/newsfirstlive-kannada/media/media_files/2025/12/26/mysore-aramane-blast-2025-12-26-08-57-01.jpg)
ಕ್ರಿಸ್​​ಮಸ್​​ ಹಬ್ಬದ ದಿನವೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಘೋರ ದುರಂತ ಸಂಭವಿಸಿದೆ. ನಿನ್ನೆ ಸಂಜೆ ಮೈಸೂರು ಅರಮನೆ ಮುಂಭಾಗ ಬಲೂನ್​ಗೆ ಗ್ಯಾಸ್​ ತುಂಬುವಾಗ ಹೀಲಿಯಂ ಸಿಲಿಂಡರ್​ ಸ್ಫೋಟಗೊಂಡ ಘಟನೆ ನಡೆದಿದೆ.
ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಈ ದುರ್ಘಟನೆ ಸಂಭವಿಸಿದೆ. ಫುಟ್​​ಪಾತ್​​​ನಲ್ಲಿ ಹೀಲಿಯಂ ಬಲೂನ್​ ಮಾರುವ ವ್ಯಾಪಾರಿ ಸೈಕಲ್​​ನಲ್ಲಿ ವ್ಯಾಪಾರ ಮಾಡ್ತಿದ್ದ. ಈ ವೇಳೆ ಹೀಲಿಯಂ ಬಲೂನ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಪಕ್ಕದಲ್ಲೇ ಇದ್ದ ಬಲೂನ್ ವ್ಯಾಪಾರಿ ದೇಹ ಛಿದ್ರಛಿದ್ರವಾಗಿದೆ. ಇನ್ನು ಸ್ಥಳದಲ್ಲೇ ನಿಂತಿದ್ದ ಐದು ಮಂದಿ ಗಾಯಗೊಂಡಿದ್ದಾರೆ. ಕ್ರಿಸ್​ಮಸ್ ರಜೆ ಹಿನ್ನೆಲೆಯಲ್ಲಿ ಮೈಸೂರು ಅರಮನೆ ವೀಕ್ಷಣೆಗೆ ಹೆಚ್ಚು ಜನ ಆಗಮಿಸಿದ್ರು ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುರುತು ಪತ್ತೆ..
ಇದನ್ನೂ ಓದಿ: 10 ರೂಪಾಯಿ ನೋಟುಗಳು ಮತ್ತೆ ಕಾಣಿಸಿಕೊಳ್ಳುತ್ತವೆಯೇ? ಆರ್‌ಬಿಐನ ಅಸಲಿ ಪ್ಲಾನ್ ರಿವೀಲ್..!
/filters:format(webp)/newsfirstlive-kannada/media/media_files/2025/12/26/mysore-aramane-blast-1-2025-12-26-08-58-27.jpg)
ಮೈಸೂರಲ್ಲಿ ಹೀಲಿಯಂ ಸಿಲಿಂಡರ್​ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ಬಲೂನ್​ ವ್ಯಾಪಾರ 40 ವರ್ಷ ವಯಸ್ಸಿನ ಸಲೀಂ ಎಂದು ಗುರುತಿಸಲಾಗಿದೆ. ಇವರು ಉತ್ತರ ಪ್ರದೇಶದ ಕನೋಜ್ ಜಿಲ್ಲೆಯ ತೋಫಿಯಾ ಗ್ರಾಮದವರು ಎನ್ನಲಾಗಿದೆ. ಈತನ ವಿರುದ್ಧ ಇದೀಗ ಎಫ್​ಐಆರ್ ದಾಖಲಾಗಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಬೆಂಗಳೂರು ಮೂಲದ 45 ವರ್ಷದ ಲಕ್ಷ್ಮಿ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ಲಕ್ಷ್ಮಿ ಮೈಸೂರಿನ ಸಂಬಂಧಿಕರ ಮನೆಗೆ ಬಂದಿದ್ದರು. ನಂಜನಗೂಡು ಮೂಲದ ಮಂಜುಳಾ, ಕೊಲ್ಕತ್ತಾ ಮೂಲದ ಶಹನಾಜ್ ಶಬ್ಬೀರ್, ರಾಣೇಬೆನ್ನೂರು ಮೂಲದ ಕೊಟ್ರೇಶ್ ಗುಟ್ಟೆ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿದಿದೆ.
