Bus tragedy Updates LIVE : ಶಿರಾ-ಹಿರಿಯೂರು ಹೆದ್ದಾರಿಯಲ್ಲಿ ಭೀಕರ ಬಸ್ ದುರಂತ, ಪ್ರಧಾನಿ ಮೋದಿ ಸಂತಾಪ

ಚಿತ್ರದುರ್ಗ ಬಳಿ ಇಂದು ನಸುಕಿನ ಜಾವ ನಡೆದ ಭೀಕರ ಅಪಘಾತದಲ್ಲಿ 9 ಜನ ಸಜೀವ ದಹನವಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಡುವೆ ಬರುವ ಗೋರ್ಲತ್ತು ಗ್ರಾಮದ ಬಳಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ.

author-image
Siddeshkumar H P
Updated On
New Update
Chitradurga bus accident (2)
Advertisment

ಚಿತ್ರದುರ್ಗ ಬಳಿ ಇಂದು ನಸುಕಿನ ಜಾವ ನಡೆದ ಭೀಕರ ಅಪಘಾತದಲ್ಲಿ 9 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಡುವೆ ಬರುವ ಗೋರ್ಲತ್ತು ಗ್ರಾಮದ ಬಳಿ ಬೆಳಗಿನ ಜಾವ 2 ಗಂಟೆಗೆ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್​ ಬಸ್​​ಗೆ ಹಿರಿಯೂರಿನಿಂದ ಬೆಂಗಳೂರು ಕಡೆ ಬರುತ್ತಿದ್ದ ಕಂಟೇನರ್​​ ಲಾರಿ ಮುಖಾಮುಖಿ ಡಿಕ್ಕಿಯಾದ ಕಾರಣ ಈ ದುರಂತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗಿದ್ದು ಡಿವೈಡರ್​ ದಾಟಿ ಬಂದು ಡಿಕ್ಕಿ ಹೊಡೆದಿದೆ. ಸದ್ಯದ ಮಾಹಿತಿ ಪ್ರಕಾರ 9 ಮಂದಿ ಸಾವನ್ನಪ್ಪಿರುವುದು ಖಚಿತವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಮೃತರೆಲ್ಲರೂ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದವರೇ ಆಗಿದ್ದು, ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿದ್ದಾರೆ.

  • Dec 25, 2025 08:57 IST

    ಮೃತದೇಹದ ಗುರುತು ಪತ್ತೆ ಹಚ್ಚೋದೇ ಕಷ್ಟದ ಕೆಲಸ 

    ಮೃತದೇಹ ಪತ್ತೆ ಹಚ್ಚೋದೇ ದೊಡ್ಡ ಸವಾಲಿನ ಕೆಲಸವಾಗಿದೆ. ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿರೋದ್ರಿಂದ ಗುರುತು ಪತ್ತೆ ಮಾಡೋದು ಕಷ್ಟವಾಗಿದೆ. ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಈಗಾಗಲೇ ಡಿಎನ್​ಎ ಪರೀಕ್ಷಾ ತಂಡ ಸ್ಥಳಕ್ಕೆ ದೌಡಾಯಿಸಿದೆ. ಬಸ್ಸಿನಲ್ಲಿದ್ದ ಇನ್ನೂ ಮೂರು ಜನ ಮಿಸ್ಸಿಂಗ್ ಆಗಿದ್ದು, ಪೊಲೀಸರಿಂದ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಬಸ್ಸಿನಲ್ಲಿದ್ದ ಒಟ್ಟು 33 ಪ್ರಯಾಣಿಕರಲ್ಲಿ 25 ಮಂದಿ ಬದುಕುಳಿದಿರೋ ಬಗ್ಗೆ ಮಾಹಿತಿ ಇದೆ.



