/newsfirstlive-kannada/media/media_files/2025/10/10/virendra-pappi-2-2025-10-10-10-17-51.jpg)
ಕ್ಯಾಸಿನೋ ಬ್ಯುಸಿನೆಸ್, ಆನ್​ಲೈನ್​, ಆಫ್​ಲೈನ್​ ಬೆಟ್ಟಿಂಗ್​​ ಪ್ರಕರಣದಲ್ಲಿ ಕಾಂಗ್ರೆಸ್​​ ಶಾಸಕ, ಉದ್ಯಮಿ ವೀರೇಂದ್ರ ಪಪ್ಪಿಯ ಸಾಮ್ರಾಜ್ಯ ಕಂಡ ಇಡಿ ಶಾಕ್​ ಆಗಿದೆ. ಇದೀಗ ಬ್ಯಾಂಕ್​ನ 2 ಲಾಕರ್​ನಲ್ಲಿದ್ದ 50 ಕೋಟಿ ರೂ. ಮೌಲ್ಯದ 40 ಕೆಜಿ ಚಿನ್ನ ಸೀಜ್ ಮಾಡಿದ್ದಾರೆ. ಈ ಕೇಸಲ್ಲಿ ವಶಕ್ಕೆ ಪಡೆದ ಒಟ್ಟು ಆಸ್ತಿ ಮೌಲ್ಯ 150 ಕೋಟಿ ರೂಪಾಯಿ ದಾಟಿದೆ.
ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್.. ಅಕ್ರಮ ಹಣ ವರ್ಗಾವಣೆ ಪ್ರಕರಣ.. ದುರ್ಗದ ಶಾಸಕನಿಗೆ ಇಡಿ ಅಧಿಕಾರಿಗಳು ಬೆಂಡೆತ್ತುತ್ತಿದ್ದಾರೆ.. ಬಂಧಿತ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಗೆ ಜಾರಿ ನಿರ್ದೇಶನಾಲಯ ಇವತ್ತು ಮತ್ತೊಂದು ಆಘಾತ ನೀಡಿದೆ.. ಪಪ್ಪಿಗೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ 50 ಕೋಟಿ ರೂಪಾಯಿ ಮೌಲ್ಯದ 40 ಕೆ.ಜಿ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ..
ಇದನ್ನೂ ಓದಿ: ಮೌನ ಮುರಿದ ಚೆಲುವೆ ರಚನಾ.. ಭಾವುಕ ಪೋಸ್ಟ್​​ನಲ್ಲಿ ಅಂಥದ್ದೇನಿದೆ..?
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಯನ್ನ ಆಗಸ್ಟ್ ತಿಂಗಳು ಸಿಕ್ಕಿಂನ ಗ್ಯಾಂಗ್‌ಟಾಕ್‌ನಲ್ಲಿ ಬಂಧಿಸಲಾಗಿತ್ತು. ಅಂದಿನಿಂದಲೂ ಪ್ರಕರಣದಲ್ಲಿ ಹೊಸ ಹೊಸ ಅಕ್ರಮಗಳು ಬೆಳಕಿಗೆ ಬರುತ್ತಲೇ ಇವೆ. ನಿನ್ನೆ 4ನೇ ಬಾರಿಗೆ ಚಳ್ಳಕೆರೆ ಪಟ್ಟಣದಲ್ಲಿ ED ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ಬಾರಿ ಬೃಹತ್​​ ಬೇಟೆ ಆಡಿ ಮುಗಿಸಿದ ಇ.ಡಿಗೆ ಎಲ್​ಡೋರಾಡೋ ಭಂಡಾರವೇ ಸಿಕ್ಕಿದೆ.
ಶಾಸಕ ಪಪ್ಪಿ ಪಾಲಿಗೆ ಇವತ್ತು ಬಿಗ್​​ ಶಾಕ್​​​ ತಟ್ಟಿದೆ.. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ಬ್ಯಾಂಕ್‌ನ ಎರಡು ಲಾಕರ್‌ಗಳ ಮೇಲೆ ಇತ್ತೀಚೆಗೆ ಶೋಧ ಕಾರ್ಯ ನಡೆಸಲಾಗಿದೆ.
40 ಕೆ.ಜಿ ಗೋಲ್ಡ್​ ಸೀಜ್​!
