ದಿಢೀರ್ ಆಸ್ಪತ್ರೆಗೆ ದಾಖಲಾದ ಸಿದ್ದು ಪತ್ನಿ, ರಾತ್ರೋ ರಾತ್ರಿ ದೆಹಲಿಯಿಂದ ಬಂದ ಸಿಎಂ

ಅತ್ತ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಬ್ಯುಸಿಯಾಗಿದ್ದಾರೆ. ಈ ನಡುವೆ ದಿಢೀರ್​ನೇ ಸಿಎಂ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುದ್ದಿ ತಿಳಿದ ಕೂಡಲೇ ಸಿದ್ದರಾಮಯ್ಯ ದೆಹಲಿಯಿಂದ ರಾತ್ರೋ ರಾತ್ರಿ ಎಲ್ಲವನ್ನು ಅಲ್ಲೇ ಬಿಟ್ಟು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

author-image
Ganesh Kerekuli
Siddaramaiah wife
Advertisment

ಒಂದ್ಕಡೆ ಸಚಿವ ಸಂಪುಟ ಪುನಾರಚನೆ, ಮತ್ತೊಂದ್ಕಡೆ ನಾಯಕತ್ವ ಬದಲಾವಣೆ ಚರ್ಚೆ. ಈ ಎಲ್ಲಾ ವಿಚಾರ ಸಿಎಂ ಸಿದ್ದರಾಮಯ್ಯರ ತಲೆನೋವಿಗೆ ಕಾರಣವಾಗಿದೆ. ಈ ವಿಷಯವಾಗಿ ದೆಹಲಿಯಲ್ಲೇ ಟೆಂಟ್ ಹಾಕಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಪತ್ನಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಆಸ್ಪತ್ರೆಗೆ ದಾಖಲಾದ ಸಿಎಂ ಪತ್ನಿ 

ಶ್ವಾಸಕೋಶ ಸಮಸ್ಯೆ ಹಿನ್ನೆಲೆ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಸಂಜೆ ಬೆಂಗಳೂರಿನ ಶೇಷಾದ್ರಿಪುರಂ‌‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಪಾರ್ವತಿ ಅವರ ಆರೋಗ್ಯ ನೋಡಿಕೊಳ್ಳಲು ಪುತ್ರ ಯತೀಂದ್ರ ಸಿದ್ದರಾಮಯ್ಯ ಆಸ್ಪತ್ರೆಯಲ್ಲೇ ಬೀಡುಬಿಟ್ಟಿದ್ದರು.

ಆಸ್ಪತ್ರೆಗೆ ದೌಡಾಯಿಸಿದ ಸಿದ್ದರಾಮಯ್ಯ

ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು ವಿಚಾರ ಗೊತ್ತಾಗ್ತಿದ್ದಂತೆ ದೆಹಲಿಯಿಂದ ಸಿಎಂ ಸಿದ್ದರಾಮಯ್ಯ ಅಲ್ಲಿಂದಲೇ ದೂರವಾಣಿಯಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಾತ್ರವಲ್ಲದೇ ಕಳೆದ ರಾತ್ರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಸಭೆ ಮುಗಿಸಿ ಬೆಂಗಳೂರಿಗೆ ದೌಡಾಯಿಸಿದ್ರು. ಹೆಚ್​ಎಎಲ್​ಗೆ ಆಗಮಿಸಿದ ಸಿದ್ದರಾಮಯ್ಯ ಅಲ್ಲಿಂದ ಅಪೊಲೋ ಆಸ್ಪತ್ರೆಗೆ ತೆರಳಿದ್ರು. ಬರುವಾಗಲೇ ಸಿದ್ದರಾಮಯ್ಯ ಕೊಂಚ ಆತಂಕದಲ್ಲೇ ಇದ್ರು.

ಇದನ್ನೂ ಓದಿ: ರಾಜ್ಯ ಕ್ಯಾಬಿನೆಟ್ ಪುನರ್ ರಚನೆ: AICC ಅಧ್ಯಕ್ಷ ಖರ್ಗೆ ಭೇಟಿಯಾಗಿ ಚರ್ಚಿಸಿದ ಸಿಎಂ ಸಿದ್ದರಾಮಯ್ಯ

ಪಾರ್ವತಿ ಅವರ ಅನಾರೋಗ್ಯ ಸುದ್ದಿ ತಿಳಿಯುತ್ತಿದ್ದಂತೆ ಅಪೋಲೊ ಆಸ್ಪತ್ರೆಗೆ ಶಾಸಕ ಶಿವಲಿಂಗೇಗೌಡ ದೌಡಾಯಿಸಿದ್ದರು. ಆದ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದರಿಂದ ಯಾರನ್ನೂ ಒಳಗಡೆ ಬಿಡಲಿಲ್ಲ. ಹೀಗಾಗಿ ಶಿವಲಿಂಗೇಗೌಡ ಡಾ.ಯತೀಂದ್ರರಿಂದ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಆಸ್ಪತ್ರೆಯಿಂದ ತೆರಳಿದ್ರು. ಬಳಿಕ ಮಾತನಾಡಿದ ಅವರು, ಲಂಗ್ಸ್ ಅಲ್ಲಿ ನೀರು ತುಂಬಿಕೊಂಡಿತ್ತು. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆತಂಕ ಪಡುವಂತದ್ದೇನಿಲ್ಲ ಎಂದು ಯತೀಂದ್ರ ತಿಳಿಸಿರುವುದಾಗಿ ಹೇಳಿದರು.

ಇದನ್ನೂ ಓದಿ: ದೆಹಲಿಯಲ್ಲೇ ಡಿ.ಕೆ.ಶಿವಕುಮಾರ್​ ಠಿಕಾಣಿ.. ಸಂಪುಟ ಪುನಾರಚನೆ ಚೆಂಡು ರಾಹುಲ್ ಅಂಗಳಕ್ಕೆ..!

ಒಟ್ಟಾರೆ ಸಂಪುಟ ಪುನರಾಚನೆ ಸಂಬಂಧ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಸಿಎಂ ಸಿದ್ದರಾಮಯ್ಯ ಪತ್ನಿ ಅನಾರೋಗ್ಯ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಸದ್ಯ ಪಾರ್ವತಿ ಸಿದ್ದರಾಮಯ್ಯರಿಗೆ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಳ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Siddaramaiah Siddaramaiah wife
Advertisment