ಸ್ಫೋಟ ಆಗ್ತಿದ್ದಂತೆ ಆಗಿದ್ದೇನು..?
ಮೈಸೂರು ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಫೋಟಟಕ್ಕೆ ಪ್ರತ್ಯಕ್ಷದರ್ಶಿ, ಅರಮನೆ ಗೈಡ್​​ ಯೋಗೇಶ್ ದಿಗ್ಭ್ರಾಂತರಾಗಿದ್ದಾರೆ. ನ್ಯೂಸ್​ಫಸ್ಟ್​​ಗೆ ಪ್ರತಿಕ್ರಿಯಿಸಿರೋ ಅವರು, ಅದೃಷ್ಟವಶಾತ್ ಜನ ಕಡಿಮೆ ಇದ್ದರು, ಕೆಲವರು ಎಕ್ಸಿಬಿಷನ್​ಗೆ ಹೋಗ್ತಿದ್ದರು. ಬಲೂನ್ ವ್ಯಾಪಾರಿ ಆ ಕಡೆಯಿಂದ ವ್ಯಾಪಾರ ಮಾಡಿಕೊಂಡು ಬರ್ತಿದ್ದ. ಅರಮನೆಯೊಳಗೆ ಹೋಗುತ್ತಿದ್ದ ಐದಾರು ಮಂದಿ ಪ್ರವಾಸಿಗರು ಬಲೂನ್ ಖರೀದಿಸಲು ಹೋದಾಗ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು. ಬ್ಲಾಸ್ಟ್​ ಆದ ತಕ್ಷಣ ಜನ ಚೆಲ್ಲಾಪಿಲ್ಲಿಯಾಗಿ ಓಡಿದ್ರು.. ಬ್ಲಾಸ್ಟ್​ ಆದ ಶಬ್ಧಕ್ಕೆ ನನಗೆ ಹಾರ್ಟ್​ ಅಟ್ಯಾಕ್ ಆದಂಗೆ ಆಯ್ತು, ನನ್ನ ಎದೆ ಹಿಡಿದುಕೊಂಡಾಗಿ ಅರ್ಧಗಂಟೆ ಸುಧಾರಿಸಿಕೊಂಡೆ ಅಂತ ಅರಮನೆ ಗೈಡ್ ಯೋಗೇಶ್ ಆಘಾತ ವ್ಯಕ್ತಪಡಿಸಿದ್ದಾರೆ.
ಕಣ್ಣೀರು ಇಟ್ಟ ಮಕ್ಕಳು
ಮೈಸೂರು ಅರಮನೆ ಮುಂಭಾಗ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮಿ ಸಂಬಂಧಿ ಕಣ್ಣೀರಾಕಿದ್ದಾರೆ. ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿರೋ ಅವರು, ನನ್ನ ಅಣ್ಣನ ಅತ್ತಿಗೆ ಅರಮನೆ ನೋಡಲು ಮಕ್ಕಳು ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದರು. ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿದ್ದು ನಮ್ಮ ಬೆಳವಾಡಿಯ ಮನೆಗೆ ಬಂದಿದ್ದರು. ಸದ್ಯ ಅವರು ಗಂಭೀರ ವಾಗಿ ಗಾಯಗೊಂಡಿದ್ದು, ಮಕ್ಕಳು ಅಮ್ಮ ಬೇಕು ಅಮ್ಮ ಬೇಕು ಅಂತ ಕಣ್ಣೀರಾಕುತ್ತಿದ್ದಾರೆ ಅಂತ ಭಾವುಕರಾಗಿದ್ದಾರೆ
ಇದನ್ನೂ ಓದಿ:ವಿಜಯಲಕ್ಷ್ಮೀಗೆ ಅಶ್ಲೀಲ ಮೆಸೇಜ್.. ದೂರು ನೀಡಿದ ಅರ್ಧಗಂಟೆಯಲ್ಲೇ ಕಿಡಿಗೇಡಿಗಳು ಮಾಡಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us