/newsfirstlive-kannada/media/media_files/2025/12/25/chitradurga-accident-ravikantegowda-2025-12-25-08-02-12.jpg)
ಚಿತ್ರದುರ್ಗ: ಹಿರಿಯೂರು ಬಳಿ ಬಸ್​​ಗೆ ಬೆಂಕಿ ತಗುಲಿ ಘೋರ ದುರಂತ ಸಂಭವಿಸಿದೆ. ಕರಾಳ ಘಟನೆಯಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ ನಾಲ್ವರು ಹಾಗೂ ಲಾರಿ ಚಾಲಕ ಸೇರಿ ಒಟ್ಟು ಐವರು ಪ್ರಾಣ ಕಳೆದುಕೊಂಡಿದ್ದಾರೆ.
ಆಗಿದ್ದೇನು..?
KA 01 AE 5217 ನಂಬರಿನ ಖಾಸಗಿ ಸೀಬರ್ಡ್ ಕಂಪನಿ ಬಸ್, ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿತ್ತು. ಹಿರಿಯೂರು ಪಟ್ಟಣದ ಬಳಿ HR 38, AB 3455 ನಂಬರಿನ ಕಂಟೇನರ್ ಲಾರಿ ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ನಂತರ ಲಾರಿ ನಿಯಂತ್ರಣಕ್ಕೆ ಸಿಗದೆ, ಎದುರಿಗೆ ಬರುತ್ತಿದ್ದ ಬಸ್ಸಿಗೆ ಗುದ್ದಿದೆ. ಬಸ್ಸಿನ ಡಿಸೇಲ್​ ಟ್ಯಾಂಕ್​​ಗೆ ಲಾರಿ ಬಂದು ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಐಜಿಪಿ ರವಿಕಾಂತೇ ಗೌಡ.. ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ದುರ್ಘಟನೆ ನಡೆದಿದೆ. ಹಿರಿಯೂರಿನ ಜಾವಗುಂಡನ ಬಳಿ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಬಸ್ ಹೊರಟಿತ್ತು. ಈ ವೇಳೆ ಎದುರಿಗೆ ಬಂದ ಲಾರಿ, ಡಿವೈಡರ್​​ಗೆ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದೆ.
ಇದನ್ನೂ ಓದಿ: Massive Bus Tragedy : ಹಿರಿಯೂರು-ಶಿರಾ ಬಳಿ ಭೀಕರ ಬಸ್ ದುರಂತ 11 ಜನರ ಸಜೀವ ದಹನ
/filters:format(webp)/newsfirstlive-kannada/media/media_files/2025/12/25/chitradurga-district-between-hiriyuru-sira-seabird-bus-accident_massive-bus-tragedy_11-2025-12-25-07-49-53.png)
ಇಲ್ಲಿಯವರೆಗಿನ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿರುವ ಸಂಗತಿ ಏನೆಂದರೆ, ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಡೀಸೆಲ್​ ಟ್ಯಾಂಕ್​ಗೆ ಬಂದು ಬಡಿದಿದೆ. ಇದರಿಂದ ಬೆಂಕಿಯ ಜ್ವಾಲೆ ಆವರಿಸಿದೆ. ಬಸ್ಸಿನಲ್ಲಿ ಒಟ್ಟು 32 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ ಐವರು ಸುಟ್ಟು ಹೋಗಿದ್ದಾರೆ. ಹಾಗೆಯೇ ಕಂಟೇನರ್​​ನಲ್ಲಿದ್ದ ಲಾರಿ ಚಾಲಕ ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಇನ್ನುಳಿದ ಗಾಯಾಳುಗಳಲ್ಲಿ 12 ಮಂದಿಯನ್ನ ಹಿರಿಯೂರು ಆಸ್ಪತ್ರೆಗೆ, 9 ಮಂದಿ ತುಮಕೂರಿನ ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಾಗೆ ದಾಖಲಾದ ಓರ್ವ ವ್ಯಕ್ತಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದೆ. ಯಾಕೆಂದರೆ ಆತ ಶೆಕಡಾ 15 ರಿಂದ 20 ರಷ್ಟು ಸುಟ್ಟು ಹೋಗಿದ್ದಾನೆ ಎಂಬ ಮಾಹಿತಿ ಇದೆ. ವಿಕ್ಟೋರಿ ಆಸ್ಪತ್ರೆಗೆ ದಾಖಲಾಗಿರೋರನ್ನ ಬಿಟ್ಟು ಉಳಿದೆಲ್ಲ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಒಂದು ಮಗುವಿನ ಕಳೆಬರ ರೀತಿಯಲ್ಲಿ ಸಿಕ್ಕಿದೆ. ಅದನ್ನ ವೈದ್ಯಕೀಯ ಪರೀಕ್ಷೆ ಕಳುಹಿಸಿ ಪತ್ತೆ ಹಚ್ಚಲಾಗುವುದು. ಈಗಾಗಲೇ ನಮ್ಮ ಎಲ್ಲ ತನಿಖಾ ತಂಡಗಳು ಇಲ್ಲಿಗೆ ಆಗಮಿಸಿವೆ. ಬೆಂಗಳೂರಿನಿಂದ ಡಿಎನ್​ಎ ಪರೀಕ್ಷಾ ತಂಡ ಕೂಡ ಬಂದಿದೆ. ಆದಷ್ಟು ಬೇಗ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಹಸ್ತಾಂತರ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:Bus tragedy Updates LIVE : ಶಿರಾ-ಹಿರಿಯೂರು ಹೆದ್ದಾರಿಯಲ್ಲಿ ಭೀಕರ ಬಸ್ ದುರಂತ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us