/newsfirstlive-kannada/media/media_files/2025/10/30/shimogga-accident-2025-10-30-11-57-44.jpg)
ಶಿವಮೊಗ್ಗ: ತಾಲೂಕಿನ ತಾವರೆ ಚಟ್ನಹಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಸಾದುಲ್ಲಾ (35), ಸಾದಿಕ್ (31), ಫೈರೋಜ್ (33) ಮೃತ ದುರ್ದೈವಿಗಳು. ಇವರೆಲ್ಲ ಕಾರ್ಮಿಕರಾಗಿದ್ದು, ಬಾಳೆಹೊನ್ನೂರು ಬಳಿ ಕಾರ್ಪೆಂಟರ್ ಕೆಲಸ ಮುಗಿಸಿ ತಾವರೆ ಚಟ್ನಹಳ್ಳಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದರು.
ಗೂಡ್ಸ್ ವಾಹನದ ಮೂಲಕ ಊರಿಗೆ ವಾಪಸ್ಸಾಗುವ ವೇಳೆ ಚಾಲಕ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಘೋರ ದುರಂತ ಸಂಭವಿಸಿದೆ. ಈ ಅಪಘಾತದಲ್ಲಿ ವಾಹನ ಚಾಲಕ ಇರ್ಫಾನ್ ಬದುಕುಳಿದಿದ್ದಾನೆ. ಅಪಘಾತಕ್ಕೆ ಡ್ರೈವರ್ ನಿದ್ದೆ ಮಂಪರಿನಲ್ಲಿ ಇರೋದೇ ಪ್ರಮುಖ ಕಾರಣ ಎನ್ನಲಾಗಿದೆ.
ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೇಸ್​..! ಯಾಕೆ ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us