/newsfirstlive-kannada/media/media_files/2025/12/25/school-bus-just-miss_40-students-safe_chitradurga-district-between-hiriyuru-sira-seabird-bus-accident_massive-bus-tragedy-2025-12-25-08-38-18.png)
Photograph: (40 ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ಬಸ್)
ಶಿರಾ-ಹಿರಿಯೂರು ರಾಷ್ಟ್ರೀಯ ಹೆದ್ದಾರಿ ಅಪಘಾತ ಪ್ರಕರಣದಲ್ಲಿ ಪ್ರವಾಡ ಸದೃಶ ರೀತಿಯಲ್ಲಿ ಪಾರಾದ 40 ಶಾಲಾ ಮಕ್ಕಳು. ಬೆಂಗಳೂರಿನಿಂದ ದಾಂಡೇಲಿಗೆ ಪ್ರವಾಸ ಹೊರಟ್ಟಿದ್ದ ಶಾಲಾ ಮಕ್ಕಳು.
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಬಸ್ ಪಕ್ಕದಲ್ಲೇ ಸಾಗುತ್ತಿತ್ತು. ದೀಢರನೇ ಡಿವೈಡರ್ ದಾಟಿ ಬಂದ ಕಂಟೈನರ್ ಲಾರಿ ಸೀ ಬರ್ಡ್ ಬಸ್‌ಗೆ ಗುದ್ದಿದ ಪರಿಣಾಮ ಸೀಬರ್ಡ್ ಬಸ್ ಶಾಲಾ ಮಕ್ಕಳಿದ್ದ ಬಸ್‌ಗೆ ತಾಗಿದೆ. ಸೀಬರ್ಡ್ ಬಸ್‌ಗೆ ಡಿಕ್ಕಿಯಾದ ರಭಸಕ್ಕೆ ಮುಖ್ಯರಸ್ತೆಯ ಪಕ್ಕದಲ್ಲಿದ್ದ ತಡೆಗೋಡೆಯ ಬ್ಯಾರಿಕೇಡ್‌ಗೆ ಗುದ್ದಿದ ಶಾಲಾ ಮಕ್ಕಳಿದ್ದ ಬಸ್ ಸೀದ ಮುಖ್ಯರಸ್ತೆಯಿಂದ ಸರ್ವೀಸ್ ರಸ್ತೆಗೆ ಬಂದು ನಿಂತಿದೆ.
ಅದೃಷ್ಟವಶಾತ್ ಯಾವುದೇ ಎಲ್ಲಾ ಶಾಲಾಮಕ್ಕಳು ದೇವರೇ ಕಾಪಾಡಿದಂತೆ ಪಾರಾಗಿದ್ದಾರೆ. ಶಾಲಾ ಮಕ್ಕಳಿದ್ದ ಬಸ್ ನ ಡ್ರೈವರ್ ಇದ್ದ ಭಾಗಕ್ಕೆ ತಾಗಿದ ಪರಿಣಾಮ ಡ್ರೈವರ್ ತಲೆಗೆ ಸ್ವಲ್ಪ ಪೆಟ್ಟಾಗಿದೆ. ಅಪಘಾತಕ್ಕೆ ಒಳಗಾದ ಬಸ್ಸಿನಲ್ಲಿದ್ದ ನಾಲ್ವರು ಹಾಗೂ ಲಾರಿ ಚಾಲಕ ಸೇರಿ ಒಟ್ಟು ಐವರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : Bus tragedy: ಪವಾಡದ ರೀತಿ ಬಜಾವ್ ಆದ 40 ಶಾಲಾ ಮಕ್ಕಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us