  • Dec 25, 2025 08:51 IST

    ಹಿರಿಯೂರು ಬಸ್ ದುರಂತಕ್ಕೆ ಮೋದಿ ಸಂತಾಪ, ಪರಿಹಾರ ಘೋಷಣೆ

    ಹಿರಿಯೂರು ಬಸ್​ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಮೃತರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡೋದಾಗಿ ಘೋಷಣೆ ಮಾಡಿದ್ದಾರೆ. ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ



  • Dec 25, 2025 08:47 IST

    ಪವಾಡದ ರೀತಿ ಬಜಾವ್ ಆದ 40 ಶಾಲಾ ಮಕ್ಕಳು

    ಶಿರಾ-ಹಿರಿಯೂರು ರಾಷ್ಟ್ರೀಯ ಹೆದ್ದಾರಿ ಅಪಘಾತ ಪ್ರಕರಣದಲ್ಲಿ ಪ್ರವಾಡ ಸದೃಶ ರೀತಿಯಲ್ಲಿ 40 ಶಾಲಾ ಮಕ್ಕಳು ಬಚಾವ್ ಆಗಿದ್ದಾರೆ. ಬೆಂಗಳೂರಿನಿಂದ ದಾಂಡೇಲಿಗೆ ಪ್ರವಾಸ ಹೊರಟ್ಟಿದ್ದರು. 

    ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

     



  • Dec 25, 2025 08:41 IST

    ಬೆಂಗಳೂರಿನಿಂದ ಹೊರಟಿದ್ದ ಬಸ್ಸಿನ ಸಿಸಿಟಿ ದೃಶ್ಯ

    ದುರಂತಕ್ಕೆ ಒಳಗಾದ ಬಸ್​ ನಿನ್ನೆ ರಾತ್ರಿ 8:45 ರ ಸುಮಾರಿಗೆ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿಯ ಸೀಬರ್ಡ್​ ಟ್ರಾವೆಲ್ಸ್ ಕಚೇರಿಯಿಂದ ಹೊರಟಿತ್ತು. ಆನಂದ್ ರಾವ್ ಸರ್ಕಲ್ ಬಳಿ ಸುಮಾರು 9 ಮಂದಿ ಪ್ರಯಾಣಿಕರು ಬಸ್ ಹತ್ತಿದ್ದರು. ಪ್ರಯಾಣಿಕರು ಬಸ್ ಹತ್ತಿ ಹೊರಡುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆ ಯಾಗಿದೆ. 

    Chitradurga bus accident (1)



  • Dec 25, 2025 08:15 IST

    ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ-ಐಜಿಪಿ ರವಿಕಾಂತೇಗೌಡ

    ದುರ್ಘಟನೆ ಬಗ್ಗೆ ಪೂರ್ವ ವಲಯದ ಐಜಿಪಿ ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ. ಅವರ ಹೇಳಿದ್ದು ಏನೆಂದರೆ, ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ದುರ್ಘಟನೆ ನಡೆದಿದೆ. ಹಿರಿಯೂರಿನ ಜಾವಗುಂಡನ ಬಳಿ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಬಸ್ ಹೊರಟಿತ್ತು. ಈ ವೇಳೆ ಎದುರಿಗೆ ಬಂದ ಲಾರಿ, ಡಿವೈಡರ್​​ಗೆ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದೆ. ಬಸ್ಸಿನಲ್ಲಿ ಒಟ್ಟು 32 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ 8 ಮಂದಿ ಅಲ್ಲೇ ಸುಟ್ಟು ಹೋಗಿದ್ದಾರೆ. ಹಾಗೆಯೇ ಕಂಟೇನರ್​​ನಲ್ಲಿದ್ದ ಲಾರಿ ಚಾಲಕ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ರವಿಕಾಂತೇಗೌಡ ಇನ್ನೂ ಏನೆಲ್ಲ ಮಾಹಿತಿ ನೀಡಿದ್ದಾರೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:

    ಇದನ್ನೂ ಓದಿ: ಹಿರಿಯೂರಿನಲ್ಲಿ ಬಸ್ ದುರಂತ ಹೇಗಾಯಿತು? ಕಂಪ್ಲೀಟ್​ ಮಾಹಿತಿ ನೀಡಿದ ಐಜಿಪಿ ರವಿಕಾಂತೇಗೌಡ

     

     

     



  • Dec 25, 2025 07:50 IST

    ಬಸ್ ತೆರವು ಕಾರ್ಯಾಚರಣೆ

    chitradurga-district-between-hiriyuru---sira-seabird-bus-accident_Massive-bus-tragedy_11

