/newsfirstlive-kannada/media/media_files/2025/10/30/rashik-shetty-2025-10-30-12-30-40.jpg)
ಬಿಗ್‌ಬಾಸ್ ಮನೆಯಲ್ಲಿ ಕಳೆದ ಮೂರು ವಾರಗಳ ಆಟವೇ ಬೇರೆ ಈ ವಾರದ ಆಟವೇ ಬೇರೆ. ಹಿಂದಿನ ವಾರಗಳಲ್ಲಿ ತುಂಬಾ ಟಾಸ್ಕ್‌ಗಳು ಇರುತ್ತಿರಲಿಲ್ಲ. ಹಾಗಾಗಿ ಎಲ್ಲ ಸ್ಪರ್ಧಿಗಳಿಗೆ ಆಡೋಕೆ ಅವಕಾಶ ಸಿಗುತ್ತಿರಲಿಲ್ಲ. ಆದ್ರೆ ಈ ವಾರ ಬ್ಯಾಕ್ ಟು ಬ್ಯಾಕ್ ಟಾಸ್ಕ್‌ಗಳಿದ್ದು ಎಲ್ಲ ಸ್ಪರ್ಧಿಗಳಿಗೂ ಅವಕಾಶ ಸಿಗುತ್ತಿದೆ. ಎಲ್ಲರೂ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟು ತಮ್ಮನ್ನು ಸಾಬೀತುಪಡಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ಸ್ಥಳದಲ್ಲೇ ಪ್ರಾಣ ಚೆಲ್ಲಿದ ಮೂವರು
/filters:format(webp)/newsfirstlive-kannada/media/media_files/2025/10/29/ashwini-rashika-2025-10-29-22-34-19.jpg)
ಇಂಥವರಲ್ಲಿ ರಾಶಿಕಾ ಕೂಡ ಒಬ್ಬರು. ಮೊದಲ ಗ್ರ್ಯಾಂಡ್ ಫಿನಾಲೆಯ ಫೈನಲಿಸ್ಟ್ ಆಗಿದ್ರೂ ರಾಶಿಕಾ ಮನೆಯಲ್ಲಿ ಎಲ್ಲೋ ಕಳೆದು ಹೋಗಿದ್ದಾಳೆ ಅನ್ನೋ ಅರೋಪ ಅವರ ಮೇಲೆ ಬಂದಿತ್ತು. ಇದನ್ನು ತಪ್ಪು ಎಂದು ಪ್ರೂವ್ ಮಾಡೋ ಪ್ರಯತ್ನದಲ್ಲಿರುವ ರಾಶಿಕಾ ತಮ್ಮ ಬೆಸ್ಟ್ ಕೊಡೊ ಎಲ್ಲ ಯತ್ನವನ್ನೂ ಮಾಡುತ್ತಿದ್ದಾರೆ. ನಿನ್ನೆ ನಡೆದ ಟಾಸ್ಕ್‌ನಲ್ಲೂ ಚೆನ್ನಾಗೇ ಆಡಿ ತಮ್ಮ ತಂಡದ ಗೆಲುವಿಗೆ ಕಾರಣವೂ ಆಗಿದ್ರು.
ಗೆದ್ದ ತಂಡಕ್ಕೆ ತಮ್ಮ ತಂಡದಿಂದ ಸ್ಟೂಡೆಂಟ್ ಆಫ್ ದಿ ವೀಕ್ ಆಯ್ಕೆ ಮಾಡುವ ಅವಕಾಶ ಇತ್ತು. ಸ್ಪಂದನಾ ಹಾಗೂ ಗಿಲ್ಲಿ ತಾವೇ ಸ್ಟೂಡೆಂಟ್ ಆಫ್ ದಿ ವೀಕ್ ಆಗಬೇಕು ಎಂದು ವಾದಿಸಿದ್ರು. ಉಳಿದವರು ರಾಶಿಕಾಗೆ ಬೆಂಬಲಿಸಿದ್ರು. ರಾಶಿಕಾ ಚೆನ್ನಾಗಿ ಆಡಿದ್ರು ನಿಜ, ಆದ್ರೆ ತಾನೂ ಕಳಪೆಯಾಗಿ ಆಡಿಲ್ಲವಲ್ಲ ಅನ್ನೋದು ಗಿಲ್ಲಿ ವಾದವಾಗಿತ್ತು. ಹಾಗಾಗಿ ಗಿಲ್ಲಿ ತಮ್ಮ ಬೆಂಬಲವನ್ನು ರಾಶಿಕಾಗೆ ನೀಡೋಕೆ ಒಪ್ಪೋದೇ ಇಲ್ಲ.
ಇದೊಂದೇ ಕಾರಣದಿಂದ ಬಿಗ್‌ಬಾಸ್ ಸ್ಟೂಡೆಂಟ್ ಆಫ್ ದಿ ವೀಕ್ ಚೂಸ್ ಮಾಡೋ ಅವಕಾಶವನ್ನೇ ತಂಡದಿಂದ ಹಿಂಪಡೆದುಕೊಂಡರು. ಇದ್ರಿಂದ ರಾಶಿಕಾಗೆ ಕ್ಯಾಪ್ಟನ್ ಆಗೋ ಅವಕಾಶ ಸಿಗೋದು ಪಕ್ಕಾ ಅನಿಸಿದ್ರು ಗಿಲ್ಲಿ ಒಬ್ಬರ ಹಟದಿಂದ ಅದೂ ಇಲ್ಲ ಅನ್ನುವಂತಾಗಿದೆ. ಇದಕ್ಕೇ ಅನ್ನೋದು ಟೀಂನಲ್ಲಿ ಒಗ್ಗಟ್ಟಿರಬೇಕು ಅಂಥ.
ಇದನ್ನೂ ಓದಿ:ಅಶ್ವಿನಿ ಗೌಡಗೆ ಹಿಗ್ಗಾಮುಗ್ಗಾ ಜಾಡಿಸಿದ ಕಾವ್ಯ ಶೈವ.. VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us