ವಸಂತ್ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೇಸ್

ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿರುವ ವಸಂತ್ ಗಿಳಿಯಾರ್ (Vasant Giliyar) ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್​ ದೂರು ನೀಡಿದೆ.

author-image
Ganesh Kerekuli
Vasanat giliyar
Advertisment

ಮಂಗಳೂರು: ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿರುವ ವಸಂತ್ ಗಿಳಿಯಾರ್ (Vasant Giliyar) ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್​ ದೂರು ನೀಡಿದೆ. 

ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ದೂರು

ಬೆಳ್ತಂಗಡಿ ತಾಲೂಕಿನ ಕ್ರೈಸ್ತರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ದೂರು ನೀಡಿದೆ. ಗಿಳಿಯಾರ್ ವಿರುದ್ಧ ಧರ್ಮ ಸಮುದಾಯಗಳನ್ನು ಎತ್ತಿ ಕಟ್ಟಿದ ಆರೋಪವನ್ನ ಮಾಡಲಾಗಿದೆ. ಫ್ರೀಡಂ ಪಾರ್ಕ್​​ನಲ್ಲಿ ನಡೆಸಿದ ಧರ್ಮ ಸಂರಕ್ಷಣಾ ಸಭೆಯಲ್ಲಿ ವಸಂತ್ ಗಿಳಿಯಾರ್ ಭಾಷಣ ಮಾಡಿದ್ದರು. 

ಇದನ್ನೂ ಓದಿ: ಗಣೇಶನ ಮುಳುಗಿಸಲು ಬೆಂಗಳೂರಲ್ಲಿ ಖಡಕ್ ರೂಲ್ಸ್.. ಎಲ್ಲೆಲ್ಲಿ ವಿಸರ್ಜನೆಗೆ ಅವಕಾಶ..?

ಧರ್ಮಸ್ಥಳದ ಬೆಳ್ತಂಗಡಿ ಭಾಗದಲ್ಲಿ ಕ್ರೈಸ್ತ ಮಿಷನರಿಗಳ ಪ್ರಭಾವ ಹೆಚ್ಚಾಗಿದೆ. ಮಿಷನರಿಗಳ ಪ್ರಭಾವದಿಂದ ಹಿಂದೂಗಳ ತುಳಸಿ ಕಟ್ಟೆ ಒಡೆಯಲಾಗಿದೆ. ತುಳಸಿ ಕಟ್ಟೆ ಒಡೆದು ಶಿಲುಬೆ ಇಡಲಾಗಿದೆ. 1983 ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಾರಂಭವಾದ ನಂತರ ಈ ಕೃತ್ಯ ನಿಂತಿದೆ. ಆಮಿಷಗಳಿಗೆ ಬಲಿಯಾಗದಂತೆ ಗ್ರಾಮ ಅಭಿವೃದ್ಧಿ ಯೋಜನೆ ನೋಡಿಕೊಂಡಿದೆ ಎಂದಿದ್ದಾರೆ. 

ಆ ಮೂಲಕ ಸಾರ್ವಜನಿಕವಾಗಿ ಗಿಳಿಯಾರ್ ಸುಳ್ಳು ಆರೋಪ ಮಾಡಿದ್ದಾರೆ. ಅವರ ಹೇಳಿಕೆ ವಿರುದ್ಧ ಯಾವುದೇ ಠಾಣೆಗಳಲ್ಲಿ ದೂರು ದಾಖಲಾಗಿಲ್ಲ. ದಂಗೆ ಏಳುವಂತೆ ಪ್ರೇರೇಪಿಸುವ ಉದ್ದೇಶದಿಂದ ಈ ಭಾಷಣ ಮಾಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ನಮಗೆ ಉತ್ತಮ ಅಭಿಪ್ರಾಯವಿದೆ. ಆದರೆ ಗಿಳಿಯಾರ್ ಕಟ್ಟುಕಥೆಯನ್ನ ಕಟ್ಟಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. 

ಇದನ್ನೂ ಓದಿ: ಇದು ವಿಶ್ವದ ಎರಡನೇ ಅತಿದೊಡ್ಡ ವಜ್ರ.. ಬೆಲೆ ತಿಳಿದರೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala Chenna Dharmasthala Vasant Giliyar
Advertisment