/newsfirstlive-kannada/media/media_files/2026/01/08/chitradurga-father-and-son-2026-01-08-09-48-18.jpg)
ಚಿತ್ರದುರ್ಗ: ಮದುವೆ ಮಾಡಿಲ್ಲ ಎಂಬ ಕಾರಣಕ್ಕೆ ಹೆತ್ತ ತಂದೆಯನ್ನೇ ಪಾಪಿ ಮಗ ಹೊಡೆದು ಸಾಯಿಸಿದ ಘಟನೆ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಡ ಗ್ರಾಮದಲ್ಲಿ ನಡೆದಿದೆ.
ಸಣ್ಣ ನಿಂಗಪ್ಪ (65) ಭೀಕರವಾಗಿ ಹತ್ಯೆಯಾದ ವೃದ್ಧ. ಲಿಂಗರಾಜ್ (35) ತಂದೆಯ ಜೀವ ತೆಗೆದ ಪಾಪಿ ಮಗ. ಮದುವೆ ಮಾಡಿಕೊಟ್ಟಿಲ್ಲ ಎಂದು ಜಗಳ ಮಾಡ್ತಿದ್ದ ಲಿಂಗರಾಜ್, ನಿನ್ನೆ ತಂದೆಯ ತಲೆಗೆ ರಾಡ್​ನಿಂದ ಬರ್ಬರವಾಗಿ ಹೊಡೆದಿದ್ದಾನೆ.
ಪ್ರಕರಣ ದಾಖಲಿಸಿಕೊಂಡರುವ ಹೊಸದುರ್ಗ ಪೊಲೀಸರು, ಆರೋಪಿ ಲಿಂಗರಾಜ್​ನನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ರಾಡ್​ನಿಂದ ಹೊಡೆದು ಕೊಲೆಗೈದರುವ ಬಗ್ಗೆ ಮಾಹಿತಿ ಸಿಕ್ಕಿದೆ. ಘಟನಾ ಸ್ಥಳಕ್ಕೆ ಹೊಸದುರ್ಗ ಪಿಐ ರಮೇಶ್ ಭೇಟಿ ಪರಿಶೀಲನೆ ನೀಡಿದ್ದಾರೆ.
ಇದನ್ನೂ ಓದಿ: ಅಶ್ವಿನಿ-ಧ್ರುವಂತ್ vs ಇತರೆ ಸ್ಪರ್ಧಿಗಳು.. ಗಿಲ್ಲಿಗೆ ಕಾಡಿದ ಆ ಭಯ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us