/newsfirstlive-kannada/media/media_files/2025/10/18/snake-2025-10-18-11-54-23.jpg)
ಚಿಕ್ಕಮಗಳೂರು:ಭೂಮಿ ಮೇಲೆ ಆಗಾಗ ಕೆಲವೊಂದು ನಂಬದೇ ಆಗದಂತ ವಿಚಾರಗಳು ನಡೆಯುತ್ತವೆ. ಯಾವಾಗಲೂ ನಡೆಯುವಂತದ್ದು ಕೆಲವೊಮ್ಮೆ ಉಲ್ಟಾ ನಡೆದು ಬಿಡುತ್ತದೆ. ಅದೇ ರೀತಿ ಇಲ್ಲೊಂದು ಕಪ್ಪೆರಾಯ ನಾಗಣ್ಣನನ್ನೇ ನುಂಗಿ, ಹಸಿವು ನೀಗಿಸಿಕೊಂಡಿದ್ದಾನೆ.
ಹಾವು ಕಪ್ಪೆನ ನುಂಗೋದನ್ನ ನೀವೆಲ್ಲರೂ ನೋಡಿರ್ತೀರಾ, ಕೇಳಿರ್ತಿರಾ. ಆದ್ರೆ ಇಲ್ಲೊಂದು ಕಪ್ಪೆ ತನಗಿಂತ ದಪ್ಪದ ಹಾವನ್ನು ನುಂಗಿ ಅಚ್ಚರಿ ಮೂಡಿಸಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನಕೆರೆ ಸಮೀಪದ ಹಂದಿಗೋಡು ಗ್ರಾಮದಲ್ಲಿ ನಡೆದಿದೆ.
ಪೂರ್ಣಚಂದ್ರ ಎಂಬುವವರ ಮನೆ ಬಳಿ ಕಪ್ಪೆ ಹಾವನ್ನ ನುಂಗುವ ದೃಶ್ಯ ಕಂಡು ಬಂದಿದೆ. ಹಗಳ ಜಾತಿಯ ಹಾವನ್ನ ಕಪ್ಪೆಯೊಂದು ನುಂಗಲು ಮುಂದಾಗಿದೆ. ಅರ್ಧ ಹಾವನ್ನ ನುಂಗಿದ ಬಳಿಕ ಪೂರ್ತಿ ನುಂಗಲು ಕಪ್ಪೆ ಒದ್ದಾಡಿದೆ. ಬಳಿಕ ಬೇರೆ ಹಾವುಗಳು ಬಂದು ಕಪ್ಪೆಯಿಂದ ಹಾವನ್ನ ಬಿಡಿಸಲು ಮುಂದಾಯಿತು. ಆದ್ರೆ ಕಪ್ಪೆ ಮಾತ್ರ ಹಾವನ್ನ ಬಿಡದೆ ಸಂಪೂರ್ಣಯಾಗಿ ನುಂಗಿದೆ. ಸಣ್ಣ ಕಪ್ಪೆ ದೊಡ್ಡ ಹಾವನ್ನ ನುಂಗೋದು ಕಂಡು ಮಲೆನಾಡಿಗರು ಅಚ್ಚರಿಗೊಂಡರು.