/newsfirstlive-kannada/media/media_files/2025/10/30/chikkamagaluru-shruti-case-2025-10-30-13-46-04.jpg)
ಆಕೆ ಹಸಮಣೆ ಏರುವ ಖುಷಿಯಲ್ಲಿದ್ದಳು. ತುಂಬಾ ದಿನಗಳಿಂದ ಕಂಡಿದ ಕನಸು ಇನ್ನೇನು ನಾಳೆ ಅನ್ನುಷ್ಟರಲ್ಲಿ ಈಡೇರುತ್ತಿತ್ತು. ಆದರೆ ಆಕೆಯ ಬಾಳಿನ ವಿಧಿಬರಹ ತುಂಬಾನೇ ಕ್ರೂರವಾಗಿತ್ತು. ಮದುವೆ ಹಿಂದಿನ ದಿನ ಹೃದಯಾಘಾತ ಸಂಭವಿಸಿ ಪ್ರಾಣ ಕಳೆದುಕೊಂಡಿದ್ದಾಳೆ. ಭಾವಿ ಪತ್ನಿಯನ್ನು ಕಳೆದುಕೊಂಡ ಯುವಕ ಆಘಾತಕ್ಕೆ ಒಳಗಾಗಿದ್ದಾನೆ.
ಚಿಕ್ಕಮಗಳೂರು: ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ನಾಳೆ ಮದುವೆ ಆಗಬೇಕಿದ್ದ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
/filters:format(webp)/newsfirstlive-kannada/media/media_files/2025/10/30/chikkamagaluru-shruti-case-1-2025-10-30-13-46-51.jpg)
ಸಂಭ್ರಮದ ಮನೆ ಶೋಕದಲ್ಲಿ ಮುಳುಗಿದೆ..
ಶೃತಿ, ಮೃತ ಮದುಮಗಳು. 24 ವರ್ಷದ ಶೃತಿ ನಾಳೆ ಸಪ್ತಪದಿ ತುಳಿದು ಹೊಸ ಬಾಳಿಗೆ ಕಾಲಿಡಲಿದ್ದಳು. ಮದುವೆ ಖುಷಿಯಲ್ಲಿದ್ದ ಶೃತಿಗೆ ಲೋ ಬಿಪಿ ಕಾಣಿಸಿಕೊಂಡು ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವಧು ಪ್ರಾಣ ಕಳೆದುಕೊಂಡಿದ್ದಾಳೆ.
ತರೀಕೆರೆ ಮೂಲದ ಯುವಕ ದಿಲೀಪ್ ಜೊತೆ ಮದುವೆ ನಿಶ್ಚಯವಾಗಿತ್ತು. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಂಭ್ರಮದಲ್ಲಿದ್ದ ಮದುವೆ ಮನೆ ದುಃಖದಲ್ಲಿ ಮುಳುಗಿದೆ. ಮಗಳನ್ನು ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ. ಅಲ್ಲದೇ ಮದುವೆ ಮೂಲಕ ಹೊಸ ಬದುಕಿನ ಕನಸು ಕಂಡಿದ್ದ ವರ ಆಘಾತಕ್ಕೆ ಒಳಗಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us