ಸುಜಾತಾ ಭಟ್​ ಕೇಸ್​ಗೆ ಬಿಗ್​ ಟ್ವಿಸ್ಟ್.. ವಾಸಂತಿ ಅಣ್ಣ ವಿಜಯ್​ ಹೇಳಿದ್ದೇನು?

ಸುಜಾತಾ ಭಟ್​ ಕಥೆ ರಹಸ್ಯ ಬಗೆದಷ್ಟು ಬಯಲಾಗ್ತಿದ್ದು, ವಾಸಂತಿಯ ಮತ್ತಷ್ಟು ಫೋಟೋ ನ್ಯೂಸ್​ಫಸ್ಟ್​ಲಭ್ಯವಾಗಿದೆ. ಸುಜಾತಾ ಭಟ್ ಅನನ್ಯ ಎಂದು ನೀಡಿರೋ ಫೋಟೋ ವಾಸಂತಿಯದ್ದು ಎಂದು ಹೇಳಲಾಗಿತ್ತು.

author-image
Veenashree Gangani
sujatha bhat
Advertisment

ಸುಜಾತಾ ಭಟ್​ ಕಥೆ ರಹಸ್ಯ ಬಗೆದಷ್ಟು ಬಯಲಾಗ್ತಿದ್ದು, ವಾಸಂತಿಯ ಮತ್ತಷ್ಟು ಫೋಟೋ ನ್ಯೂಸ್​ಫಸ್ಟ್​ಲಭ್ಯವಾಗಿದೆ. ಸುಜಾತಾ ಭಟ್ ಅನನ್ಯ ಎಂದು ನೀಡಿರೋ ಫೋಟೋ ವಾಸಂತಿಯದ್ದು ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಪ್ರೇಯಸಿ ಗರ್ಭಿಣಿ, ಮದುವೆ ಆಗು ಎಂದಿದ್ದಕ್ಕೆ ಸುಟ್ಟೇ ಬಿಟ್ಟ ಪ್ರೇಮಿ

sujatha bhat(2)

ಇವತ್ತು ವಾಸಂತಿಯ ಮತ್ತಷ್ಟು ಫೋಟೋಗಳು ಸಿಕ್ಕಿವೆ. ವಾಸಂತಿ ಮೂಲತಃ ಕೊಡಗು ಜಿಲ್ಲೆಯವರಾಗಿದ್ದು, ಶ್ರೀವತ್ಸರನ್ನು ಪ್ರೀತಿಸಿ ಮದುವೆಯಾಗಿದ್ದರು. 2007ರಲ್ಲಿ ವಿರಾಜಪೇಟೆಯಲ್ಲಿ ವಾಸಂತಿ ನಿಧನರಾಗಿದ್ದರು. ಇನ್ನು, ವಾಸಂತಿ ಫೋಟೋ ಬಳಸಿಕೊಂಡು ಅವಳೇ ನನ್ನ ಮಗಳು ಅನನ್ಯಾ ಭಟ್ ಅಂತ ಕತೆ ಹೆಣೆದಿದ್ದ ಸುಜಾತ ಭಟ್​ ಬಂಡವಾಳ ಬಯಲಾದ ಬೆನ್ನಲ್ಲೇ ವಾಸಂತಿ ಸಹೋದರ ಬಂದಿದ್ದಾರೆ.

sujatha bhat(3)

2007ರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಸಾವನ್ನಪ್ಪಿದ್ದ ರಂಗಪ್ರಸಾದ್ ಸೊಸೆ ವಾಸಂತಿ ವೀರಾಜಪೇಟೆಯ ಹೊಳೆಯಲ್ಲಿ ಶ*ವವಾಗಿ ಪತ್ತೆಯಾಗಿದ್ದರು. ವಾಸಂತಿಯ ಫೋಟೋವನ್ನೇ ಸುಜಾತ ತನ್ನ ಮಗಳು​ ಎಂದು ಬಿಂಬಿಸಿದ್ದಳು. ಈ ಬಗ್ಗೆ ವಾಸಂತಿಯ ಸಹೋದರನೇ ಮಾಹಿತಿ ಬಿಚ್ಚಿಟ್ಟಿದ್ದಾರೆ.

sujatha bhat(1)

ಈ ಬಗ್ಗೆ ಮಾತಾಡಿದ ವಾಸಂತಿ ಅಣ್ಣ ವಿಜಯ್​, ನಮಗೆ ಬೇಸರ ಆಗುತ್ತಿದೆ ಸರ್. ಏಕೆಂದರೆ ನಮ್ಮ ತಂಗಿ ಫೋಟೋವನ್ನು ಇಟ್ಟುಕೊಂಡು ದುರ್ಬಳಕೆ ಮಾಡುತ್ತಿದ್ದಾರೆ. ನಮ್ಮ ತಂಗಿಯ ಫೋಟೋ ಇಟ್ಟುಕೊಂಡು ಅವರು ಯಾಕೆ ನನ್ನ ಮಗಳು ಮಗಳು ಅಂತ ಯಾಕೆ ಹೀಗೆ ಮಾಡಬೇಕು? ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಕುಟುಂಬಸ್ಥರೆಲ್ಲಾ ಕುಳಿತುಕೊಂಡು ಇದರ ಬಗ್ಗೆ ಮಾತಾಡುತ್ತೇವೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmasthala case
Advertisment