/newsfirstlive-kannada/media/media_files/2025/12/26/chitradurga-accident-3-2025-12-26-09-22-38.jpg)
ಹುಬ್ಬಳ್ಳಿ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಸಂಭವಿಸಿದ ಬಸ್ ದುರಂತ ಪ್ರಕರಣದಲ್ಲಿ ಮೃತರ ಸಂಖ್ಯೆ 7ಕ್ಕೆ ಏರಿಕೆ ಆಗಿದೆ. ಸೀ ಬರ್ಡ್ ಬಸ್ ಚಾಲಕ ಚಿಕಿತ್ಸೆ ಫಲಿಸದೇ ಮಹಮದ್ ರಫೀಕ್ ಮೃತಪಟ್ಟಿದ್ದಾರೆ.
ಹಿರಿಯೂರಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರ್ಘಟನೆಯಲ್ಲಿ ರಫಿಕ್ 2 ಕಾಲುಗಳನ್ನ ಕಳೆದುಕೊಂಡಿದ್ದರು. ಆಪರೇಷನ್ ವೇಳೆ ಚಿಕಿತ್ಸೆ ಫಲಿಸದೇ ಚಾಲಕ ಜೀವ ಕಳೆದುಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/12/25/chitradurga-district-between-hiriyuru-sira-seabird-bus-accident_massive-bus-tragedy_driver-2025-12-25-07-37-20.png)
ಇನ್ನು ಪೊಲೀಸ್ ಇಲಾಖೆ ಮೃತದೇಹಗಳ DNA ಪರೀಕ್ಷೆಗೆ ಮುಂದಾಗಿದೆ. ಮೃತ ನವ್ಯಾ, ಮಾನಸಾ, ರಶ್ಮಿ, ಬಿಂದು, ಗ್ರೀಯಾ ಮೃತದೇಹಗಳು ಗುರುತಿಸಲು ಆಗದ ರೀತಿಯಲ್ಲಿ ಪೂರ್ತಿಯಾಗಿ ಬೆಂದು ಹೋಗಿದ್ದು DNA ಟೆಸ್ಟ್ ಗೆ ಮುಂದಾಗಿದ್ದಾರೆ. ಸದ್ಯ ತಂದೆ, ತಾಯಿ ಹಾಗೂ ಸಹೋದರ, ಸಹೋದರಿಯರ DNA ಸ್ಯಾಂಪಲ್ಸ್​​​ ವೈದ್ಯರು ಸಂಗ್ರಹಿಸಿದ್ದು, 3 ದಿನಗಳ ಬಳಿಕ DNA ವರದಿ ಬರುವ ನಿರೀಕ್ಷೆ ಇದೆ. ವರದಿ ಬಂದ ಬಳಿಕ ಮೃತದೇಹಗಳನ್ನ ಕುಟುಂಬಸ್ತರಿಗೆ ಹಸ್ತಾಂತರ ಮಾಡಲಿದ್ದಾರೆ.
ಇದನ್ನೂ ಓದಿ: ಮೈಸೂರು ಅರಮನೆ ಮುಂಭಾಗ ಸ್ಫೋಟ.. ಮೃತ ವ್ಯಕ್ತಿ ಸಲೀಂ ವಿರುದ್ಧ FIR, ಗುರುತು ಪತ್ತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us