Advertisment

ದರ್ಶನ್ ಅಂಡ್​ ಗ್ಯಾಂಗ್​ಗೆ ಮತ್ತೆ ಟೆನ್ಷನ್ ಶುರು.. ಸೆ. 9ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್​

ದರ್ಶನ್ ಅಂಡ್​ ಗ್ಯಾಂಗ್​ಗೆ ಮತ್ತೆ ಅಗ್ನಿಪರೀಕ್ಷೆ ಶುರುವಾಗಿದೆ. ರೇಣುಕಾಸ್ವಾಮಿ ಕೇಸ್​ ಸಂಬಂಧ ಇಂದು 64ನೇ ಸೆಷನ್ಸ್ ಕೋರ್ಟ್​ನಲ್ಲಿ ವಿಚಾರಣೆ ನಡೆದಿದೆ. ಇದೇ ವೇಳೆ 64ನೇ ಸೆಷನ್ಸ್ ಕೋರ್ಟ್ ಸೆಪ್ಟೆಂಬರ್‌ 9ಕ್ಕೆ ವಿಚಾರಣೆ ಮುಂದೂಡಿದರು.

author-image
NewsFirst Digital
darshan(2)
Advertisment

ಬೆಂಗಳೂರು: ದರ್ಶನ್ ಅಂಡ್​ ಗ್ಯಾಂಗ್​ಗೆ ಮತ್ತೆ ಅಗ್ನಿಪರೀಕ್ಷೆ ಶುರುವಾಗಿದೆ. ರೇಣುಕಾಸ್ವಾಮಿ ಕೇಸ್​ ಸಂಬಂಧ ಇಂದು 64ನೇ ಸೆಷನ್ಸ್ ಕೋರ್ಟ್​ನಲ್ಲಿ ವಿಚಾರಣೆ ನಡೆದಿದೆ. ಇದೇ ವೇಳೆ 64ನೇ ಸೆಷನ್ಸ್ ಕೋರ್ಟ್ ಸೆಪ್ಟೆಂಬರ್‌ 9ಕ್ಕೆ ವಿಚಾರಣೆ ಮುಂದೂಡಿದರು.

Advertisment

ಇದನ್ನೂ ಓದಿ: ಬಿಗ್​​ಬಾಸ್​ಗೆ ಎಂಟ್ರಿ ಕೊಡ್ತಿದ್ದಾರಾ ಪಹಲ್ಗಾಮ್ ಸಂತ್ರಸ್ತೆ ಹಿಮಾಂಶಿ ನರ್ವಾಲ್? ಇದರ ಅಸಲಿಯತ್ತೇನು?

ಇಂದು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಕಳೆದ ಬಾರಿಯ ವಿಚಾರಣೆ ವೇಳೆ ಕೆಲವು ಆರೋಪಿಗಳು ಗೈರಾಗಿದ್ದರು. ಇದೇ ವೇಳೆ 64ನೇ ಸೆಷನ್ಸ್ ಕೋರ್ಟ್​ನಲ್ಲಿ ನ್ಯಾಯಾಧೀಶರಾದ ಐ.ಪಿ.ನಾಯ್ಕ್ ಅವರು ವಿಚಾರಣೆಯನ್ನು ಸೆಪ್ಟೆಂಬರ್‌ 9ಕ್ಕೆ ಮುಂದೂಡಿದರು.

pavitra

ಚಾರ್ಜ್ ಪ್ರೇಮ್ ಸಲುವಾಗಿ ಕೋರ್ಟ್ ಎರಡು ಕಡೆಯ ವಾದ ಆಲಿಸಲಿದೆ. ಚಾರ್ಜ್ ಪ್ರೇಮ್ ಎಂದರೆ ದೋಷಾರೋಪ ಹೊರಿಸುವುದು‌. ಯಾವ ಯಾವ ಸೆಕ್ಷನ್​ಗಳಡಿ ಆರೋಪ ಇದೆ ಎಂದು ಕೋರ್ಟ್​ನಲ್ಲಿ ಜಡ್ಜ್ ಆರೋಪ ಹೊರಿಸುತ್ತಾರೆ. ಆ ಸೆಕ್ಷನ್​​ಗಳ ಬಗ್ಗೆ ಕೋರ್ಟ್​ನಲ್ಲಿ ಇನ್ನೂ ಮುಂದೆ ವಾದ ನಡೆಯುತ್ತೆ. ಹೀಗಾಗಿ ಆರೋಪಿಗಳಿಗೆ ಟೆನ್ಷನ್ ಶುರುವಾಗಿದೆ.

Advertisment

darshan(1)

ಈಗಾಗಲೇ ಸುಪ್ರೀಂ ಕೋರ್ಟ್ ಜಾಮೀನು ಮೇಲ್ಮನವಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ. ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಟ್ರಯಲ್ ಬಗ್ಗೆ ಪ್ರಶ್ನಿಸಿತ್ತು. ವಿಚಾರಣೆ ವೇಳೆ ಎಷ್ಟು ದಿನದಲ್ಲಿ ಟ್ರಯಲ್ ಆರಂಭ ಮಾಡ್ತೀರಾ ಎಂದು ಪ್ರಶ್ನೆ ಮಾಡಿತ್ತು. ಆಗ ಸರ್ಕಾರದ ಪರ ವಕೀಲರು ಆರು ತಿಂಗಳಲ್ಲಿ ವಿಚಾರಣೆ ಮುಗಿಸುತ್ತೇವೆ ಎಂದು ಉತ್ತರಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಟ್ರಯಲ್ ದಿನಾಂಕ ನಿಗದಿ ಆಗುವ ಸಾಧ್ಯತೆ ಇತ್ತು. 64ನೇ ಸೆಷನ್ಸ್ ಕೋರ್ಟ್​ನಲ್ಲಿ ನ್ಯಾಯಾಧೀಶರಾದ ಐ.ಪಿ.ನಾಯ್ಕ್ ಅವರು ವಿಚಾರಣೆಯನ್ನು ಸೆಪ್ಟೆಂಬರ್‌ 9ಕ್ಕೆ ಮುಂದೂಡಿದ್ದಾರೆ. ಒಂದು ಕಡೆ ಸೆಷನ್ಸ್ ಕೋರ್ಟ್​ನಲ್ಲಿ ಟ್ರಯಲ್ ಆರಂಭ ಚಿಂತೆಯಾದ್ರೆ, ಮತ್ತೊಂದು ಕಡೆ ಸುಪ್ರೀಂ ಕೋರ್ಟ್​ನಲ್ಲಿ ಬೇಲ್ ಭವಿಷ್ಯದ ಆತಂಕ ಶುರುವಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan
Advertisment
Advertisment
Advertisment