    ಭೀಕರ ಅಪಘಾತಕ್ಕೆ ತುತ್ತಾಗಿರುವ ಸೀಬರ್ಡ್‌ ಬಸ್ ನ ತೆರವು ಕಾರ್ಯಾಚರಣೆಯಲ್ಲಿ ತೊಡಗಿರುವ ಅಗ್ನಿಶಾಮಕದಳ ಮತ್ತು ಜಿಲ್ಲಾ ಪೋಲೀಸರು



  • Dec 25, 2025 07:46 IST

    ಬಸ್ ಕ್ಲೀನರ್ ಮೊಹಮ್ಮದ್ ಸಲೀಂ ಪ್ರತಿಕ್ರಿಯೆ

    ಅಫಘಾತವಾದ ಸೀಬರ್ಡ್ ಬಸ್ ನ ಕ್ಲೀನರ್ ಮೊಹಮ್ಮದ್ ಸಲೀಂ ಪ್ರತಿಕ್ರಿಯೆ
    ನಾನು ಮಲಗಿದ್ದೆ, ಬಸ್ ಅಪಘಾತವಾದ ರಭಸಕ್ಕೆ ಗ್ಲಾಸ್ ಹೊಡೆದ ಹೊರಗೆ ಬಿದ್ದಿದ್ದೆ. ಏನಾಗಿದೆ ಅಂತ ಗೊತ್ತಾಗಲಿಲ್ಲ.
    ನನಗೆ ಕೈಗೆ ಆಷ್ಟೇ ಗಾಯ ಆಗಿದೆ.. ಅಪಘಾತದಲ್ಲಿ ನಾನು ಬಸ್ ನಿಂದ ಹೊರಗೆ ಬಿದ್ದಿದ್ದೆ ಎಂದು ಮೊಹಮ್ಮದ್ ಸಲೀಂ ಪ್ರತಿಕ್ರಿಯೆ

     

    chitradurga-district-between-hiriyuru---sira-seabird-bus-accident_Massive-bus-tragedy_bus-cleaner
    ಬಸ್ ಕ್ಲೀನರ್ ಮೊಹ್ಮದ್ ಸಲೀಂ

     



  • Dec 25, 2025 07:30 IST

    ಬದುಕಿ ಬಂದ ಬಸ್ ಚಾಲಕ ಪ್ರತಿಕ್ರಿಯೆ

     

    chitradurga-district-between-hiriyuru---sira-seabird-bus-accident_Massive-bus-tragedy_Driver
    ಬಸ್ ಚಾಲಕ ಮೊಹಮ್ಮದ್ ರಫೀಕ್

     

    ಬಸ್ ಅಪಘಾತದಲ್ಲಿ ಬದುಕಿ ಬಂದ್ ಚಾಲಕ ಮೊಹಮ್ಮದ್ ರಫೀಕ್ ಹೇಳಿಕೆ. 


    ನಾನು ಚಾಲನೆ ಮಾಡುವಾಗ ವೇಗವಾಗಿ ಲಾರಿ ಬಂತು


    ಅದನ್ನ ತಪ್ಪಿಸಲು ನಾನು ಹೋದಾಗ ಪಕ್ಕದಲ್ಲಿ ಇನ್ನೊಂದು ಬಸ್ ಬಂತು


    ಲಾರಿಯವನ ಡಿಸೇಲ್ ಟ್ಯಾಂಕ್ ಗೆ ಬಂದು ಗುದ್ದಿದ್ದಾನೆ


    ನನಗೆ ಆ ಕ್ಷಣದಲ್ಲಿ ಏನು ಆಯ್ತು ಅಂತ ಗೊತ್ತಾಗಲಿಲ್ಲಾ ಎಂದಿರುವ ಡ್ರೈವರ್ ಮಹಮ್ಮದ್ ರಫೀಕ್ ಹೇಳಿಕೆ



