/newsfirstlive-kannada/media/media_files/2025/11/26/murugha-shree-2025-11-26-09-04-57.jpg)
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ (Shivamurthy Murugha Sharanaru) ವಿರುದ್ಧದ ಫೋಕ್ಸೋ ಕೇಸ್​ನ (pocso case) ವಾದ-ಪ್ರತಿವಾದ ಮುಕ್ತಾಯವಾಗಿದ್ದು, ಇವತ್ತು ತೀರ್ಪು ಹೊರ ಬೀಳಲಿದೆ. ಪ್ರಕರಣದ ಮೊದಲ ಎಫ್ಐಆರ್ ಸಂಬಂಧ ಕೋರ್ಟ್​​ನಿಂದ ಮಹತ್ವದ ತೀರ್ಪು ಪ್ರಕಟವಾಗಲಿದೆ.
ವಾದ-ಪ್ರತಿವಾದ ಆಲಿಸಿರುವ ಕೋರ್ಟ್, ತೀರ್ಪನ್ನು ಇವತ್ತಿಗೆ ಕಾಯ್ದಿರಿಸಿದೆ. ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಅಪರಾಧಿಯೋ, ನಿರಾಪರಾಧಿಯೋ ಎಂದು ಗೊತ್ತಾಗಲಿದೆ. ಶ್ರೀಗಳ ಪರವಾಗಿ ಕೋರ್ಟ್​ನಲ್ಲಿ ಖ್ಯಾತ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದಾರೆ. ಸ್ವಾಮೀಜಿ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ವಾದಿಸಿದ್ದಾರೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯದಲ್ಲಿ ಕೇಸ್​ನ ವಿಚಾರಣೆ ನಡೆದಿತ್ತು. ನ್ಯಾಯಾಧೀಶ ಗಂಗಾಧರ್ ಚನ್ನಬಸಪ್ಪ ಹಡಪದ ತೀರ್ಪು ಪ್ರಕಟಿಸಲಿದ್ದಾರೆ.
ಇದನ್ನೂ ಓದಿ: ಗುವಾಹಟಿಯಲ್ಲಿ ಪಂತ್​ ಪಡೆ ಪರದಾಟ.. ಗೆಲುವಿನತ್ತ ಸೌತ್​ ಆಫ್ರಿಕಾ..!
/filters:format(webp)/newsfirstlive-kannada/media/post_attachments/wp-content/uploads/2023/11/muruga-shree-1.jpg)
ಮುರುಘಾ ಶ್ರೀಗಳು ಒಳಗಾ? ಹೊರಗಾ?
ಮೊದಲ ಪೋಕ್ಸೋ ಕೇಸ್​ ಸಂಬಂಧ A ಮತ್ತು B ಚಾರ್ಜ್ ಶೀಟ್ ಸಲ್ಲಿಕೆ ಆಗಿವೆ. ಅಂದರೆ ಎರಡು ಪ್ರತ್ಯೇಕ ಚಾರ್ಜ್​​ಶೀಟ್ ಸಲ್ಲಿಕೆ ಆಗಿವೆ. ಡಿವೈಎಸ್ಪಿ ಅನಿಲ್ ನೇತೃತ್ವದ ತಂಡವು ವಿಚಾರಣೆ ನಡೆಸಿ ಕೋರ್ಟ್​ಗೆ ಚಾರ್ಚ್ ಶೀಟ್ ಸಲ್ಲಿಕೆ ಮಾಡಿದೆ. ಪೊಲೀಸ್ ಮೂಲದಿಂದ ಸಲ್ಲಿಕೆಯಾದ ಚಾರ್ಜ್​ಶೀಟ್​ನ ಅಂಶಗಳನ್ನ ನೋಡೋದಾದರೆ, ಒಟ್ಟು 694 ಪುಟಗಳ ಚಾರ್ಜ್​​​ಶೀಟ್. ಪೋಕ್ಸೋ, ಅಟ್ರಾಸಿಟಿ, ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆಯಡಿ ಶ್ರೀಗಳ ವಿರುದ್ಧ ಕೇಸ್ ದಾಖಲಾಗಿದೆ.
A1 ಮುರುಘಾ ಶ್ರೀ, A2 ರಶ್ಮಿ, A 4 ಪರಮಶಿವಯ್ಯ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ. A 3 ಮಠದ ಉತ್ತರಾಧಿಕಾರಿ, A 5 ಗಂಗಾಧರಯ್ಯ ಭಾಗಿ ಆದ ಮಾಹಿತಿ ಇಲ್ಲ. ಲೇಡಿ ವಾರ್ಡನ್ ಮೂಲಕ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಶ್ರೀಗಳ ಮೇಲಿದೆ. ಇನ್ನೊಂದು ವಿಚಾರ ಅಂದ್ರೆ ವರ್ಷದ ಒಳಗೆ ಕೇಸ್​ ಇತ್ಯರ್ಥಗೊಳಿಸಬೇಕೆಂದು ಸುಪ್ರೀಂ ಕೋರ್ಟ್​ ಸೂಚನೆ ನೀಡಿತ್ತು.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us