊರಬಂದಿದ್ದರು.

ಇದನ್ನೂ ಓದಿ: 3 ದಿನದ ಹಿಂದಿನ ಸಾಂಬಾರ್ ಬಡಿಸಿದ್ದಕ್ಕೆ ಪತಿ ಕಿರಿಕ್.. ದುರಂತ ಅಂತ್ಯಕಂಡ ಪತ್ನಿ..

ಕಾಡಿನಲ್ಲಿ ಕೃತ್ಯ

ಆರೋಪಿ ಶಫಿ ತನ್ನ ಬೈಕ್‌ನಲ್ಲಿ ಪುಟ್ಟರಾಜು ಅವರನ್ನು ಹೊನ್ನವಳ್ಳಿ ಸಮೀಪದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಜನರಿಲ್ಲದ ಜಾಗ ನೋಡಿ ಪುಟ್ಟರಾಜು ಮೇಲೆ ಲಾಂಗಿನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊ*ಲೆ ಮಾಡಿದ್ದಾನೆ. ನಂತರ ಪುಟ್ಟರಾಜು ಬಳಿಯಿದ್ದ 2.5 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಮರುದಿನ ಬೆಳಿಗ್ಗೆ ಆ ರಸ್ತೆಯಲ್ಲಿ ಹೋಗುತ್ತಿದ್ದ ಹಾಲಿನ ವ್ಯಾಪಾರಿಯೊಬ್ಬರು ಶ*ವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.

Advertisment

ಎರಡನೇ ಪತ್ನಿಗೆ ಗಿಫ್ಟ್

ತನಿಖೆಯ ವೇಳೆ ಪುಟ್ಟರಾಜು ಕೊನೆಯದಾಗಿ ಯಾರ ಜೊತೆ ಸಂಪರ್ಕದಲ್ಲಿದ್ದರು ಎಂದು ಪರಿಶೀಲಿಸಿದಾಗ ಶಫಿಯ ಹೆಸರು ಕೇಳಿಬಂದಿದೆ. ಪೊಲೀಸರು ಶಫಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೆಚ್ಚಿಬೀಳುವ ಸತ್ಯ ಹೊರಬಂದಿದೆ. ಕೊ*ಲೆ ಮಾಡಿದ ನಂತರ ಶಫಿ ಅರಸೀಕೆರೆಯ ಲಾಡ್ಜ್ ಒಂದರಲ್ಲಿ ತನ್ನಿಂದ ದೂರವಾಗಿದ್ದ ಎರಡನೇ ಪತ್ನಿಯನ್ನು ಭೇಟಿಯಾಗಿದ್ದ. ಗೆಳೆಯನಿಂದ ದೋಚಿದ್ದ ಹಣದಲ್ಲಿ 60,000 ರೂಪಾಯಿಯನ್ನು ಆಕೆಗೆ ನೀಡಿದ್ದಲ್ಲದೆ, ಒಂದು ಹೊಸ ಎಲ್‌ಇಡಿ ಟಿವಿಯನ್ನು ಖರೀದಿಸಿಕೊಟ್ಟು ಆಕೆಯನ್ನು ಒಲಿಸಿಕೊಳ್ಳಲು ಯತ್ನಿಸಿದ್ದ ಎಂಬುದು ಬಯಲಾಗಿದೆ.

ಸ್ನೇಹಕ್ಕೆ ದ್ರೋಹ ಬಗೆದು ಹಣಕ್ಕಾಗಿ ಕೊ*ಲೆ ಮಾಡಿದ ಶಫಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಕೇವಲ ಹಣಕ್ಕಾಗಿ ಏಳು ವರ್ಷಗಳ ಗೆಳೆತನವನ್ನು ಬಲಿ ಕೊಟ್ಟ ಆರೋಪಿಯ ಕೃತ್ಯ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮದುವೆ ಸಂಭ್ರಮದಲ್ಲಿ ರೋಲೆಕ್ಸ್, ಕಾರ್ಟಿಯರ್ ಸೇರಿ ಲಕ್ಷುರಿ ವಾಚ್ ಧರಿಸಿ ಕಾಣಿಸಿಕೊಂಡ ನಟ ವಿಜಯ ದೇವರಕೊಂಡ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

friends dispute
Advertisment
Advertisment
Advertisment