  • Dec 25, 2025 07:15 IST

    ಬಸ್ ನ ಡ್ರೈವರ್ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರು

    ಡ್ರೈವರ್ ಮೊಹಮ್ಮದ್ ರಫಿಕ್ ಕೈ ಮತ್ತು ಕಾಲು ಮುರಿದಿರುವ ಮಾಹಿತಿಯಿದ್ದು, ಹಾಗೂ  ಕ್ಲೀನರ್ ಸಾಧಿಕ್ ಕಾಲು ಮುರಿತ. ಕಂಟೇನರ್ ಗುದ್ದಿದ ರಭಸಕ್ಕೆ ಬಸ್ ನಿಂದ ಹೊರಗೆ ಬಿದ್ದಿದ್ದ ಸಾಧಿಕ್. ಇಬ್ಬರೂ ಪ್ರಾಣಾಪಾಯದಿಂದ ಪಾರು.

    chitradurga-district-between-hiriyuru---sira-seabird-bus-accident_Massive-bus-tragedy_10



  • Dec 25, 2025 07:12 IST

    ಬಸ್‌ ನಲ್ಲಿದ್ದ ಪ್ರಯಾಣಿಕರ ಮಾಹಿತಿ

    ಅನಿರುದ್ಧ್​ ಬ್ಯಾನರ್ಜಿ - ಗೋಕರ್ಣಕ್ಕೆ ಪ್ರಯಾಣ
    ಅಮೃತ - ಗೋಕರ್ಣ


    ಇಶಾ - ಗೋಕರ್ಣ

    ಸುರ್ಜಾ - ಗೋಕರ್ಣ

    ಮಾನಸ - ಗೋಕರ್ಣ

    ಮಿಲನ - ಗೋಕರ್ಣ

    ಹೇಮರಾಜ್​ ಕುಮಾರ್ - ಗೋಕರ್ಣ

    ಕಲ್ಪನಾ ಪ್ರಜಾಪತಿ - ಗೋಕರ್ಣ

    ಶಶಿಕಾಂತ್.ಎಂ - ಗೋಕರ್ಣ

    ವಿಜಯ್ ಭಂಡಾರಿ - ಕುಮಟಾ

    ನವ್ಯಾ- ಗೋಕರ್ಣ

    ಅಭಿಷೇಕ್ - ಗೋಕರ್ಣ

    ಕಿರಣ್ ಪೈ - ಗೋಕರ್ಣ

    ಕೀರ್ತನ್.ಎಂ - ಗೋಕರ್ಣ

    ನಂದಿತಾ ಜಿ.ಬಿ - ಗೋಕರ್ಣ

    ದೇವಿಕಾ. ಹೆಚ್​.- ಗೋಕರ್ಣ

    ಮೇಘರಾಜ್ - ಕುಮಟಾ

    ಮಸ್ರತ್​ವುನ್ನಿಸಾ - ಶಿವಮೊಗ್ಗ

    ಸೈಯರ್​ ಜಮೀರ್ ಘೌಸ್​ - ಶಿವಮೊಗ್ಗ

    ಗಗನಶ್ರೀ - ಗೋಕರ್ಣ

    ರಶ್ಮಿ ಮಹಲೆ - ಗೋಕರ್ಣ

    ರಕ್ಷಿತಾ ಆರ್ - ಗೋಕರ್ಣ



  • Dec 25, 2025 07:09 IST

    11ಕ್ಕೂ ಅಧಿಕ ಮಂದಿ ಸಜೀವ ದಹನ

    chitradurga-district-between-hiriyuru---sira-seabird-bus-accident_Massive-bus-tragedy_10

    ಚಿತ್ರದುರ್ಗದ ಹಿರಿಯೂರು ಬಳಿ ಘನಘೋರ ದುರಂತ
    ಕಂಟೈನರ್ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯಲ್ಲೇ ಬಸ್ ಧಗಧಗ
    ​​ಸುಮಾರು 11ಕ್ಕೂ ಹೆಚ್ಚು ಮಂದಿ ಸಜೀವದಹನ ಮಾಹಿತಿ
    ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ
    ಹಿಂಬದಿಯಿಂದ ಸ್ಲೀಪರ್​ ಬಸ್​ಗೆ​ ಡಿಕ್ಕಿ ಆಗಿರುವ ಕಂಟೈನರ್​​



bus tragedy bus accidnet
Advertisment