- ಚಳ್ಳೆಕೆರೆಯಲ್ಲಿ ಎರಡು ಲಾಕರ್‌ಗಳಲ್ಲಿ ಸೀಜ್​​ ಆದ ಗೋಲ್ಡ್​​
- ₹50.33 ಕೋಟಿ ರೂಪಾಯಿ ಮೌಲ್ಯದ ಗೋಲ್ಡ್ ಸೀಜ್
- ಒಟ್ಟು 40 ಕೆ.ಜಿ ತೂಕದ 24 ಕ್ಯಾರೆಟ್ ಚಿನ್ನದ ಬಿಸ್ಕೇಟ್​ಗಳು
- ಇದಕ್ಕೂ ಮೊದಲು 21 ಕೆಜಿ ಚಿನ್ನದ ಗಟ್ಟಿಗಳು ಇ.ಡಿ ವಶಕ್ಕೆ
- ಚಿನ್ನ, ಬೆಳ್ಳಿ, ಬ್ಯಾಂಕ್ ಖಾತೆಗಳು, ದುಬಾರಿ ವಾಹನಗಳು
- ಎಲ್ಲದರ ರೂಪದಲ್ಲಿ ₹103 ಕೋಟಿ ಮೌಲ್ಯದ ಆಸ್ತಿ ಪತ್ತೆ
- ಬೆಟ್ಟಿಂಗ್ ವಹಿವಾಟು ಅಂದಾಜು ₹2,000 ಕೋಟಿಗೂ ಹೆಚ್ಚು
ಇದನ್ನೂ ಓದಿ: ಬೆಂಗಳೂರಲ್ಲಿ ಅತಿ ದೊಡ್ಡ ಭೂ ಹಗರಣ.. 500 ಕೋಟಿ ರೂಪಾಯಿ ಬೆಲೆ ಬಾಳುವ ಜಾಗ ಗುಳುಂ..?
ಪಪ್ಪಿಗೆ ಸೇರಿದ ₹150 ಕೋಟಿಗೂ ಹೆಚ್ಚು ಸಂಪತ್ತು ವಶ!
ವೀರೇಂದ್ರ ಪಪ್ಪಿ 'King567', 'Raja567', 'Puppy's003' ನಂತಹ ಹಲವಾರು ಆನ್‌ಲೈನ್ ಬೆಟ್ಟಿಂಗ್ ತಾಣಗಳನ್ನ ನಡೆಸ್ತಿದ್ರು ಎಂಬ ಆರೋಪ ಇದೆ.. ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಈವರೆಗೆ 30ಕ್ಕೂ ಹೆಚ್ಚು ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ.. ಅಂದಾಜಿನ ಪ್ರಕಾರ ಇ.ಡಿ ವಶಪಡಿಸಿಕೊಂಡಿರುವ ಒಟ್ಟು ಆಸ್ತಿ ಮೌಲ್ಯವು 150 ಕೋಟಿಗೂ ಅಧಿಕವಾಗಿದೆ. ಈ ಬಗ್ಗೆ ಇ.ಡಿ. ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಇ.ಡಿ. ಟ್ವೀಟ್ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ.
ED, Bengaluru has carried out search operations on 09.10.2025 under the provisions of PMLA, 2002 in the case of K C Veerendra and others related to cheating public in illegal online betting case. During the search, 24 carat gold bullion weighing 40 kgs (approx.) worth Rs. 50.33… pic.twitter.com/CbwUnkpYw9
— ED (@dir_ed) October 9, 2025
ಒಟ್ಟಾರೆಯಾಗಿ, ಈ ಅಕ್ರಮ ಆನ್ಲೈನ್ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ವೀರೇಂದ್ರ ಪಪ್ಪಿಯವರ ಒಡೆತನದ ಸಂಸ್ಥೆಗಳು ಒಂದೇ ಗೇಟ್‌ವೇ ಮೂಲಕ ₹2,000 ಕೋಟಿಗೂ ಹೆಚ್ಚು ಹಣವನ್ನ ಸಂಗ್ರಹಿಸಿರುವ ಬಗ್ಗೆ ಕೋರ್ಟ್​​ಗೆ ಇ.ಡಿ ಮಾಹಿತಿ ನೀಡಿದೆ.. ಇ.ಡಿ ದಾಳಿ ಮುಂದುವರೆದಿದ್ದು, ಪ್ರಕರಣದ ತನಿಖೆ ಮತ್ತಷ್ಟು ಆಳಕ್ಕೆ ಇಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಅತಿ ದೊಡ್ಡ ಭೂ ಹಗರಣ.. 500 ಕೋಟಿ ರೂಪಾಯಿ ಬೆಲೆ ಬಾಳುವ ಜಾಗ ಗುಳುಂ..?
ವಿಶೇಷ ವರದಿ: ರಾಘವೇಂದ್ರ, ನ್ಯೂಸ್​​ಫಸ್ಟ್​, ಚಿತ್ರದುರ್ಗ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