/newsfirstlive-kannada/media/media_files/2025/10/09/divya-uruduga-1-2025-10-09-13-47-39.jpg)
ಲೇಡಿ ಸೂಪರ್ ಸ್ಟಾರ್ ರಚನಾ ತೆರೆಯ ಮೇಲೆ ಚಿಟ್ಟೆ ರೀತಿ ಹಾರಾಡಿವುದನ್ನ ಜನರೋ ಕಣ್ತುಂಬಿಕೊಂಡರು. ಈಗ ಸೂಪರ್‌ಸ್ಟಾರ್ ರಚನಾ ತೆರೆಯ ಮೇಲೆ ಬರೋದಕ್ಕೆ ವಿದಾಯ ಹೇಳ್ಬಿಟ್ಟಿದ್ದಾಳೆ. ಇಷ್ಟು ದಿನ ಆಕೆಯನ್ನ ನೋಡ್ತಿದ್ದ ಜನರು ಮೌನವಾಗಿದ್ದಾರೆ. ಇಷ್ಟು ದಿನ ಮೌನವಾಗಿದ್ದ ಚೆಲುವೆ ರಚನಾ ಮೌನ ಮುರಿದಿದ್ದಾಳೆ. ನಿನಗಾಗಿ ಪಯಣಕ್ಕೆ ಪದಗಳಿಂದ ಅಲಂಕಾರ ಮಾಡಿ ಭಾವುಕಳಾಗಿದ್ದಾಳೆ.
ಇದನ್ನೂ ಓದಿ: BIGG BOSS ಕಂಟೆಸ್ಟೆಂಟ್ಸ್​ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಇಬ್ಬರೂ ಅತ್ತೆ- ಸೊಸೆ ಗೊತ್ತಾ..?
ಸೀರಿಯಲ್ ಅಂದ್ಮೇಲೆ ಎಮೋಷನ್ ಕಾಮನ್. ಈ ಧಾರವಾಹಿಯಲ್ಲಿದ್ದ ಎಮೋಷನ್‌ನ ತೀರ ಗಾಢವಾಗಿತ್ತು. ಕಾರಣ ಈ ಧಾರವಾಹಿಯಲ್ಲಿ ಕ್ರಿಯೇಟ್ ಆಗಿದ್ದ ಪಾತ್ರಗಳು, ಆ ಪಾತ್ರಗಳಲ್ಲೇ ಅವಿತ್ತಿದ್ದ ಕಥೆಗಳು ಮತ್ತು ಆ ಪಾತ್ರವನ್ನ ಜೀವಿಸಿದ ಪಾತ್ರಧಾರಿಗಳು.
ಇದನ್ನೂ ಓದಿ: ಶಿಷ್ಯೆಯ ಗುರುಭಕ್ತಿಗೆ ಮಂಡ್ಯ ರಮೇಶ್ ಭಾವುಕ.. ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ತೆಲುಗು ಝೀ ವೇದಿಕೆ
ಇಡೀ ಸೀರಿಯಲ್‌ನ ಮಿಂಚಿದ್ದ ಲೇಡಿ ಸೂಪರ್‌ಸ್ಟಾರ್ ರಚನಾ ಅಲಿಯಾಸ್ ದಿವ್ಯಾ ಉರುಡುಗ. ಬಿಗ್‌ಬಾಸ್ ನಂತರ ಒಂದೊಳ್ಳೆ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ದಿವ್ಯಾ ಉರುಡುಗ, ಪಾತ್ರಕ್ಕೆ ಜೀವ ತುಂಬಿದರು ಅನ್ನೋದಕ್ಕಿಂತ ಪಾತ್ರವೇ ಆಗಿದ್ದರು. ಕೆಲ ವರ್ಷಗಳ ಈ ಜರ್ನಿಯನ್ನ ಎಂಜಾಯ್ ಮಾಡಿರೋ ದಿವ್ಯಾ ಉರುಡುಗ ವಿದಾಯ ಹೇಳುವಾಗ ಭಾವುಕರಾಗಿದ್ದಾರೆ.
ನಿನಗಾಗಿ ಸೀರಿಯಲ್ ವೈಂಡಪ್ ಆದ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋ ದಿವ್ಯಾ ಉರುಡುಗ, ಇದೊಂದು ಅಚ್ಚಳಿಯದೆ ಉಳಿಯುವ ಪಯಣ, ಜೀವನಾನುಭವ ನೀಡಿದ ಪ್ರಾಜೆಕ್ಟ್ ಅಂತಾ ಬರೆದುಕೊಂಡಿದ್ದಾರೆ. ಇಡೀ ತಂಡಕ್ಕೆ ಧನ್ಯವಾದ ತಿಳಿಸಿರುವ ದಿವ್ಯಾ ಉರುಡುಗ, Until Next Time signing off Racchuu ಅಂತಾ ಬರೆದುಕೊಂಡಿದ್ದಾರೆ.
ಯಾವುದೇ ಕಲಾವಿದರಿಗೂ ಜೀವಿಸಿದ ಪಾತ್ರ ಹೃದಯಾಂತರಾಳದಲ್ಲಿ ಸ್ಥಾನ ಪಡೆದುಕೊಂಡಿರುತ್ತೆ. ದಿವ್ಯಾ ಉರುಡುಗೂ ರಚ್ಚು... ಕೂಡ ಹೀಗೇಯೇ... ಹೃದಯ ಬಯಸುವ, ಹೃದಯವೇ ಮೆಚ್ಚಿ ಹೊಗಳುವ ಪಾತ್ರ.. ಮೋಸ್ಟ್ ಮೆಮೋರಬಲ್ ಪಾತ್ರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