Advertisment

ಬಿಗ್​​ಬಾಸ್​ನಲ್ಲಿ ಅಶ್ವಿನಿ ‘ಪವರ್‌ ಕಾರ್ಡ್‌’ ಅಂತೆ.. ಕಾವ್ಯ ಮೇಲೆ ದೊಡ್ಡ ಆರೋಪ

ಬಿಗ್‌ಬಾಸ್‌ ಸೀಸನ್‌ 12 ಆರಂಭ ಆದಾಗಿನಿಂದಲೂ ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಕಾಲುಕೆರೆದು ಜಗಳಗಳು ಆಗುತ್ತಲೇ ಇರುತ್ತದೆ. ಅದರಲ್ಲೂ ಅಶ್ವಿನಿ ಗೌಡ ಇಂಥ ಜಗಳದಲ್ಲಿ ಎತ್ತಿದ ಕೈ, ಇದೀಗ ಕಾವ್ಯ ಮೇಲೆ ದೊಡ್ಡ ಆರೋಪವನ್ನೇ ಮಾಡಿದ್ದಾರೆ.

author-image
Ganesh Kerekuli
Ashwini Gowda (10)
Advertisment

ಅಶ್ವಿನಿ ಗೌಡ ಟಾಸ್ಕ್‌ನಲ್ಲಿ ಹೇಗೆ ಪರ್ಫಾರ್ಮ್‌ ಮಾಡ್ತಾರೋ ಬಿಡ್ತಾರೋ ಆದ್ರೆ ಯಾರೇ ಜಗಳ ಆಡ್ತಿರ್ಲಿ ಇಬ್ಬರ ನಡುವೆ ಇವರು ಖಂಡಿತಾ ಹೋಗುತ್ತಾರೆ. ಪ್ರತಿನಿತ್ಯ ಬಿಗ್‌ಬಾಸ್‌ ಮನೆಯಲ್ಲಿ ಜಗಳ ಆಗುತ್ತಿರುತ್ತೆ. ಅದರಲ್ಲಿ ಕಾಮನ್‌ ಆಗಿ ಕೇಳೋ ಧ್ವನಿ ಅಶ್ವಿನಿ ಗೌಡದೆ. ಇಂಥಾ ಅಶ್ವಿನಿ ಗೌಡ ಇದೀಗ ಕಾವ್ಯ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ.
 
ಇತ್ತೀಚೆಗಷ್ಟೆ ಕಾವ್ಯ ಹಾಗೂ ಅಶ್ವಿನಿ ಗೌಡ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದನ್ನು ಬಗೆಹರಿಸಲೋ ಅಥವಾ ಕೆಂಡಕ್ಕೆ ತುಪ್ಪ ಸುರಿಯುವ ಕೆಲಸ ಮಾಡಲೋ ಅಂತೂ ಅಶ್ವಿನಿ ಕಾವ್ಯ ಜೊತೆ ಮಾತಾಡುವ ಪ್ರಯತ್ನ ಮಾಡಿದ್ದಾರೆ. ಕಾವ್ಯ ಅಶ್ವಿನಿಯ ಮಾತಿಗೆ ಬೆಲೆಯನ್ನೇ ಕೊಡಲಿಲ್ಲ. ಬದಲಾಗಿ ಅಶ್ವಿನಿಯೂ ತನ್ನ ಬಳಿ ಮಾತಾಡಲು ಬರಬಹುದಿತ್ತಲ್ಲ ಎಂದು ಹೇಳಿದ್ದಾರೆ, ಇದರಿಂದ ಕೋಪಗೊಳ್ಳೋ ಅಶ್ವಿನಿ ಕಾವ್ಯ ಅಶ್ವಿನಿ ಗೌಡ ಅನ್ನೋ ಪವರ್‌ ಕಾರ್ಡ್‌ನ ಇಟ್ಕೊಂಡು ಆಟ ಆಡೋಕೆ ಪ್ರಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisment

ಇದನ್ನೂ ಓದಿ: ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೇಸ್​..! ಯಾಕೆ ಏನಾಯ್ತು..?

Ashwini and Jahnvi (1)


 
ಈ ಮಾತುಕತೆ ಅದ್ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ ಅಶ್ವಿನಿ ಗೌಡ ಬಾ ಅಖಾಡಕ್ಕಿಳಿ ನೋಡೋಣ. ಆಟದಲ್ಲಿ ಗೆಲ್ಲೋ ಯೋಗ್ಯತೆನೇ ಇಲ್ಲ ಎಂದೆಲ್ಲ ಮಾತಾಡಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ರಕ್ಷಿತಾ ವಿಚಾರದಲ್ಲಿ ಈ ಮೊದಲೇ ಒಂದು ಸರಿ ಸುದೀಪ್‌ ವಾರ್ನಿಂಗ್‌ ಮಾಡಿದ್ದರು. ಅಲ್ಲದೆ ಬಿಗ್‌ಬಾಸ್‌ ಮನೆಯಲ್ಲಾಗುವ ಶಬ್ದ ಪ್ರಯೋಗಗಳ ಬಗ್ಗೆಯೂ ಎಚ್ಚರಿಸಿದ್ರು. ಹಾಗಿದ್ರೂ ಅಶ್ವಿನಿ ಪದೇ ಪದೇ ತಾವೇ ಬಿಗ್‌ಬಾಸ್‌ ವಿನ್ನರ್‌, ತಮ್ಮಿಂದಲೇ ಬಿಗ್‌ಬಾಸ್‌ ನಡೀತಿದೆ ಅನ್ನೋ ಮಟ್ಟಕ್ಕೆ ಮಾತಾಡುತ್ತಿದ್ದಾರೆ, ಇದು ಎಲ್ಲಿಗೆ ತಲುಪುತ್ತೆ ಅನ್ನೋದನ್ನ ನೋಡಿ ಇವತ್ತಿನ ಎಪಿಸೋಡ್‌ನಲ್ಲಿ.. 

ಇದನ್ನೂ ಓದಿ: ಬೇಕಂತ್ಲೇ ಮಿಸ್‌ ಆಯ್ತು ರಾಶಿಕಾ ಚಾನ್ಸ್‌.. ಗಿಲ್ಲಿ ಹೀಗೆ ಮಾಡಬಹುದಿತ್ತಾ..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bigg boss kavya Ashwini Gowda Bigg Boss kiccha sudeep Bigg Boss Kannada 12 Bigg boss BBK12
Advertisment
Advertisment
Advertisment