Advertisment

ಯುವ ನಾಯಕನಿಗೆ ನಿಗಮದ ಅಧ್ಯಕ್ಷ ಸ್ಥಾನ.. ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ಗೆ ಅಭಿನಂದನೆ ತಿಳಿಸಿದ ಚೇತನ್ K

ಎಐಸಿಸಿ ಒಟ್ಟು 39 ಹೆಸರುಗಳ ಪಟ್ಟಿಗೆ ಸಹಿ ಮಾಡಿ ಕಳುಹಿಸಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು 34 ಮಂದಿ ಅಧ್ಯಕ್ಷರ ಪಟ್ಟಿಗೆ ಮಾತ್ರ ಅಂಕಿತ ಹಾಕಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಇಲಾಖೆಗಳಿಗೆ ಈಗಾಗಲೇ ಪಟ್ಟಿ ರವಾನೆ ಆಗಿದೆ.

author-image
Bhimappa
DK_SHIVAKUMAR (4)
Advertisment

ಶಿವಮೊಗ್ಗ: ಜವಳಿ ಮೂಲ ಸೌಲಭ್ಯ (ವಿದ್ಯುತ್‌ ಮಗ್ಗಗಳ) ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶಿವಮೊಗ್ಗದ ಕಾಂಗ್ರೆಸ್‌ನ ಯುವ ನಾಯಕ ಚೇತನ್.ಕೆ ಅವರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚೇತನ್.ಕೆ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.      

Advertisment

ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಕ್ಕೆ ಎಐಸಿಸಿ ಪಟ್ಟಿಯಲ್ಲಿ ಬದಲಾವಣೆ ಮಾಡಿ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತ ಮುದ್ರೆ ಹಾಕಿದ್ದರು. ಎಐಸಿಸಿ ಒಟ್ಟು 39 ಹೆಸರುಗಳ ಪಟ್ಟಿಗೆ ಸಹಿ ಮಾಡಿ ಕಳುಹಿಸಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು 34 ಮಂದಿ ಅಧ್ಯಕ್ಷರ ಪಟ್ಟಿಗೆ ಮಾತ್ರ ಅಂಕಿತ ಹಾಕಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಇಲಾಖೆಗಳಿಗೆ ಈಗಾಗಲೇ ಪಟ್ಟಿ ರವಾನೆ ಆಗಿದೆ. 

ಇದನ್ನೂ ಓದಿ: ಗಣತಿದಾರರಿಗೆ ಗೌರವಧನ ಸಂಪೂರ್ಣವಾಗಿ ರಿಲೀಸ್​​ ಮಾಡಿದ್ದೇವೆ- ಸಿಎಂ ಸಿದ್ದರಾಮಯ್ಯ

CM_SIDDU_DKS

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್‌ ಅವರು ಸೆಪ್ಟೆಂಬರ್​ 24 ರಂದು ಬುಧವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಶಿವಲೀಲಾ ವಿನಯ್‌ ಕುಲಕರ್ಣಿ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಮಂಡಳಿಗೆ ಈ ಹಿಂದೆ ವಿನಯ್‌ ಕುಲಕರ್ಣಿ ಅವರೂ ಅಧ್ಯಕ್ಷರಾಗಿದ್ದರು. 

Advertisment

ಪಿ.ರಘು ಅವರನ್ನು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ಮತ್ತು ಮಾಜಿ ಶಾಸಕ ಎಸ್‌.ಜಿ ನಂಜಯ್ಯನಮಠ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿತ್ತು. ಅದರಂತೆ ಜವಳಿ ಮೂಲ ಸೌಲಭ್ಯ (ವಿದ್ಯುತ್‌ ಮಗ್ಗಗಳ) ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶಿವಮೊಗ್ಗದ ಕಾಂಗ್ರೆಸ್‌ನ ಯುವ ನಾಯಕ ಚೇತನ್.ಕೆ ಅವರನ್ನು ನೇಮಕ ಮಾಡಲಾಗಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Karnataka Govt DK Shivakumar CM SIDDARAMAIAH
Advertisment
Advertisment
Advertisment